Advertisement

ಓವರ್‌ ಟೈಂಗೆ ಕೇಂದ್ರದ ಕತ್ತರಿ

12:45 PM Jun 27, 2018 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿನ ಆಪರೇಷನಲ್‌ ಸಿಬ್ಬಂದಿ ಹಾಗೂ ಕೈಗಾರಿಕಾ ಕ್ಷೇತ್ರದ ನೌಕರರನ್ನು ಹೊರತುಪಡಿಸಿ ಇತರ ವಲಯಗಳ ಯಾವುದೇ ನೌಕರರಿಗೆ ಈವರೆಗೆ ನೀಡಲಾಗುತ್ತಿರುವ ಹೆಚ್ಚುವರಿ ಸೇವಾ ಭತ್ಯೆಯನ್ನು (ಒ.ಟಿ. ಎ) ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  

Advertisement

ಜತೆಗೆ, ಹೆಚ್ಚುವರಿ ಸೇವಾ ಭತ್ಯೆಯನ್ನು ಬಯೋಮೆಟ್ರಿಕ್‌ ದಾಖಲೆಗಳನುಸಾರವಷ್ಟೇ ನೀಡಲೂ ತೀರ್ಮಾನಿಸಿದೆ. ಏಳನೇ ವೇತನ ಆಯೋಗದ ಶಿಫಾರಸು ಮೇರೆಗೆ ಕೇಂದ್ರ ಸಿಬ್ಬಂದಿ ಸಚಿವಾಲಯ ಈ ಕುರಿತಂತೆ ಆದೇಶ ಹೊರಡಿಸಿದೆ ಎಂದು ವೆಚ್ಚ ಇಲಾಖೆ ತಿಳಿಸಿದೆ. ಇದರ ಜತೆಗೆ, 1991ರಲ್ಲಿ ನಿಗದಿಯಾಗಿದ್ದ ಒಟಿಎ ದರವನ್ನು ಪರಿಷ್ಕರಿಸದೇ ಯಥಾಸ್ಥಿತಿಯಲ್ಲೇ ಮುಂದುವರಿಸಲು ತೀರ್ಮಾನಿಸಲಾಗಿದೆ.

ಸಚಿವರು ಹಾಗೂ ಪತ್ರಾಂಕಿತ ಅಧಿಕಾರಿಗಳ ಮಟ್ಟಕ್ಕಿಂತ ಕೆಳಗಿನ ಎಲ್ಲಾ ಸರ್ಕಾರಿ ನೌಕರರನ್ನು ಆಪರೇಷನಲ್‌ ಸಿಬ್ಬಂದಿಯೆಂದು ಪರಿಗ 
ಣಿಸಿರುವುದಾಗಿ ಸ್ಪಷ್ಟಪಡಿಸಲಾಗಿದೆ. ಈ ಆದೇಶವು ಕೇಂದ್ರದ ಎಲ್ಲಾ ಸಚಿವಾಲಯಗಳು ಹಾಗೂ ಸರ್ಕಾರದ ಸಹಯೋಗಿ ಸಂಸ್ಥೆಗಳಿಗೂ
ಅನ್ವಯವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next