Advertisement

ಲಾಕ್‌ಡೌನ್‌ ವಿಸ್ತರಣೆಗೆ ಶೇ.75 ಮಂದಿಯ ಸಮ್ಮತಿ : ಕೇಂದ್ರಕ್ಕೆ ಭಾರತೀಯರ ಯೆಸ್‌

12:30 PM Apr 27, 2020 | sudhir |

ದೇಶದಲ್ಲಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ‌ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದು ಬಹುತೇಕ ಭಾರತೀಯರ ಅಭಿಪ್ರಾಯ. ಗ್ಯಾಲಪ್‌ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ಬಯಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಭಾರತೀಯರ ಪೈಕಿ ಶೇ.91ರಷ್ಟು ಮಂದಿ, ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಶೇ.75ರಷ್ಟು ಮಂದಿ ದೇಶಾದ್ಯಂತ ಲಾಕ್‌ಡೌನ್‌ ವಿಸ್ತರಿಸಿದ ಕೇಂದ್ರ ಸರಕಾರದ ಕ್ರಮ ಸರಿಯಾಗಿದೆ ಎಂದಿದ್ದಾರೆ.

Advertisement

ಜರ್ಮನಿ, ಭಾರತ, ಇಟಲಿ, ರಷ್ಯಾ, ಅಮೆರಿಕ ಸೇರಿದಂತೆ ವಿಶ್ವದ 18 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಭಾರತದಲ್ಲಿ ಶೇ.91, ಪಾಕಿಸ್ಥಾನದಲ್ಲಿ ಶೇ.82, ಆಸ್ಟ್ರಿಯಾದಲ್ಲಿ ಶೇ. 86, ಜರ್ಮನಿಯಲ್ಲಿ ಶೇ.75, ಫಿಲಿಪ್ಪೀನ್ಸ್‌ನಲ್ಲಿ ಶೇ.80ರಷ್ಟು ಮಂದಿ ಅಲ್ಲಿನ ಸರಕಾರದ ಕ್ರಮವನ್ನು ಶ್ಲಾ ಸಿದ್ದಾರೆ. ಬಹುತೇಕ ಎಲ್ಲಾ ರಾಷ್ಟ್ರಗಳ ಜನರಲ್ಲಿ ಕೋವಿಡ್ ಬಗ್ಗೆ ಭೀತಿ ಹೆಚ್ಚುತ್ತಿದ್ದು, ಭಾರತದಲ್ಲಿ ಶೇ.70ರಷ್ಟು ಮಂದಿ ತಮಗೆ ಕೋವಿಡ್ ತಗಲಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಭಾರತ ಮತ್ತು ಥೈಲ್ಯಾಂಡ್‌ಗಳಲ್ಲಿ ಶೇ.91, ಪಾಕಿಸ್ಥಾನ ಮತ್ತು ಇರಾಕ್‌ನಲ್ಲಿ ಶೇ.92ರಷ್ಟು ಮಂದಿ ಕೋವಿಡ್ ನಿಯಂತ್ರಣಕ್ಕೆ ಬರುವುದಾದರೆ, ತಮ್ಮ ಮೂಲಭೂತ ಹಕ್ಕುಗಳ ತ್ಯಾಗಕ್ಕೆ ತಾವು ಸಿದ್ಧ ಎಂದಿದ್ದಾರೆ.

ಶೇ.49ರಷ್ಟು ಭಾರತೀಯರು ಕೋವಿಡ್ ಸಂಕಷ್ಟದ ನಂತರ ಜಗತ್ತಿನ ಚಿತ್ರಣ ಬದಲಾಗಲಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಶೇ.35ರಷ್ಟು ಮಂದಿ ಬದುಕು ಮೊದಲಿನಂತೆ ಇರಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next