ನವ ದೆಹಲಿ : ಕೇಂದ್ರ ನಾಗರಿಕ ಸೇವೆಗಳ 1972 ರ ನಿಯಮಗಳ ವ್ಯಾಪ್ತಿಗೆ ಒಳಪಟ್ಟಿರುವ ಕೇಂದ್ರ ಸರ್ಕಾರಿ ನೌಕರರಾಗಿ ದುಡಿಯುತ್ತಿರುವ ಗಂಡ ಮತ್ತು ಹೆಂಡತಿ ಇಬ್ಬರೂ ಮೃತಪಟ್ಟರೆ, ಅವರ ಮರಣದ ನಂತರ ಅವರ ಮಕ್ಕಳಿಗೆ ಎರಡು ಕುಟುಂಬ ಪಿಂಚಣಿ ನೀಡಲಾಗುತ್ತದೆ.
ಈ ಪಿಂಚಣಿಯ ಗರಿಷ್ಟ ಮಿತಿ 1.25 ಲಕ್ಷ ರೂ ಆಗಿರಲಿದ್ದು ಇದರ ಪರಯೋಜನವನ್ನು ಪಡೆಯಬೇಕಾದಲ್ಲಿ ಕೆಲವು ನಿಯಮಗಳನ್ನು ಪಾಲಿಸಲೇಬೇಕಿದೆ. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳ ಜೊತೆ ಅವರ ಕುಟುಂಬಗಳಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸಲಿದೆ.
ಇದನ್ನೂ ಓದಿ : ಕೇಂದ್ರದಿಂದ ಇಂದು ಕರ್ನಾಟಕಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆ : ಸುಧಾಕರ್
ಕೇಂದ್ರ ನಾಗರಿಕ ಸೇವೆಗಳ ನಿಯಮ 54 ರ ಉಪ ನಿಯಮ (11) ರ ಪ್ರಕಾರ, ಗಂಡ ಮತ್ತು ಹೆಂಡತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಈ ನಿಯಮಕ್ಕೆ ಒಳಪಟ್ಟಿದ್ದರೇ, ಅವರ ಮರಣದ ನಂತರ ಮಕ್ಕಳು ಇಬ್ಬರೂ ಪೋಷಕರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಇನ್ನು, ಪೋಷಕರಲ್ಲಿ ಒಬ್ಬರು ಸೇವೆಯ ಸಮಯದಲ್ಲಿ ಅಥವಾ ನಿವೃತ್ತಿಯ ನಂತರ ಮೃತಪಟ್ಟರೆ, ಪಿಂಚಣಿಯನ್ನು ಇನ್ನೊಬ್ಬರಿಗೆ ಅಂದರೆ ಪತಿ ಅಥವಾ ಪತ್ನಿಗೆ ನೀಡಲಾಗುತ್ತದೆ. ಇಬ್ಬರೂ ಮರಣ ಹೊಂದಿದ ನಂತರ, ಅವರ ಮಕ್ಕಳಿಗೆ ಎರಡೂ ಪಿಂಚಣಿ ಸಿಗುತ್ತದೆ ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಡಿಪಿಪಿಡಬ್ಲ್ಯ(Department of Pension & Pensioners Welfare) ಅಧಿಸೂಚನೆಯ ಪ್ರಕಾರ, ಪಿಂಚಣಿ ಮಿತಿಯನ್ನು 2 ರೀತಿಯಲ್ಲಿ ಬದಲಾಯಿಸಲಾಗಿದೆ. ಅಂದರೆ ತಿಂಗಳಿಗೆ 1.25 ಲಕ್ಷ ರೂ. ಮತ್ತು 75,000 ರೂ ಎಂದು ಮಿತಿಗೊಳಿಸಲಾಗಿದೆ.
ಇದನ್ನೂ ಓದಿ : 5ಜಿ ತಂತ್ರಜ್ಞಾನದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟಿ ಜ್ಯೂಹಿ ಚಾವ್ಲಾ