Advertisement

ಸ್ವ-ಸಜೀವ ದಹನಕ್ಕೆ ಯತ್ನ : ಒಂದೇ ಕುಟುಂಬದ 8 ಮಂದಿ ಜೈಲು ಪಾಲು

05:02 PM Jul 24, 2017 | udayavani editorial |

ಕೊಯಮುತ್ತೂರು : ಸ್ವಂತ ಮನೆ ನಿರ್ಮಾಣದ ಜಾಗಕ್ಕೆ ಪಟ್ಟಾ ನೀಡಲು ವರ್ಷ ಮೀರಿ ವಿಳಂಬಿಸುತ್ತಿರುವುದನ್ನು ಪ್ರತಿಭಟಿಸಲು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ, ಕೂಲಿ ಕೆಲಸದ ಒಂದೇ ಕುಟುಂಬದ ಎಂಟು ಮಂದಿ ಸ್ವ-ಸಜೀವ ದಹನಕ್ಕೆ ಯತ್ನಿಸಿ ಅಂತಿಮವಾಗಿ ಜೈಲು ಪಾಲಾದ ಘಟನೆ ವರದಿಯಾಗಿದೆ.

Advertisement

ನಗರದ ಹೊರವಲಯದ ಸೂಳೂರು ಎಂಬಲ್ಲಿನ ನಿವಾಸಿಯಾಗಿರುವ ಕೂಲಿ ಕಾರ್ಮಿಕ ಶರವಣನ್‌ ಎಂಬಾತ ವರ್ಷದ ಹಿಂದೆ ತಾನು ಮನೆ ಕಟ್ಟಿಕೊಳ್ಳುವ ಜಾಗಕ್ಕೆ ಪಟ್ಟಾ ನೀಡಬೇಕೆಂದು ಒತ್ತಾಯಿಸಿ ಸ್ವ-ಸಜೀವ ದಹನಕ್ಕೆ ಯತ್ನಿಸಿದ್ದ. ಆಗ ಪೊಲೀಸರು ಮತ್ತು ಜಿಲ್ಲಾ ಆಡಳಿತಾಧಿಕಾರಿಗಳು ಆತನನ್ನು ತಡೆದು ಜಿಲ್ಲಾಧಿಕಾರಿಗೆ ಆತನ ದೂರಿನ ಪೂರ್ತಿ ವಿವರ ನೀಡಿ ಆತನಿಗೆ ಪಟ್ಟಾ ದೊರಕಿಸಿಕೊಡುವ ಭರವಸೆ ನೀಡಿದ್ದರು. 

ಅದಾಗಿ ವರ್ಷವೊಂದು ಸಂದರೂ ಶರವಣನ್‌ಗೆ ಪಟ್ಟಾ ಸಿಗಲಿಲ್ಲ. ಇಂದು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಅಹವಾಲು ದಿನವಾಗಿತ್ತು. ಹಾಗಾಗಿ ಶರವಣನ್‌ ಜತೆಗೆ ಪತ್ನಿ ಸಹಿತ ಆತನ ಮನೆಯ 11 ಸದಸ್ಯರು ಬಂದಿದ್ದರು. ಆದರೂ ಪಟ್ಟಾ ಸಿಗುವ ಸಾಧ್ಯತೆ ಕಂಡು ಬಾರದಿದ್ದಾಗ ಶರವಣನ್‌ ಸಹಿತ ಒಟ್ಟು ಎಂಟು ಮಂದಿ ಸ್ವ-ಸಜೀವ ದಹನಕ್ಕೆ ಮುಂದಾದರು. 

ಪೊಲೀಸರು ಕೂಡಲೇ ಅವರ ಮೇಲೆರಗಿ ದುರಂತವನ್ನು ತಪ್ಪಿಸಿ ಬಳಿಕ ಅವರನ್ನು ಜೈಲಿಗೆ ಕರೆದೊಯ್ದರು. 

Advertisement

Udayavani is now on Telegram. Click here to join our channel and stay updated with the latest news.

Next