ಬೆಂಗಳೂರು: ಜಮೀನು ವಿವಾದವೊಂದರಲ್ಲಿ ವ್ಯಕ್ತಿಯೊಬ್ಬರ ಹತ್ಯೆಗೆ ಸುಫಾರಿ ನೀಡಿದ್ದ ಮಹಿಳೆ ಸೇರಿ 8 ಮಂದಿ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಸಿದ್ದಾರೆ. ಸೆಲ್ವಿ (40)ಕಾಮಾಕ್ಷಿ (59) ಚಕ್ರವರ್ತಿ (47), ತಿರುಕುಮಾರ್ (46)ಜಾನ್ (27)ಬಾಲರಾಜ್ (48), ಪ್ರಸಾದ್ (26), ಮತ್ತು ಶ್ರೀನಿವಾಸ್ ಬಾಲು ಬಂತರು.
ಆರೋಪಿಗಳಿಂದ ಮಚ್ಚು, ಲಾಂಗು, ಚಾಕು, ಡ್ರ್ಯಾಗರ್, ಪಿಸ್ತೂಲು ಮಾದರಿಯ ಲೈಟರ್, ಮಾರುತಿ ಆಲ್ಟೋ ಕಾರು, ಪೆಪ್ಪರ್ ಸ್ಪ್ರೆ ಬಾಟಲ…, 26 ಸಾವಿರ ನಗದು ಹಾಗೂ 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ತಂಡ ನಗರದ ಜೆ.ಡಿ ಮರ ಬಳಿಯ ಕುಪ್ಪಣ್ಣ ಎಂಬುವವರನ್ನು ಕೊಲೆ ಮಾಡಲು ಸಂಚು ರೂಪಿಸಿತ್ತು.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸೆಲ್ವಿ ಹಾಗೂ ಕಾಮಾಕ್ಷಿ ಎಂಬುವವರು ಬನ್ನೇರುಘಟ್ಟ ರಸ್ತೆಯ ಜಮೀನು ಮಾರಾಟಕ್ಕೆ ಮುಂದಾಗಿದ್ದರು. ಇದಕ್ಕೆ ಸ್ಥಳೀಯ ಮುಖಂಡ ಕುಪ್ಪಣ್ಣ ಎಂಬುವವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಿಗೆದ್ದ ಸೆಲ್ವಿ, ಕುಪ್ಪಣ್ಣರನ್ನು ಕೊಲೆಗೈಯಲು ತಿರುಕುಮಾರ್ ಸೇರಿದಂತೆ ಆತನ ತಂಡಕ್ಕೆ 15 ಲಕ್ಷ ರೂ.ಗಳಿಗೆ ಸುಫಾರಿ ನೀಡಿದ್ದರು ಎಂದು ಹೇಳಲಾಗಿದೆ.
ಅದರಂತೆ ಮಾ.12ರ ಬೆಳಗ್ಗೆ 11ಗಂಟೆ ಸುಮಾರಿಗೆ ಜೆ.ಡಿ.ಮರ ಸ್ಲಂ ವೃತ್ತದಲ್ಲಿದ್ದ ಕುಪ್ಪಣ್ಣ ಅವರನ್ನು ಕಾರಿನಲ್ಲಿ ಅಪಹರಿಸಿದ ಆರೋಪಿಗಳು, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಮಾರಕಾಸ್ತ್ರಗಳಿಂದ ಬೆದರಿಸಿ, ಪಿಸ್ತೂಲ್ ತೋರಿಸಿ ಹಲ್ಲೆ ನಡೆಸಿದ್ದಾರೆ.
ಅಲ್ಲದೆ, 10 ಸಾವಿರ ರೂಪಾಯಿ ಹಣ ಕಸಿದುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಕುಪ್ಪಣ್ಣ ಪೊಲೀಸರಿಗೆ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಗೌರಿ, ಗೋಪಾಲ, ರಿತಿಕ್ ಮತ್ತು ಸುಲೇಮಾನ್ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.