Advertisement

ಕಾಶ್ಮೀರದಲ್ಲಿ ಶೂಟಿಂಗ್‌ ಮುಗಿಸಿದ ‘777 ಚಾರ್ಲಿ’

11:54 AM Jan 28, 2021 | Team Udayavani |

ಕಳೆದ ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರದತ್ತ ಪ್ರಯಾಣ ಬೆಳೆಸಿದ್ದ “777 ಚಾರ್ಲಿ’ ಚಿತ್ರತಂಡ, ಚಿತ್ರೀಕರಣಕ್ಕಾಗಿ ಲೊಕೇಶನ್‌ ಹುಡುಕಿ, ಶೂಟಿಂಗ್‌ ಮಾಡುವ ಸಲುವಾಗಿ ಅಲ್ಲಿಯೇ ಬೀಡು ಬಿಟ್ಟಿತ್ತು. ಇದೀಗ “777 ಚಾರ್ಲಿ’ ಚಿತ್ರತಂಡ ಕೊನೆಗೂ ಅಂದುಕೊಂಡಂತೆ, ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಬೆಂಗಳೂರಿಗೆ ವಾಪಾಸ್ಸಾಗುತ್ತಿದೆ.

Advertisement

ಹೌದು, ನಟ ರಕ್ಷಿತ್‌ ಶೆಟ್ಟಿ ಮತ್ತು “777 ಚಾರ್ಲಿ’ ಚಿತ್ರತಂಡ ಕಾಶ್ಮೀರದಲ್ಲಿ ಚಿತ್ರೀಕರಣ ಪೂರ್ಣಗೊಂಡಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

“”777 ಚಾರ್ಲಿ’ ಚಿತ್ರದ ಕಾಶ್ಮೀರ ಭಾಗದ ಅಂತಿಮ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಿತ್ರದ ಕೆಲ ಪ್ಯಾಚ್‌ ವರ್ಕ್‌ ಮಾತ್ರ ಬಾಕಿಯಿದ್ದು, ಅದನ್ನು ಬೆಂಗಳೂರಿನಲ್ಲಿ ಮುಗಿಸುವ ಯೋಜನೆಯಿದೆ. ಪ್ಯಾಚ್‌ ವರ್ಕ್‌ ಕೆಲಸ ಮುಗಿಸಿದರೆ “777 ಚಾರ್ಲಿ’ ಚಿತ್ರೀಕರಣ ಸಂಪೂರ್ಣವಾಗಿ ಮುಗಿಯಲಿದೆ.

ಇದನ್ನೂ ಓದಿ:

ಈಗಾಗಲೇ ಸಿನಿಮಾದ ಮೊದಲ ಭಾಗದ ಪೋಸ್ಟ್‌ ಪೊ›ಡಕ್ಷನ್‌ ಕೆಲಸಗಳು ಮುಕ್ತಾಯವಾಗಿದೆ. ಡಬ್ಬಿಂಗ್‌ ಸಹ ಮುಕ್ತಾಯವಾಗಿದೆ. ಲಾಕ್‌ಡೌನ್‌ ತೆರವಾದ ಬಳಿಕ ಪ್ರಾರಂಭವಾದ ಚಿತ್ರೀಕರಣದ ಡಬ್ಬಿಂಗ್‌ ಭಾಗ ಬಾಕಿ ಇದೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Advertisement

ಇನ್ನು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ನಟ ರಕ್ಷಿತ್‌ ಶೆಟ್ಟಿ, “ಕಾಶ್ಮೀರದ ತುಂಬಾ ಶೀತ ವಾತಾವರಣದ ನಡುವೆಯೇ “777 ಚಾರ್ಲಿ’ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವುದು ನಮಗೆ ಬೇರೆಡೆಗಿಂತ ಕಷ್ಟಕರವಾದ ಹಂತವಾಗಿತ್ತು. ಆದರೆ ನಾವು ಅದನ್ನು ಅದ್ಭುತವಾಗಿ ಮಾಡಿದ್ದೇವೆ. ಇನ್ನು 6 ದಿನಗಳ ಪ್ಯಾಚ್‌ ವರ್ಕ್‌ ಬಾಕಿಯಿದ್ದು, ಅದು ಬೆಂಗಳೂರಿನಲ್ಲಿ ನಡೆಯಲಿದೆ’ ಎಂದು ಹೇಳಿದ್ದಾರೆ.

ಒಟ್ಟಾರೆ ಸದ್ಯ “777 ಚಾರ್ಲಿ’ ಚಿತ್ರದ ಬಹುತೇಕ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ ಖುಷಿಯಲ್ಲಿರುವ ಚಿತ್ರತಂಡ, ಇದೇ ವರ್ಷದ ಮಧ್ಯ ಭಾಗದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next