Advertisement

Medical: ವೈದ್ಯ ಪ್ರಾಧ್ಯಾಪಕರಿಗೆ ಶೇ.75 ಹಾಜರಿ ಕಡ್ಡಾಯ, ಖಾಸಗಿ ಪ್ರಾಕ್ಟಿಸ್‌ ನಿಷೇಧ

12:42 AM Jan 31, 2024 | Team Udayavani |

ಹೊಸದಿಲ್ಲಿ: ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಧ್ಯಾಪಕರಿಗೆ ಶೇ.75 ಹಾಜರಾತಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಕಡ್ಡಾಯಗೊಳಿಸಿದೆ. ಕಳೆದ ವಾರ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ಕಾಲೇಜಿನ ಸಮಯದಲ್ಲಿ ಪ್ರಾಧ್ಯಾಪಕರು ಪೂರ್ಣ ಹಾಗೂ ಅರೆಕಾಲಿಕವಾಗಿ ಖಾಸಗಿ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಿದೆ.

Advertisement

ಒಟ್ಟು ಕೆಲಸದ ದಿನಗಳಲ್ಲಿ ಕನಿಷ್ಠ ಶೇ.75 ಹಾಜರಾತಿಯನ್ನು ಕಡ್ಡಾಯಗೊಳಿಸಿದೆ. ಅಧ್ಯಾಪಕರ ಸಮಸ್ಯೆಯನ್ನು ನಿಭಾಯಿಸಲು ಈ ನಿಯಮ ಸಹಕಾರಿಯಾಗಲಿದೆ. ಆಸ್ಪತ್ರೆಯ ಹಾಸಿಗೆಗಳಲ್ಲಿ 80 ಪ್ರತಿಶತದಷ್ಟು ಒಳರೋಗಿಗಳ ಆರೈಕೆಯ ಅಗತ್ಯವಿರುವ ರೋಗಿಗಳು ವರ್ಷವಿಡೀ ಇರಬೇಕು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next