Advertisement

ಟೆಂಪೋ-ಟ್ರಕ್‌ ಮುಖಾಮುಖೀ ಢಿಕ್ಕಿ : ಎಂಟು ಸಾವು; ಮೂವರ ಸ್ಥಿತಿ ಗಂಭೀರ

04:40 PM Jul 07, 2019 | Sathish malya |

ಔರಾಯಿಯಾ, ಉತ್ತರ ಪ್ರದೇಶ : ಇಂದು ಶನಿವಾರ ಇಲ್ಲಿ ನಸುಕಿನ ವೇಳೆ ಟೆಂಪೋ ಮತ್ತು ಟ್ರಕ್‌ ನಡುವೆ ನಡೆದ ನೇರ ಢಿಕ್ಕಿಯಲ್ಲಿ ಎಂಟು ಮಂದಿ ಮೃತಪಟ್ಟು ಇತರ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

Advertisement

ಬೆಳಗ್ಗೆ 6.30ರ ಸುಮಾರಿಗೆ ದಿಬಿಯಾಪುರ-ಬೇಲಾ ರಸ್ತೆಯಲ್ಲಿ ತನ್ನ ಮುಂದಿದ್ದ ಟೆಂಪೋವನ್ನು ಹಿಂದಿಕ್ಕಲು ಯತ್ನಿಸಿ ಮುಂದಕ್ಕೆ ಧಾವಿಸಿದ ಟೆಂಪೋ, ಎದುರುಗಡೆಯಿಂದ ಧಾವಿಸಿ ಬರುತ್ತಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆಯಿತು.

ಪರಿಣಾಮವಾಗಿ ಟೆಂಪೋದಲ್ಲಿದ್ದವರ ಪೈಕಿ ಎಂಟು ಮಂದಿ ಸ್ಥಳದಲ್ಲೇ ಸಾವಪ್ಪಿದರು. ಇತರ ಮೂವರು ಗಂಭೀರವಾಗಿ ಗಾಯಗೊಂಡರು ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಸುನೀತಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಘಟನೆ ಬಗ್ಗೆ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next