Advertisement

ಚಿಕ್ಕಬಳ್ಳಾಪುರ: 735 ಗ್ರಾಮ ಸೋಂಕು ಮುಕ್ತ

06:08 PM May 28, 2021 | Team Udayavani |

ಚಿಕ್ಕಬಳ್ಳಾಪುರ: ಕೊರೊನಾ ನಿಯಂತ್ರಣಕ್ಕೆಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೆ,ಮತ್ತೂಂದೆಡೆ ಜಿಪಂ ಸಿಇಒ ಪಿ.ಶಿವಶಂಕರ್‌ನೇತೃತ್ವದಲ್ಲಿ 157 ಗ್ರಾಪಂ (1307 ಗ್ರಾಮ)ವ್ಯಾಪ್ತಿಯಲ್ಲಿ ಕಾರ್ಯಪಡೆ ರಚಿಸಿ ಕ್ರಮಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ 735ಗ್ರಾಮಗಳು ಸೋಂಕಿನಿಂದ ಮುಕ್ತಗೊಂಡಿವೆ.

Advertisement

ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚುಕಾಣಿಸಿಕೊಂಡ ಕಾರಣ ಕಾರ್ಯಪಡೆ ರಚಿಸಿದ್ದು,ಜಿಪಂ ಸಿಇಒ ವಿಶೇಷ ಕ್ರಮ ಕೈಗೊಂಡಿದ್ದಾರೆ.ಸ್ವತಃ ಗ್ರಾಮಗಳಿಗೆ ಭೇಟಿ ನೀಡಿ, ಹೋಂಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಮನೆಗೆ ತೆರಳಿ, ಮನೆ ಸ್ಥಿತಿಗತಿಪರಿಶೀಲಿಸುವ ಜೊತೆಗೆ, ಅವರಿಗೆ ನೀಡುತ್ತಿರುವವೈದ್ಯಕೀಯ ಸೌಲಭ್ಯಗಳ ಮಾಹಿತಿ ಪಡೆದು,ಕೆಲವು ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಲು ಸಿಇಒ ಕ್ರಮ ಕೈಗೊಂಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು: 23 ಗ್ರಾಪಂ ವ್ಯಾಪ್ತಿಯ289 ಗ್ರಾಮಗಳಲ್ಲಿ 1266 ಪುರುಷ, 831ಮಹಿಳೆಯರೂ ಸೇರಿ 2097 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಈಗಾಗಲೇ 174 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ.
ಜೊತೆಗೆ ಹೋಂ ಐಸೋಲೇಷನ್‌ನಲ್ಲಿದ್ದ 966 ಮಂದಿಗುಣಮುಖರಾಗಿ, 895 ಸಕ್ರಿಯ ಪ್ರಕರಣ ಇದೆ.ಶಿಡ್ಲಘಟ್ಟ ತಾಲೂಕು: 28 ಗ್ರಾಪಂ, 262ಗ್ರಾಮ, 1499 ಪುರುಷ, 999 ಮಹಿಳೆ ಸಹಿತ2448 ಮಂದಿಗೆ ಸೋಂಕು, ಅದರಲ್ಲಿ 167ಮಂದಿ ಆಸ್ಪತ್ರೆಯಿಂದ ಬಿಡುಗಡೆ, ಹೋಂಕ್ವಾರಂಟೈನ್‌ ಆಗಿದ್ದ 1274 ಸೋಂಕಿತರುಗುಣಮುಖ, 820 ಸಕ್ರಿಯ ಪ್ರಕರಣ.ಗೌರಿಬಿದನೂರು ತಾಲೂಕು: 38 ಗ್ರಾಪಂ, 337ಗ್ರಾಮ, 1674 ಪುರುಷ, 1153 ಮಹಿಳೆ ಸಹಿತ2827 ಮಂದಿಗೆ ಸೋಂಕು, ಅದರಲ್ಲಿ 318 ಮಂದಿಆಸ್ಪತ್ರೆಗಳಿಂದ ಬಿಡುಗಡೆ, ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1460 ಸೋಂಕಿತರುಗುಣಮುಖ, 984 ಸಕ್ರಿಯ ಕೇಸು ಇವೆ.

ಚಿಂತಾಮಣಿ ತಾಲೂಕು: 35 ಗ್ರಾಪಂ, 395ಗ್ರಾಮ, 1088 ಪುರುಷ, 618 ಮಹಿಳೆ ಸಹಿತ1706 ಮಂದಿಗೆ ಸೋಂಕು, ಅದರಲ್ಲಿ 185ಮಂದಿ ಆಸ್ಪತ್ರೆಯಿಂದ ಬಿಡುಗಡೆ, ಹೋಂಐಸೋಲೇಷನ್‌ನಲ್ಲಿದ್ದ 879 ಮಂದಿಗುಣಮುಖ, 587 ಸಕ್ರಿಯ ಪ್ರಕರಣ.ಬಾಗೇಪಲ್ಲಿ ತಾಲೂಕು: 25 ಗ್ರಾಪಂ, 385ಗ್ರಾಮ, 687 ಪುರುಷ, 488 ಮಹಿಳೆ ಸಹಿತ1175 ಮಂದಿಗೆ ಸೋಂಕು, 91 ಮಂದಿಆಸ್ಪತ್ರೆಗಳಿಂದ ಬಿಡುಗಡೆ, ಹೋಂಐಸೋಲೇಷನ್‌ನಲ್ಲಿದ್ದ 356 ಸೋಂಕಿತರುಗುಣಮುಖ, 695 ಸಕ್ರಿಯ ಪ್ರಕರಣ.

ಗುಡಿಬಂಡೆ ತಾಲೂಕು: 8 ಗ್ರಾಪಂ, 120 ಗ್ರಾಮ,428 ಪುರುಷ, 351 ಮಹಿಳೆ ಸಹಿತ 779 ಮಂದಿಗೆಸೋಂಕು, 29 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ,ಹೋಂ ಐಸೋಲೇಷನ್‌ನಲ್ಲಿದ್ದ 401 ಸೋಂಕಿತರುಗುಣಮುಖ, 347 ಸಕ್ರಿಯ ಪ್ರಕರಣ.

Advertisement

ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next