Advertisement
ಸಂಸ್ಥೆಯ ಕಾರ್ಯಾಧ್ಯಕ್ಷ ಎ. ಬಿ. ಶೆಟ್ಟಿ ಅವರು ನೆರೆದ ಗಣ್ಯರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿ ತದನಂತರ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಪ್ರಾಮುಖ್ಯವಾಗಿರುವುದು ತಮ್ಮ ಮುಂದಿನ ಭವಿಷ್ಯ. ಇದನ್ನು ತಾವು ಶಿಸ್ತು ಮತ್ತು ಉತ್ತಮ ಶಿಕ್ಷಣದಿಂದಲೇ ಗಳಿಸುವುದು ಸಾಧ್ಯವಿದೆ. ಇಂದಿನ ತೀವ್ರಗತಿಯಲ್ಲಿ ಬದಲಾಗುತ್ತಿರುವ ಜಾಗತೀಕರಣದ ನೆಲೆಯಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಶಿಕ್ಷಣ ಪದ್ಧತ್ತಿಯನ್ನು ಕಾಲಕ್ಕೆ ಅನುಗುಣವಾಗಿ ನಿರಂತರವಾಗಿ ಪರಿಶೀಲಿಸುವ ಅಗತ್ಯವಿದೆ. ಸ್ವಾತಂತ್ರÂ ದೊರಕಿದ 72 ವರ್ಷಗಳಲ್ಲಿ ದೇಶವು ಹಂತ ಹಂತವಾಗಿ ಪ್ರಗತಿಯನ್ನು ಸಾಧಿಸುತ್ತಲೇ ಇದೆ. ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸಾಧಿಸಬೇಕಿರುವುದು ತುಂಬಾ ಇದೆ. ಇದಕ್ಕೆ ಪ್ರತಿಯೊಬ್ಬ ನಾಗರಿಕನ ಸಹಕಾರ ಅಗತ್ಯವಿದೆ. ಸದ್ಯ ಕನ್ನಡ ಭವನ ಶಾಲೆಯಲ್ಲಿ ಪ್ರವೇಶ ಪಡೆಯುವ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸವಲತ್ತು ದೊರಕಿಸುತ್ತಿದ್ದೇವೆ. ಈಗಾಗಲೇ ಕನ್ನಡ ಭವನಕ್ಕೆ ಉದಾರ ದಾನಿಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಲತ್ತು ದೊರಕುತ್ತಿದ್ದು ಇಂತಹ ಮಹನೀಯರಿಗೆ ಕೃತಜ್ಞತೆಗಳು. ಪ್ರಸ್ತುತ ವರ್ಷದಲ್ಲಿ 50 ವರ್ಷಗಳ ನಂತರ ಶಾಲಾ ಸಮವಸ್ತ್ರವನ್ನು ಬದಲಿಸಲಾಗಿದೆ. ಹಾಗೂ ಶಾಲೆಯ ನಾಲ್ಕು ಮಹಡಿಗಳಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಒದಗಿಸಿದ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ದಯಾನಂದ ಬಿ. ಅಮೀನರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸಿದರು.
Related Articles
Advertisement
ಇದೇ ಸಂದರ್ಭದಲ್ಲಿ ಪ್ರಸ್ತುತ ವರ್ಷದ ಎಸ್.ಎಸ್.ಸಿ ಪರೀಕ್ಷೆಯಲ್ಲಿ ಕನ್ನಡ ಭವನ ಶಾಲೆಯ ಸುಮಾ ಗೌಡ ಶೇ. 94 ಅಂಕ ಪಡೆದು ಮುಂಬಯಿಯ ಎಲ್ಲಾ ಹಗಲು ಹಾಗೂ ರಾತ್ರಿ ಕನ್ನಡ ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿರುವುದನ್ನು ನೆನಪಿಸುತ್ತಾ, ವಿದ್ಯಾರ್ಥಿಯನ್ನು ಹರಸುವುದರೊಂದಿಗೆ ಶಾಲಾ ಶಿಕ್ಷಕ ವೃಂದ ಮತ್ತು ಪಾಲಕರ ಸಹಕಾರ ಹಾಗೂ ಪ್ರಯತ್ನವನ್ನು ಸ್ಮರಿಸಲಾಯಿತು. ವೇದಿಕೆಯಲ್ಲಿ ಕೋಶಾಧಿಕಾರಿ ಪುರುಷೋತ್ತಮ ಎಂ. ಪೂಜಾರಿ ಜತೆ ಕೊಶಾಧಿಕಾರಿ ಸತೀಶ ಎನ್. ಬಂಗೇರ, ಸಮಿತಿಯ ಸದಸ್ಯ ಎನ್. ವಿ. ಮೆಂಡನ್ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿ ಅಮೃತಾ ಎ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.