Advertisement

ಗಂಗೊಳ್ಳಿಯಲ್ಲಿ ವಿರೋಧ: ಭಟ್ಕಳದ 8 ದೋಣಿಗಳು ವಾಪಸ್‌

01:27 PM May 08, 2020 | mahesh |

ಗಂಗೊಳ್ಳಿ: ಅನುಮತಿಯಿಲ್ಲದೆ ಭಟ್ಕಳದ 8 ಪರ್ಸಿನ್‌ ಬೋಟುಗಳು ಗುರುವಾರ ಗಂಗೊಳ್ಳಿಯ ಮೀನುಗಾರಿಕಾ ಬಂದರಿಗೆ ಬಂದಿದ್ದು, ಸ್ಥಳೀಯ ಮೀನುಗಾರರ, ಜನರ ಭಾರೀ ವಿರೋಧದ ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ಭಟ್ಕಳಕ್ಕೆ ವಾಪಸ್‌ ಕಳುಹಿಸಿದ ಪ್ರಸಂಗ ನಡೆಯಿತು.

Advertisement

ಬೋಟುಗಳಲ್ಲಿ 21 ಮೀನುಗಾರರಿದ್ದು, ಅವರಲ್ಲಿ ಭಟ್ಕಳ ಮಾತ್ರವಲ್ಲದೆ ಉಪ್ಪುಂದ, ಒಡಿಶಾ ಮೂಲದವರೂ ಇದ್ದರು. ಭಟ್ಕಳದಲ್ಲಿ ಹೆಚ್ಚಿನ ಸಂಖ್ಯೆಯ ಕೊರೊನಾ ಪ್ರಕರಣಗಳು ಕಂಡುಬಂದಿರುವ ಕಾರಣ ಸ್ಥಳೀಯರು ಅವರನ್ನು ಒಳಗೆ ಬಿಟ್ಟುಕೊಳ್ಳಲು ಒಪ್ಪಲಿಲ್ಲ.

ಮಾಹಿತಿ ತಿಳಿದ ತತ್‌ಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಗಂಗೊಳ್ಳಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಎಸ್‌ಐ ಸಂದೀಪ್‌ ವಿಚಾರಿಸಿದ್ದು, ಅವರಲ್ಲಿ ಯಾವುದೇ ಅನುಮತಿ ಪತ್ರ ಇರದ ಕಾರಣ, ಭಟ್ಕಳಕ್ಕೆ ಮರಳಿ ಕಳುಹಿಸಲಾಯಿತು.

ಭಟ್ಕಳದ ಬಂದರಿನಲ್ಲಿ ಜಾಗದ ಕೊರತೆಯಿಂದ ಪ್ರತಿ ವರ್ಷ ಮೀನುಗಾರಿಕಾ ಋತುವಿನ ಕೊನೆಯಲ್ಲಿ ಕೆಲವು ಬೋಟುಗಳು ಗಂಗೊಳ್ಳಿ ಬಂದರಿಗೆ ಬರುತ್ತವೆ. ಆದರೆ ಈಗ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಜಿಲ್ಲಾಧಿಕಾರಿ ಅನುಮತಿ ಅಗತ್ಯ. ಹಾಗಾಗಿ ಜಿಲ್ಲಾಧಿಕಾರಿ ಗಳ ನಿರ್ದೇಶನದಂತೆ ವಾಪಸು ಕಳುಹಿಸಲಾಗಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next