Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಕಾರ್ಮಿಕ ಕಲ್ಯಾಣ ನಿಧಿಯ ಬಗ್ಗೆ 10 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಲಾಗಿದೆ.
– ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ಮಸೂದೆ-2024
ಇದರ ಪ್ರಕಾರ ಕಾರ್ಮಿಕ ಕಲ್ಯಾಣ ನಿಧಿಗೆ ಕಾರ್ಮಿಕರು, ಸರಕಾರ ಹಾಗೂ ಕಂಪೆನಿಗಳಿಂದ ನೀಡುತ್ತಿದ್ದ ವಂತಿಕೆ ಪ್ರಮಾಣ ಹೆಚ್ಚಿಸಲಾಗಿದೆ. ಹಿಂದಿನ ನಿಯಮದ ಪ್ರಕಾರ ಕಾರ್ಮಿಕ-20 ರೂ. ಸರಕಾರ 20 ರೂ. ಹಾಗೂ ಕಂಪೆನಿ 40 ರೂ.ನ್ನು ವಾರ್ಷಿಕವಾಗಿ ಈ ಕಲ್ಯಾಣ ನಿಧಿಗೆ ನೀಡಬೇಕಿತ್ತು. ಆದರೆ ಈಗ ಕಾರ್ಮಿಕ 50 ರೂ. ಸರಕಾರ 50 ರೂ. ಹಾಗೂ ಕಂಪೆನಿ 100 ರೂ. ವಂತಿಗೆ ನೀಡಬೇಕು. ಇದರಿಂದ ವಾರ್ಷಿಕ 100 ಕೋಟಿ ರೂ. ನಿಧಿ ಸಂಗ್ರಹಣೆ ಗುರಿ ಹೊಂದಲಾಗಿದೆ. – ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣ ನಿಯಂತ್ರಣ) (ತಿದ್ದುಪಡಿ) ಮಸೂದೆ-2024ಕೊರೆದ ಕೊಳವೆ ಬಾವಿಗಳು ವಿಫಲವಾದಾಗ ಅವುಗಳನ್ನು ಸಮರ್ಪಕವಾಗಿ ಮುಚ್ಚದೆ ಇರುವುದರಿಂದ ಆಗುವ ಮಾನವ ಹಾನಿ ತಡೆಯಲು ಈ ಮಸೂದೆ. ವಿಫಲ ಕೊಳವೆ ಬಾವಿ ನಿರ್ವಹಣೆ ಮಾಡದ ಜಮೀನು ಮಾಲಕ ಹಾಗೂ ಬೋರ್ ಕೊರೆದವರಿಗೆ ಇದರ ಪ್ರಕಾರ 1 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡಕ್ಕೆ ಅವಕಾಶ.
– ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಮಸೂದೆ-2024 ಬಸವನಬಾಗೇವಾಡಿ ಸಮಗ್ರ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಆಕರ್ಷಣೆಗೆ
– ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ-2024 ಉಳಿದ ಖಾಸಗಿ ವಿವಿಗಳ ರೀತಿ ಚಾಣಕ್ಯ ವಿ.ವಿ.ಗೆ ಸರಕಾರದ ಪ್ರತಿನಿಧಿಯಾಗಿ ಸದಸ್ಯರ ನಾಮ ನಿರ್ದೇಶನಕ್ಕೆ ಅವಕಾಶವಿರಲಿಲ್ಲ. ಹೀಗಾಗಿ ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಲು ತಿದ್ದುಪಡಿ.
– ಕರ್ನಾಟಕ ರಾಜ್ಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ-2024
ರಾಜ್ಯಪಾಲರ ಬದಲು ಮುಖ್ಯ ಮಂತ್ರಿಯನ್ನು ಈ ವಿಶ್ವವಿದ್ಯಾನಿಲಯದ ಕುಲಪತಿ ಮಾಡುವುದಕ್ಕೆ ಅವಕಾಶ
– ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆ-2024 ಜಿಎಸ್ಟಿ ಸಂಗ್ರಹ ಹಾಗೂ ದಂಡಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಕಾಯಿದೆಗೆ ಪೂರಕವಾಗಿ ತಿದ್ದುಪಡಿ.
– ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (2ನೇ ತಿದ್ದುಪಡಿ) ಮಸೂದೆ-2024 ಆಸ್ತಿ ತೆರಿಗೆ ಬಾಕಿ ಒಂದು ಬಾರಿ ಇತ್ಯರ್ಥಪಡಿಸುವ ಸಮಯಾವಧಿ ವಿಸ್ತರಣೆಗೆ ಹೊರಡಿಸಿದ್ದ ಅಧ್ಯಾದೇಶಕ್ಕೆ ಕಾಯಿದೆಯ ಸ್ವರೂಪ
– ಕರ್ನಾಟಕ ಪ್ರವಾಸೋದ್ಯಮ ರೋಪ್ವೇಸ್ ಮಸೂದೆ-2024 ರಾಜ್ಯ ಸರಕಾರ ರೋಪ್ ವೇ ನಿರ್ಮಾಣ ಮಾಡಲು ಈಗಾಗಲೇ ಗುರುತಿಸಿರುವ 12 ತಾಣಗಳಲ್ಲಿ ಸುರಕ್ಷೆ ಹಾಗೂ ಭದ್ರತೆಯನ್ನು ನಿಗದಿ ಮಾಡುವುದಕ್ಕಾಗಿ ಮಸೂದೆ.
Related Articles
ಬೆಂಗಳೂರು, ನ. 28: ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನ (ಎಡಿಬಿ) 2,500 ಕೋಟಿ ರೂ. ಬಾಹ್ಯ ಸಹಯೋಗದೊಂದಿಗೆ ರಾಜ್ಯದ 500 ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಪರಿವರ್ತಿಸುವ ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ. 2025ರಿಂದ 2029ರ 4 ವರ್ಷದ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಮಾದರಿ ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.
Advertisement