- 1947ರಲ್ಲಿ ಇಂಡೋ-ಪಾಕಿಸ್ಥಾನ ಸಮರದಲ್ಲಿ ಭಾರತಕ್ಕೆ ಗೆಲುವು.
- 500ಕ್ಕೂ ಹೆಚ್ಚು ರಾಜಾಡಳಿತಗಳನ್ನು ಒಂದುಗೂಡಿಸುವ ಕೆಲಸ ಆರಂಭ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಇದ್ದದ್ದು 17 ಪ್ರಾಂತ್ಯಗಳು, 565 ರಾಜಾಡಳಿತಗಳು.
- ಆಗಿನ ಉಪಪ್ರಧಾನಿ ಮತ್ತು ಗೃಹ ಸಚಿವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪರಿಶ್ರಮದಿಂದಾಗಿ ಬಹುತೇಕ ಎಲ್ಲ ರಾಜ್ಯಾಡಳಿತ ಪ್ರಾಂತ್ಯಗಳನ್ನೂ ಭಾರತದ ಒಕ್ಕೂಟಕ್ಕೆ ಸೇರ್ಪಡೆ.
- ಜುನಾಗಢ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳು ಮಾತ್ರ ಕೊಂಚ ಕಠಿನವಾಗಿದ್ದವು. ಇವುಗಳನ್ನೂ ಭಾರತಕ್ಕೆ ಜನಶಕ್ತಿ ಮತ್ತು ಮಿಲಿಟರಿ ಶಕ್ತಿ ಬಳಸಿ ಸೇರ್ಪಡೆ.
- ಸಂವಿಧಾನ ರಚನೆ. ಸ್ವಾತಂತ್ರ್ಯ ಭಾರತದ ಮಹತ್ವದ ಘಟ್ಟ. ಡಾ| ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿ ಸಂವಿಧಾನವನ್ನು ನೀಡಿತು. 1956ರ ಜನವರಿ 26ರಂದು ಇದನ್ನು ಅಳವಡಿಸಿಕೊಳ್ಳಲಾಯಿತು.
- ದೇಶದ ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು 1952ರಲ್ಲಿ. ಭಾರತ ರಾಷ್ಟ್ರೀಯ ಕಾಂಗ್ರೆಸ್ ಬಹುಮತ ಪಡೆಯಿತು. ನೆಹರೂ ಅವರು ಎರಡನೇ ಬಾರಿಗೆ ಪ್ರಧಾನಿಯಾದರು.
- ಮಹಿಳೆಯರಿಗೆ ಕಾನೂನು ಬದ್ಧ ಹಕ್ಕುಗಳನ್ನು ನೀಡಿದ್ದು, ಸ್ವಾತಂತ್ರ್ಯ ಭಾರತದ ಮೊದಲ ಸರಕಾರದ ಸಾಧನೆ. ಹಾಗೆಯೇ ಜಾತಿ ತಾರತಮ್ಯ, ಅಸ್ಪೃಶ್ಯತೆ ನಿವಾರಣೆಗೆ ಟೊಂಕ ಕಟ್ಟಲಾಯಿತು.
- ಪ್ರಾಥಮಿಕ ಹಂತದಿಂದ ಹಿಡಿದು, ಐಐಟಿವರೆಗೆ ದೇಶಾದ್ಯಂತ ಶಾಲಾ ಸಂಸ್ಥೆಗಳು ಆರಂಭವಾದವು.
- ಪಂಚವಾರ್ಷಿಕ ಯೋಜನೆ ಜಾರಿಗೆ ಬಂದಿತು. ಸೋವಿಯತ್ ರಷ್ಯಾ ಮಾದರಿಯಲ್ಲಿ ರೈತರ ಮೇಲೆ ತೆರಿಗೆ ಹಾಕದಿರುವ ನಿರ್ಧಾರ ತೆಗೆದುಕೊಳ್ಳಲಾಯಿತು.
- ಉಕ್ಕು, ವಿಮಾನಯಾನ, ಶಿಪ್ಪಿಂಗ್, ವಿದ್ಯುತ್ ಮತ್ತು ಗಣಿಗಾರಿಕೆಯನ್ನು ರಾಷ್ಟ್ರೀಕರಣ ಮಾಡಲಾಯಿತು. ಪ್ರಮುಖ ಅಣೆಕಟ್ಟುಗಳು, ನೀರಾವರಿ ಕಾಲುವೆಗಳು, ರಸ್ತೆಗಳು, ಥರ್ಮಲ್ ಮತ್ತು ಜಲವಿದ್ಯುತ್ ಘಟಕಗಳನ್ನು ಆರಂಭಿಸಲಾಯಿತು.
- 1956ರಲ್ಲಿ ರಾಜ್ಯಗಳ ಪುನರ್‌ಸಂಘಟನೆ ಕಾಯ್ದೆ ಜಾರಿಯಾಯಿತು. ಭಾಷೆಗಳ ಆಧಾರದಲ್ಲಿ ರಾಜ್ಯಗಳನ್ನು ಸ್ಥಾಪಿಸಲಾಯಿತು.
Advertisement