Advertisement

75 ನೇ ಸ್ವಾತಂತ್ರ್ಯ : ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ: ಮೋದಿ ಉವಾಚ..!

11:02 AM Aug 15, 2021 | Team Udayavani |

ನವ ದೆಹಲಿ : ಕೆಂಪು ಕೋಟೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ 75ನೇ ಸ್ವಾತಂತ್ರ್ಯ ದಿನಾಚಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.

Advertisement

ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿ ಮಾತನಾಡಿದ್ದು, ಕೋವಿಡ್ ಸಂದರ್ಭದಲ್ಲಿ ದೇಶಕ್ಕಾಗಿ ಮತ್ತು ಜನರಿಗಾಗಿ ಹೋರಾಡಿದ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ  ದೊಡ್ಡ ಲಸಿಕಾ ಅಭಿಯಾನ ಹಾಗೂ ಒಲಂಪಿಕ್ಸ್​ ನಲ್ಲಿ ಯುವ ಕ್ರೀಡಾಪಟುಗಳು ಮಾಡಿದ ಸಾಧನೆಯ ಕುರಿತು ಪ್ರಸ್ತಾಪ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರ ಭಾಷಣದ ಪ್ರಮುಖಾಂಶಗಳು ಇಲ್ಲಿವೆ.

  • ಶೇ 100ರಷ್ಟು ಮಂದಿಗೆ ದೇಶದ ಎಲ್ಲಾ ಯೋಜನೆಗಳು ಸಂಪೂರ್ಣ ತಲುಪುವಂತೆ ಮಾಡುವುದು.
  • ಕಠಿಣ ಸಂದರ್ಭದಲ್ಲಿ ದೇಶ ಅಸಾಮಾನ್ಯ ಹೋರಾಟವನ್ನು ನಡೆಸಿಸದೆ.
  • ಕೋವಿಡ ಸೋಂಕು ಎಂಬ ಮಹಾಮಾರಿಯ ವಿರುದ್ಧ ವೈದ್ಯಕೀಯ ಸಿಬ್ಬಂದಿಗಳನ್ನೊಳಗೊಂಡು ದೇಶಕ್ಕೆ ದೇಶವೇ ಸಮರೋಪಾದಿಯಲ್ಲಿ ಸೋಂಕಿನ ವಿರುದ್ಧ ಹೋರಾಡಿದೆ.
  • ತಾಳ್ಮೆಯಿಂದ ಕೋವಿಡ್ ಸೋಂಕಿನ ವಿರುದ್ಧ ಹೋರಾಡುವುದರ ಮೂಲಕ ಸೋಂಕಿನ ಮೊದಲನೇ ಅಲೆ ಹಾಗೂ ಎರಡನೇ ಸೋಂಕಿನ ವಿರುದ್ಧ ಹೋರಾಡಿ ಗೆದ್ದಿದೆ.
  • ಈವರೆಗೂ ದೇಶದ 54 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್‌ ಲಸಿಕೆ ತಲುಪಿದೆ.–’ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌– ಸಬ್‌ಕಾ ವಿಶ್ವಾಸ್‌’ನಲ್ಲಿ ನಾವೆಲ್ಲರೂ ನಂಬಿಕೆ ಇಟ್ಟಿದ್ದೇವೆ.
  • ನಮ್ಮ ಎಲ್ಲರ ಗುರಿಯನ್ನು ಸಾಧಿಸಲು ‘ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌–ಸಬ್‌ ಕಾ ವಿಶ್ವಾಸ್‌ ಮತ್ತು ಸಬ್‌ ಕಾ ಪ್ರಯಾಸ್‌ – ಎಲ್ಲರ ಜೊತೆ, ಎಲ್ಲರ ಏಳ್ಗೆ– ಎಲ್ಲರ ಪ್ರಯತ್ನ’ ಅತ್ಯಗತ್ಯವಾಗಿದೆ ಎಂದು ನಾನು ಈಗ ಘೋಷಣೆ ಮಾಡುತ್ತಿದ್ದೇನೆ.
  • ಲಡಾಖ್‌ ನಲ್ಲಿ ಆಧುನಿಕ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
  • ಲಡಾಖ್‌ನ ‘ಇಂಡಸ್‌ ಸೆಂಟ್ರಲ್‌ ಯೂನಿವರ್ಸಿಟಿ’ ದೇಶದ ಉನ್ನತ ಶಿಕ್ಷಣ ಕೇಂದ್ರವಾಗಲಿದೆ.
  • ಆಧುನಿಕ ಜಗತ್ತಿನಲ್ಲಿ ಎಲ್ಲಾ ರೀತಿಯ ತಂತ್ರಜ್ಞಾನ, ಮೂಲಸೌಕರ್ಯಗಳ ಅಭಿವೃದ್ಧಿಗೆ, ಅಳವಡಿಕೆಗೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕಿದೆ.
  • ಭಾರತ ಸರ್ಕಾರವು ಇ–ಕಾಮರ್ಸ್‌ ವೇದಿಕೆ ಶುರು ಮಾಡಲಿದ್ದು, ಹಳ್ಳಿಯ ಕರಕುಶಲಕರ್ಮಿಗಳಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.
  • ಹಳ್ಳಿಯ ಅಭಿವೃದ್ಧಿ ಪಥವು ಹೊಸ ಆಯಾಮವನ್ನು ಪಡೆಯುತ್ತಿದೆ.
  • ಹಳ್ಳಿಗಳಲ್ಲಿ ಡಿಜಿಟಲ್‌ ಉದ್ಯಮಿಗಳೂ ರೂಪುಗೊಳ್ಳುತ್ತಿದ್ದಾರೆ.
  • ಸ್ವಾಮಿತ್ವ ಯೋಜನೆಯು ಗ್ರಾಮೀಣ ಭಾರತದ ಬದುಕನ್ನು ಬದಲಿಸುತ್ತಿದೆ.
  • ಗ್ರಾಮೀಣ ಜನರ ಭೂಮಿ ನಕ್ಷೆ ರೂಪಿಸಲು ಡ್ರೋನ್‌ ಗಳು ಸಹಕಾರಿಯಾಗಿವೆ .
  • ‘ಸಣ್ಣ ಇಳುವರಿದಾರರ ಮೇಲೆ ಸರ್ಕಾರ ಗಮನಹರಿಸಿದೆ.
  • 10 ಕೋಟಿ ರೈತ ಕುಟುಂಬಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ5 ಲಕ್ಷ ಕೋಟಿ ರೂ ಸಂದಾಯವಾಗಿದೆ’.
  • ದೇಶದ 75ನೇ ಸ್ವಾತಂತ್ರೋತ್ಸವದ 75 ವಾರಗಳ ಆಚರಣೆಗೆ ಸರ್ಕಾರ ಪಣತೊಟ್ಟಿದೆ.
  • 2021ರ ಮಾರ್ಚ್‌ 12 ರಿಂದ 2023ರ ಆಗಸ್ಟ್‌ 15ರವರೆಗೂ ‘ಅಮೃತ ಮಹೋತ್ಸವ’ ಆಚರಣೆ.
  • ಭಾರತೀಯ ರೈಲ್ವೆ ಸಹ ದೇಶದ ಜೊತೆಗೆ ಮಹತ್ತರ ಪರಿವರ್ತನೆ
  • ಭಾರತದಲ್ಲಿರುವ ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ಸಿಗಲಿದ್ದು, ಅಲ್ಲಿ ಶಿಕ್ಷಣ ಪಡೆಯಬಹುದಾಗಿದೆ.
  • ರಾಷ್ಟ್ರೀಯ ಹೈಡ್ರೋಜನ್‌ ಮಿಷನ್‌ ಘೋಷಣೆ.
  • ಭಾರತವನ್ನು ಹಸಿರು ಜಲಜನಕದ ಉತ್ಪಾದನೆ ಮತ್ತು ರಫ್ತು ಮಾಡುವ ಕೇಂದ್ರವನ್ನಾಗಿಸಬೇಕು.
  • ಜನ ಔಷಧಿ ಯೋಜನೆಯಿಂದಾಗಿ ಬಡವರು, ಅಗತ್ಯವಿರುವವರಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಸಿಗುತ್ತಿವೆ.
  • 75,000 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬ್ಲಾಕ್‌ ಮಟ್ಟದಲ್ಲಿ ಆಸ್ಪತ್ರೆಗಳ ಸಂಪರ್ಕದ ಕುರಿತು ಕಾರ್ಯಾಚರಣೆ.
  • ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ ಇಪಿ) ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತದೆ ಎಂದು ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ.
  • ಇದನ್ನೂ ಓದಿ : ನವಭಾರತಕ್ಕೆ ಪೂರಕವಾಗಿ ಇಂದಿನಿಂದ ನವ ಕರ್ನಾಟಕ ನಿರ್ಮಾಣ: ಸಿಎಂ ಬೊಮ್ಮಾಯಿ
Advertisement

Udayavani is now on Telegram. Click here to join our channel and stay updated with the latest news.

Next