Advertisement
ಕುಡ್ಬೇರು ಕಟ್ಟೆಜೆಡ್ಡು ಕಾಲನಿಯಲ್ಲಿ ನೆಲೆಸಿರುವ ಪ. ಜಾತಿ, ಪಂಗಡಕ್ಕೆ ಸೇರಿದ ಈ 8 ಕುಟುಂಬಗಳು ನಿವೇಶನದ ಹಕ್ಕುಪತ್ರಕ್ಕಾಗಿ ಕಳೆದ 4-5 ದಶಕಗಳಿಂದ ವಿವಿಧ ಕಚೇರಿಗಳಿಗೆ ಅಲೆದಾಟ ನಡೆಸಿವೆ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆಲ್ಲ ಮನವಿ ಮಾಡಿದರೂ ಯಾವುದೇಪ್ರಯೋಜನ ಆಗಿಲ್ಲ.
ಈ ಬಗ್ಗೆ ಅಂಪಾರು ಗ್ರಾಮಕರಣಿಕರ ಗಮನಕ್ಕೆ ತಂದರೆ ನೀವು ನೆಲೆಸಿರುವ ಪ್ರದೇಶವು ಮೀಸಲು ಅರಣ್ಯ ಪ್ರದೇಶ
ದಲ್ಲಿ ಬರುತ್ತದೆ. ಹಾಗಾಗಿ ನಿವೇಶನದ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಹಿಂದೊಮ್ಮೆ ಸರ್ವೇ ಮಾಡಿದಾಗ ಈ ಪ್ರದೇಶವು ಮೀಸಲು ಅರಣ್ಯ ಪ್ರದೇಶದಡಿ ಬರುವುದಿಲ್ಲ ಎಂದು ಗೊತ್ತಾಗಿದೆ. ಆದರೂ ಹಕ್ಕುಪತ್ರ ನೀಡಲು ಸತಾಯಿಸುತ್ತಿದ್ದಾರೆ ಎನ್ನುತ್ತಾರೆ ಅಲ್ಲಿನ ನಿವಾಸಿ ಪ್ರಕಾಶ್. ಸೌಕರ್ಯ ಪಡೆಯಲು ಅಡ್ಡಿ
ಈ 8 ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು, ನಿವೇಶನವಿಲ್ಲದ ಕಾರಣ ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಆಶ್ರಯ ಯೋಜನೆ, ವಿದ್ಯುತ್, ನೀರಾವರಿ ಸೌಲಭ್ಯ ಸೇರಿದಂತೆ ಬಹುತೇಕ ಎಲ್ಲ ಸೌಕರ್ಯಗಳಿಂದ ಈ ಬಡ ಕುಟುಂಬಗಳು ವಂಚಿತ ವಾಗುವಂತಾಗಿವೆ. ಈ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವೂ ಸಿಗುತ್ತಿಲ್ಲ.
Related Articles
ಅಂಪಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಈ 8 ಕುಟುಂಬಗಳು ಮಾತ್ರವಲ್ಲದೆ ಸ್ವಂತ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರ ಪೈಕಿ ಈ ವರೆಗೆ 161 ಮಂದಿಗೆ ಇನ್ನೂ ಹಕ್ಕುಪತ್ರ ಸಿಗಲು ಬಾಕಿಯಿದೆ.
Advertisement
ಜಂಟಿ ಸರ್ವೇಗೆ ಸೂಚನೆಆ 8 ಕುಟುಂಬಗಳು ನೆಲೆಸಿರುವ ಪ್ರದೇಶ ಮೀಸಲು ಅರಣ್ಯ ಪ್ರದೇಶದಡಿ ಬರುತ್ತದೆ ಎನ್ನುವುದು ಹಿಂದೆ ಮಾಡಿದ ಸರ್ವೇಯಿಂದ ತಿಳಿದಿದ್ದು, ಈ ಬಗ್ಗೆ ಕೆಲವು ಗೊಂದಲಗಳು ಇರುವುದರಿಂದ ಈಗ ಅಲ್ಲಿನ ನಿವಾಸಿಗಳ ಮನವಿ ಮೇರೆಗೆ ತಹಶೀಲ್ದಾರ್ ಹಾಗೂ ಸರ್ವೇಯರ್ ಜತೆ ಮಾತನಾಡಿದ್ದು, ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಲು ಸೂಚನೆ ನೀಡಿದ್ದೇನೆ. ಆ ಕುಟುಂಬಗಳಿಗೆ ಹಕ್ಕುಪತ್ರ ಒದಗಿಸುವ ಪ್ರಯತ್ನ ಮಾಡುತ್ತೇನೆ.
-ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು, ಶಾಸಕರು ಮೀಸಲು ಅರಣ್ಯ ಪ್ರದೇಶ
ಈ ಕುಡ್ಬೇರು ಕಟ್ಟೆಜೆಡ್ಡು ಕಾಲನಿಯಲ್ಲಿ ಕೇವಲ 2 ಸೆಂಟ್ಸ್ ಮಾತ್ರ ಸರಕಾರಿ ಜಾಗವಿದ್ದು, ಬಾಕಿ ಎಲ್ಲ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ್ದಾಗಿದೆ. ಈ ಬಗ್ಗೆ ಶಾಸಕರು ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೇಗೆ ಸೂಚನೆ ನೀಡಿದ್ದಾರೆ. ಈ ಕಾರ್ಯ ಶೀಘ್ರ ಆಗಬಹುದು.
-ಮಧುಸೂದನ್, ಪಿಡಿಒ, ಅಂಪಾರು ಗ್ರಾ.ಪಂ.