ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಕಾರಣದಿಂದ ಇಂದು ಒಟ್ಟು ಎಂಟು ಜನ ಸೋಂಕಿತರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 180 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಮಂಗಳೂರು ನಿವಾಸಿ 44 ವರ್ಷದ ವ್ಯಕ್ತಿ, ಮಂಗಳೂರು ನಿವಾಸಿ 56 ವರ್ಷದ ವ್ಯಕ್ತಿ, ಭದ್ರಾವತಿ ಮೂಲದ 67 ವರ್ಷದ ವ್ಯಕ್ತಿ, ಬಂಟ್ವಾಳ ಮೂಲದ 42 ವರ್ಷದ ವ್ಯಕ್ತಿ, ಭಧ್ರಾವತಿ ಮೂಲದ 67 ವರ್ಷದ ವ್ಯಕ್ತಿ, ಮಂಗಳೂರು ಮೂಲದ 75ವರ್ಷದ ವೃದ್ಧೆ, ಮಂಗಳೂರು ಮೂಲದ 65 ವರ್ಷದ ಮಹಿಳೆ, ಪುತ್ತೂರು ಮೂಲದ 61 ವರ್ಷದ ಮಹಿಳೆ ಸೇರಿದಂತೆ ಒಟ್ಟು ಎಂಟು ಜನರು ಈ ಮಹಾಮಾರಿಗೆ ಇಂದು ಜೀವತೆತ್ತಿದ್ದಾರೆ.
ಮೃತಪಟ್ಟವರೆಲ್ಲರೂ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ107ಕ್ಕೇ ಏರಿಕೆಯಾಗಿದೆ.