Advertisement

ದುಬೈನಲ್ಲಿ ಭೀಕರ ಬಸ್‌ ಅಪಘಾತ; 12 ಭಾರತೀಯರ ಸಾವು

10:19 AM Jun 08, 2019 | Vishnu Das |

ದುಬೈ: ಇಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರಬಸ್‌ ಅವಘಾತದಲ್ಲಿ 12 ಮಂದಿ ಭಾರತೀಯರು ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ.

Advertisement

ಈದ್‌ ರಜೆಯ ಬಳಿಕ ಓಮನ್‌ನಿಂದ ಬಸ್‌ ಮರಳುತ್ತಿತ್ತು, ಬಸ್‌ನಲ್ಲಿದ್ದ 31 ಮಂದಿಯ ಪೈಕಿ 17 ಮಂದಿ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಾರತೀಯ ರಾಯಭಾರಿ ಈ ಬಗ್ಗೆಪ್ರತಿಕ್ರಿಯೆ ನೀಡಿದ್ದು, ಇದುವರೆಗೆ 8 ಮಂದಿ ಭಾರತೀಯರು ಸಾವನ್ನಪ್ಪಿರುವುದು ಖಚಿತವಾಗಿದೆ, ಮೃತರ ಕುಟುಂಬ ಸದಸ್ಯರೊಂದಿಗೆ ರಾಯಭಾರ ಕಚೇರಿ ಸಂಪರ್ಕ ಸಾಧಿಸಿದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು ಭಾರತೀಯರು ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ, ಮೂವರಿಗೆ ಚಿಕಿತ್ಸೆ ಮುಂದುವರಿದಿದೆ.

ಹೆಚ್ಚಿನ ವಿವರಗಳನ್ನುನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next