Advertisement

ಸಿಂಪಲ್ ‍ಸ್ಟಾರ್ ಬರ್ತ್ ಡೇಗೆ ಬಂಪರ್ ಉಡುಗೊರೆ:’777 ಚಾರ್ಲಿ’ಚಿತ್ರದ ಟೀಸರ್ ಇಲ್ಲಿದೆ ನೋಡಿ

01:32 PM Jun 06, 2021 | Team Udayavani |

ಬೆಂಗಳೂರು: ಚಂದನವನದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಸ್ಯಾಂಡಲ್ವುಡ್ ನ  ಈ ನಾರಾಯಣನಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

Advertisement

ಉಳಿದವರ ಕಂಡಂತೆ ಹಾಗು ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಪ್ರತಿಭೆಯಾಗಿ ಕಾಣಿಸಿಕೊಂಡ ರಕ್ಷಿತ್ ಅವರಿಗೆ ಇಂದು ಹುಟ್ಟುಹಬ್ಬದ ನಿಮಿತ್ತ ಹಲವು ಉಡುಗೊರೆಗಳು ಸಿಕ್ಕಿವೆ. ಅಭಿಮಾನಿಗಳಿಂದ ಕಾಮನ್ ಡಿಪಿ ರಿಲೀಸ್ ಆಗಿದೆ. ಇವರು ನಟಿಸುತ್ತಿರುವ ಸಿನಿಮಾಗಳಾದ ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ ಹೊಸ ಪೋಸ್ಟರ ಬಿಡುಗಡೆ ಮಾಡಿದೆ. ಹಾಗೂ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ‘777 ಚಾರ್ಲಿ’ ಚಿತ್ರದ ಟೀಸರ್ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಕೆ. ಕಿರಣ್ ರಾಜ್ ‘777 ಚಾರ್ಲಿ’ ಸಿನಿಮಾಗೆ ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಸಂಗೀತಾ ಶೃಂಗೇರಿ ಚಾರ್ಲಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ( Rakshit Shetty Birthday) ಪ್ರಯುಕ್ತ ಇಂದು 777 ಚಾರ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ.

ಪಂಚಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ‘777 ಚಾರ್ಲಿ ‘ ಸಿನಿಮಾದ ಟೀಸರ್ ಅನ್ನು ಆಯಾ ಭಾಷೆಯ ಖ್ಯಾತ ನಟರು, ನಿರ್ದೇಶಕರು ರಿಲೀಸ್ ಮಾಡಿದ್ದಾರೆ. ಮಲೆಯಾಳಂ ಭಾಷೆಯ ಟೀಸರ್ ಅನ್ನು ಖ್ಯಾತ ಮಾಲಿವುಡ್ ನಟ ಪೃಥ್ವಿರಾಜ್, ತೆಲುಗು ಟೀಸರ್ ಅನ್ನು ಟಾಲಿವುಡ್ ನಟ ನಾನಿ, ತಮಿಳು ಟೀಸರ್ ಅನ್ನು ಕಾಲಿವುಡ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಬಿಡುಗಡೆಗೊಳಿಸಿದ್ದಾರೆ.

ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅವರ ಪರಂವಾ ಪ್ರೊಡಕ್ಷನ್​ನಲ್ಲಿ ರಿಲೀಸ್ ಆಗಲಿರುವ ‘777 ಚಾರ್ಲಿ ‘ ಸಿನಿಮಾ ಮಲೆಯಾಳಂ ಭಾಷೆಯಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್​ ಅಡಿಯಲ್ಲಿ ರಿಲೀಸ್ ಆಗಲಿದೆ. ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್ ಪ್ರೊಡಕ್ಷನ್ ಹೌಸ್​ನಡಿ ರಿಲೀಸ್ ಆಗಲಿದೆ.

Advertisement

ಲೈಫ್ ಆಫ್ ಚಾರ್ಲಿ (Life of Charlie) ಎಂಬ ಅಡಿ ಶೀರ್ಷಿಕೆಯಿರುವ ‘777 ಚಾರ್ಲಿ ‘ ಸಿನಿಮಾದ ಟೀಸರ್ ತುಂಬ ಮುದ್ದಾದ ನಾಯಿಯೇ ಕಾಣಿಸಿಕೊಂಡಿದೆ. ಈ ಮುದ್ದಾದ ನಾಯಿ ರಕ್ಷಿತ್ ಶೆಟ್ಟಿಯನ್ನು (ಧರ್ಮ) ಭೇಟಿಯಾದ ಬಳಿಕ ಏನೆಲ್ಲ ನಡೆಯುತ್ತದೆ ಎಂಬುದು ಈ ಸಿನಿಮಾದ ಕತೆ. ರಾಜ್ ಬಿ. ಶೆಟ್ಟಿ ಸೇರಿದಂತೆ ಅನೇಕ ಖ್ಯಾತ ನಟರು ಈ ಸಿನಿಮಾದ ತಾರಾಗಣದಲ್ಲಿದ್ದಾರೆ.

ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿರುವ 777 ಚಾರ್ಲಿ ಸಿನಿಮಾದ ಟೀಸರ್​​ನಲ್ಲಿಯೇ ಹಿನ್ನೆಲೆ ಸಂಗೀತಕ್ಕೆ ಈಗಾಗಲೇ ಪ್ರೇಕ್ಷಕರು ಹಾಗೂ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಮರುಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next