Advertisement

7442 ಮಂದಿ ವರದಿ ಬಾಕಿ

06:08 AM Jun 01, 2020 | Team Udayavani |

ಬೀದರ: ಬೀದರ ಜಿಲ್ಲೆಯಲ್ಲಿ  ಕೋವಿಡ್ ಶಂಕಿತ 7442 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಈವರೆಗೆ 25,258 ಜನರ ಸ್ಯಾಂಪಲ್‌ ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 17,653 ಮಂದಿಯದ್ದು ನೆಗೆಟಿವ್‌ ಬಂದಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 163 ಪ್ರಕರಣಗಳು ವರದಿಯಾಗಿದ್ದು, ಐದು ಸಾವು ಸಂಭವಿಸಿದರೆ, 27 ಜನರು ಡಿಸ್ಚಾರ್ಜ್‌ ಆದಂತಾಗಿದೆ.

Advertisement

ಇನ್ನೂ 131 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಶಂಕಿತ 216 ಜನರು ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು, ರವಿವಾರ 51 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಹೇಲ್ತ್‌ ಬುಲೇಟಿನ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next