Advertisement
ಕಳೆದ ಬಾರಿಯ(2018) ಶೇ.77.67 ಮತದಾನವನ್ನು ಮೀರಿಸುವ ಚುನಾವಣ ಆಯೋಗದ ಗುರಿ ಈಡೇರಿದಂತೆ ಕಾಣು ತ್ತಿಲ್ಲ. ಪೂರ್ಣ ವಿವರ ಗುರುವಾರ ಲಭ್ಯ ವಾಗಲಿದೆ. 2013ರಲ್ಲಿ ದ.ಕ ಜಿಲ್ಲೆಯಲ್ಲಿ 74.48 ಮತದಾನವಾಗಿದ್ದು, 2018ರಲ್ಲಿ ಉತ್ತಮ ಏರಿಕೆ ಕಂಡಿತ್ತು.
Related Articles
Advertisement
ನಗರದ ಹೊರವಲಯದ ಮೂಡುಶೆಡ್ಡೆ ಯಲ್ಲಿ ಮೂಡುಬಿದಿರೆಯ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲೆಸೆದಿರುವುದು, ಮೂಡುಬಿದಿರೆಯ ಬೆಳುವಾಯಿಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ. ಅದು ಬಿಟ್ಟರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಜಿಲ್ಲೆಯಾದ್ಯಂತ ಜನರು ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಮತದಾನದಲ್ಲಿ ಭಾಗಿಯಾದರು.
ಮಳೆಯಿಂದಾಗಿ ತುಸು ವಿಳಂಬಮಧ್ಯಾಹ್ನದ ವೇಳೆ ಜಿಲ್ಲೆಯಲ್ಲಿ ಶೇ.44 ರಷ್ಟು ಮತದಾನ ನಡೆದಿದ್ದರೆ ಸಂಜೆ ವೇಳೆ ಮತ ಹಾಕಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವೇಳೆ ಬಿಸಿಲಿನ ಝಳದಲ್ಲಿ ಮತದಾನದ ಗತಿ ಮಂದವಾಗಿತ್ತು. ಬೆಳ್ತಂಗಡಿ, ಪುತ್ತೂರಿನ ಕೆಲ ಭಾಗಗಳಲ್ಲಿ ಬುಧವಾರ ಸಂಜೆ ವೇಳೆಗೆ ಭಾರಿ ಗುಡುಗು ಸಿಡಿಲು ಸಹಿತ ಮಳೆಯಾಗಿರುವುದರಿಂದ ಕೊನೆ ಕ್ಷಣದ ಮತದಾನಕ್ಕೆ ಅಡ್ಡಿಯಾಯಿತು. ವಿದ್ಯುತ್ ವ್ಯತ್ಯಯದ ಕಾರಣ ಕೆಲ ಮತಗಟ್ಟೆಗಳಲ್ಲಿ ಕತ್ತಲಾವರಿಸಿ ಮತ ಹಾಕಲು ಸಮಸ್ಯೆಯಾಯಿತು. ಕೊಡಗು: ಶೇ. 74.74 ಮತದಾನ
ಮಡಿಕೇರಿ ಮೇ 10: ಕೊಡಗು ಜಿಲ್ಲೆ ಯಲ್ಲಿ ಶೇ. 74.74ರಷ್ಟು ಮತದಾನವಾಗಿದೆ. ಒಟ್ಟು 4,56,313 ಮತದಾರರಲ್ಲಿ 3,41,046 ಮಂದಿ ಮತದಾನ ಮಾಡಿದ್ದಾರೆ.
ಮಡಿಕೇರಿ ಕ್ಷೇತ್ರದ ಒಟ್ಟು 2,32,148 ಮತದಾರರಲ್ಲಿ 1,75,009 ಮಂದಿ ಮತ ಚಲಾಯಿಸಿದ್ದು, ಶೇ.75.39 ರಷ್ಟು ಮತದಾನವಾಗಿದೆ. ವೀರಾಜಪೇಟೆ ಕ್ಷೇತ್ರದ ಒಟ್ಟು 2,24,165 ಮತದಾರರಲ್ಲಿ 1,66,037 ಮಂದಿ ಮತ ಚಲಾಯಿಸಿದ್ದು, ಶೇ.74.07ರಷ್ಟು ಮತದಾನವಾಗಿದೆ. ಕಡಿಮೆಯಾಗಲು ಕಾರಣವೇನು?
ಮಂಗಳೂರು ನಗರ ದಕ್ಷಿಣದಲ್ಲಿ ಎಂದಿನಂತೆ ಹೆಚ್ಚಿನ ಎನ್‌ಆರ್‌ಐ ಮತದಾರರಿದ್ದಾರೆ. ಅವರೆಲ್ಲರೂ ಅಪಾರ್ಟ್‌ಮೆಂಟ್‌ಗಳಲ್ಲಿದ್ದು, ಅಂತಹವರನ್ನು ಮತದಾನಕ್ಕೆ ಸೆಳೆಯುವಲ್ಲಿ ಸೀÌಪ್ ಸಮಿತಿ ಅಷ್ಟಾಗಿ ಯಶಸ್ವಿಯಾದಂತಿಲ್ಲ. ಕಳೆದ ಬಾರಿಗಿಂತಲೂ ಈ ಬಾರಿ ಮತದಾನ ಕಡಿಮೆಯಾಗಿದೆ. ಉಳಿದಂತೆ 2018ರ ರೀತಿಯ ಸರಕಾರ ವಿರೋಧಿ ಅಥವಾ ಪರ ಅಲೆ ಇಲ್ಲದಿರುವುದೂ ಮತದಾನ ಕುಸಿಯಲು ಕಾರಣ ಇರಬಹುದು ಎನ್ನಲಾಗುತ್ತಿದೆ.