Advertisement
ಎಪ್ರಿಲ್‌ನ ಆರಂಭದಿಂದಲೇ ನಿರ್ಬಂಧಗಳು ಜಾರಿಯಾಗಿವೆ. ಸದ್ಯಕ್ಕೆ ಈ ನಿರ್ಬಂಧಗಳನ್ನು ಹಿಂಪಡೆಯುವ ಸಾಧ್ಯತೆ ತೀರಾ ಕಡಿಮೆ. ಮೇ ತಿಂಗಳಲ್ಲಿ ಕೊರೊನಾ ಉಚ್ಛಾ†ಯ ಮಟ್ಟಕ್ಕೆ ಹೋಗುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಮೇ ತಿಂಗಳೂ ಕೂಡ ಇದೇ ರೀತಿ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿವೆ. ಇಂಥ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗಳಿಂದ ವಾರಕ್ಕೆ ಸರಾಸರಿ 9 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗುತ್ತದೆ. ಮೇ ಅಂತ್ಯದ ವರೆಗೆ ಹೀಗೇ ಮುಂದುವರಿದರೆ 78,784 ಕೋಟಿ ರೂ. ನಷ್ಟವಾಗುತ್ತದೆ. ಅಂದರೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಗೆ ಶೇಕಡಾ 0.34 ಅಂಶಗಳಷ್ಟು ನಷ್ಟವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
Related Articles
Advertisement
ಈ ನಡುವೆ ಗುಜರಾತ್‌ನಲ್ಲಿ ಕೊರೊನಾ ಸೋಂಕು ಅಧಿಕವಾಗುತ್ತಿದ್ದಂತೆ ರಾಜ್ಯಾದ್ಯಂತ ಎಲ್ಲಾ ಶಾಲೆ-ಕಾಲೇಜುಗಳನ್ನು ಅನಿರ್ದಿಷ್ಟಾ ವಧಿವರೆಗೆ ಮುಚ್ಚುವಂತೆ ಸರಕಾರ ಆದೇಶಿಸಿದೆ. ಮತ್ತೂಂದೆಡೆ, ಹರ್ಯಾಣದಲ್ಲಿ ಅನಿರ್ದಿ ಷ್ಟಾವಧಿವರೆಗೆ ನೈಟ್ ಕರ್ಫ್ಯೂ ಜಾರಿಗೊಳಿ ಸಲಾಗಿದೆ. ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧ ಚಾಲ್ತಿಯಲ್ಲಿರಲಿದೆ.
ಎಲ್ಲರಿಗೂ ಲಸಿಕೆ ಸಿಗಲಿ: ದೇಶದಲ್ಲಿ ನಡೆಯು ತ್ತಿರುವ ಕೊರೊನಾ ಲಸಿಕೆ ಅಭಿಯಾನದ ಪ್ರಯೋಜನ ಎಲ್ಲಾ ವಯಸ್ಸಿನವರಿಗೂ ಸಿಗುವಂತೆ ಕೋರಿ, ತಹಸೀನ್ ಪೂನಾವಾಲಾ ಎಂಬುವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸರಕಾರ, ಕೇವಲ 45 ವರ್ಷ ದಾಟಿದವರಿಗಷ್ಟೇ ಲಸಿಕೆ ನೀಡುತ್ತಿದೆ. ಕೊರೊನಾ ಸಾಂಕ್ರಾಮಿಕವು ಅತಿ ವೇಗವಾಗಿ ಎಲ್ಲೆಡೆಯೂ ಹರಡುತ್ತಿರು ವುದರಿಂದ ಲಸಿಕೆಯ ಸೌಲಭ್ಯ ಎಲ್ಲರಿಗೂ ಸಿಗುವಂತಾಗಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಲಾಕ್‌ಡೌನ್ ನಷ್ಟ ತಪ್ಪಿಸಲು ಎಲ್ಲರೂ ಕೈ ಜೋಡಿಸಿಇಡೀ ದೇಶದ ಆರ್ಥಿಕತೆ ಕುಸಿದರೆ ಜನಜೀವನ ಹೇಗಾಗುತ್ತದೆ ಎಂಬುದಕ್ಕೆ ಕಳೆದ ವರ್ಷದ ಲಾಕ್‌ಡೌನ್ ಅವಧಿಯೇ ಪಾಠ ಕಲಿಸಿಕೊಟ್ಟಿದೆ. ಹಾಗಾಗಿ, ನಿರ್ಬಂಧ ಗಳು ತೆರವಾಗಬೇಕಾದರೆ ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಕೊರೊನಾ ನಿರ್ಮೂಲನೆಗಾಗಿ ಸರಕಾರಗಳ ಜತೆಗೆ ಕೈ ಜೋಡಿಸ ಬೇಕು ಎಂದು ತಜ್ಞರು ಹೇಳಿದ್ದಾರೆ. ಸರಕಾರ ಕೂಡ ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಿ, ಲಾಕ್‌ಡೌನ್ ತಪ್ಪಿಸಿಕೊಳ್ಳಲು ಶತಾಯ ಗತಾಯ ಯತ್ನಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.