ಉಡುಪಿ: ಭಾರತೀಯ ಜ್ಞಾನಪೀಠ 78ನೇ ವರ್ಷದ ವರ್ಷಾಚರಣೆ ಹಿನ್ನೆಯಲ್ಲಿ ವೆಬಿನಾರ್ ಚರ್ಚಾ ಸರಣಿಯ “ವಾಕ್” ಇದರ ಅಂತರ್ಗತ ಬಹು ಜನಪ್ರಿಯ ಪುಸ್ತಕ ಪ್ರಭ ಕಿರಣ್ ಅವರ “ಭಾರತ ನಾಮ ನಮ್ಮ ದೇಶಕ್ಕೆ ಭಾರತ ಹೆಸರು ಯಾವಾಗ ಆರಂಭವಾಯಿತು, ಹೇಗೆ ಬಂತು ಎಂಬ ಇತಿಹಾಸ ಪುರಾಣ ಅವಲೋಕನದ ವೆಬಿನಾರ್ ಫೆಬ್ರವರಿ 5ರ ಸಂಜೆ 7.30ಕ್ಕೆ ನಡೆಯಲಿದೆ.
ಇದನ್ನೂ ಓದಿ:ಮೈಸೂರಿನಲ್ಲೂ ಹಿಜಾಬ್ ವಿವಾದ: ‘ಐ ಲವ್ ಹಿಜಾಬ್’ ಪ್ಲೇಕಾರ್ಡ್ ಪ್ರದರ್ಶಿಸಿದ ವಿದ್ಯಾರ್ಥಿನಿಯರು
‘ವಾಕ್” ಸರಣಿಯ ವೆಬಿನಾರ್ ಅಧ್ಯಕ್ಷತೆಯನ್ನು ಮೂಡುಬಿದಿರೆಯ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಮಹಾ ಸ್ವಾಮೀಜಿ ವಹಿಸಲಿದ್ದಾರೆ. ದೇಶದ ಪ್ರಸಿದ್ಧ ವಿದ್ವಾಂಸರಾದ ಪ್ರೊ.ಪ್ರಕಾಶ್ ಮಣಿ ತ್ರಿಪಾಠಿ, ಡಾ.ಪಂಕುರಿ ಜೋಶಿ, ಡಾ. ಸುಮೀತ್ ಜೈನ್, ಡಾ. ಸಂಜಯ್ ಸೋನ್ ವಾಣೆ ಸೇರಿದಂತೆ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾರ್ವಜನಿಕರು ಕೂಡಾ ವೆಬಿನಾರ್ ಮೂಲಕ ವೀಕ್ಷಿಸಬಹುದಾಗಿದೆ ಎಂದು ಮೂಡುಬಿದಿರೆ ರಮರಾಣಿ ಶೋಧ ಸಂಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.