Advertisement

ಲಾಸ್‌ಏಂಜಲೀಸ್‌ ಅರಣ್ಯ ಬೆಂಕಿಗೆ 7,500 ಎಕರೆ ಭಸ್ಮ

10:37 AM Oct 15, 2019 | Team Udayavani |

ವಾಷಿಂಗ್ಟನ್‌: ಲಾಸ್‌ ಏಂಜಲೀಸ್‌ ನಗರದ ಉತ್ತರ ಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಈ ಬೆಂಕಿ, 7,500 ಎಕರೆ ಪ್ರದೇಶಗಳ ಭೂಭಾಗವನ್ನು, 31 ಮನೆಗಳನ್ನು ಆಪೋಶನ ತೆಗೆದುಕೊಂಡಿದ್ದು, ಆ ವ್ಯಾಪ್ತಿಯಲ್ಲಿನ ಸಾವಿರಾರು ಪ್ರಾಣಿ, ಪಕ್ಷಿ ಸಂಕುಲವನ್ನು ಬಲಿ ಪಡೆದಿದೆ. ನೂರಾರು ಮಂದಿಯನ್ನು ನಿರ್ಗತಿಕರನ್ನಾಗಿಸಿದೆ. ವಿಶ್ವದ ಅತಿ ದೊಡ್ಡ ಜೀವ ವೈವಿಧ್ಯವಿರುವ ಕಾಡೆಂದೇ ಪ್ರಖ್ಯಾತವಾದ ಅಮೆರಿಕದ ಅಮೆಜಾನ್‌ ಕಾಡು ಇತ್ತೀಚಿನ ಹೊತ್ತಿ ಉರಿದಿದ್ದ ಘಟನೆ ಮಾಸುವ ಮುನ್ನವೇ ಅಮೆರಿಕದಲ್ಲಿ ಅಂಥದ್ದೇ ಮತ್ತೂಂದು ಘಟನೆಗೆ ಕಾಣಿಸಿಕೊಂಡಿದೆ.

Advertisement

ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್‌ ಸೇರಿದಂತೆ ಸಾವಿರಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ಬಳಸಲಾಗಿದೆ. ಅಗ್ನಿಶಮನ ಪ್ರಯತ್ನಗಳಿಂದ ಕೇವಲ ಶೇ. 13ರಷ್ಟು ಕಾಡ್ಗಿಚ್ಚನ್ನು ಮಾತ್ರ ನಂದಿಸಲಾಗಿದೆ.

ಶಾಲೆಗಳು ಬಂದ್‌: ಕಿಚ್ಚಿನ ವ್ಯಾಪ್ತಿ ಹೆಚ್ಚುತ್ತಲೇ ಇರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ 1 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜತೆಗೆ ಲಾಸ್‌ ಏಂಜಲೀಸ್‌ನ ಸುಮಾರು 40 ಶಾಲೆಗಳನ್ನು ಮುಚ್ಚಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next