Advertisement

ಮಲೆ ಮಹದೇಶ್ವರ ಬೆಟ್ಟದಲ್ಲಿ72 ಸಾವಿರ ಲಾಡು ದಾಸ್ತಾನು

04:05 PM Mar 24, 2020 | Suhan S |

ಹನೂರು: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ 72 ಸಾವಿರ ಲಾಡು ದಾಸ್ತಾನು ಉಳಿದಿದೆ. ಆ ಲಾಡುಗಳನ್ನು ಭಕ್ತಾದಿಗಳಿಗೆ ಉಚಿತವಾಗಿ ವಿತರಿಸಲು ಮತ್ತು ಪ್ರಾಧಿಕಾರದ ಸಿಬ್ಬಂದಿಗೆ ತಲಾ 10 ಲಾಡು ವಿತರಿಸಲು ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಿಎಂ ಅವರಿಂದ ಅನುಮತಿ ಪಡೆಯಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದರು.

Advertisement

ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಯಲ್ಲಿ ಭಕ್ತರಿಗೆ ಮಾರಾಟ ಮಾಡಲು ಲಾಡು ತಯಾರಿಕೆ ಮಾಡಿ, ದಾಸ್ತಾನು ಮಾಡಲಾಗುತಿತ್ತು. ಅಂತಿಮವಾಗಿ ಮಾ.18ರವರೆಗೆ 72 ಸಾವಿರ ಲಾಡು ತಯಾರು ಮಾಡಲಾಗಿತ್ತು. ಆದರೆ, ಕೊರೊನಾ ತಡೆ ಹಿನ್ನೆಲೆ ಸರ್ಕಾರದ ದೇವಾಲಯವನ್ನು ಬಂದ್‌ ಮಾಡಲು ನಿರ್ಧಾರ ಮಾಡಿದೆ. ಈ ಹಿನ್ನೆಲೆ ಲಾಡು ತಯಾರಿಕೆಯನ್ನು ಸ್ಥಗಿತಗೊಳಿಸಿ, ದಾಸ್ತಾನಿನಲ್ಲಿರುವ 72 ಸಾವಿರ ಲಾಡನ್ನು ಭಕ್ತಾದಿಗಳಿಗೆ ಉಚಿತವಾಗಿ ವಿತರಿಸಲು ಅನುಮತಿಗೆ ಮನವಿ ಮಾಡಲಾಗಿತ್ತು.

ಈ ಹಿನ್ನೆಲೆ ಅನುಮತಿ ನೀಡಿರುವ ಸಿಎಂ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 550 ಸಿಬ್ಬಂದಿಗೆ ತಲಾ 10 ಲಾಡು, ಶ್ರೀಕ್ಷೇತ್ರದ ಸಾಲೂರು ಮಠಕ್ಕೆ ಭೇಟಿ ನೀಡುವ ಭಕ್ತಾದಿಗಳು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಭೇಟಿ ನೀಡುವ ಭಕ್ತಾದಿಗಳಿಗೆ ನೀಡಲು 1 ಸಾವಿರ ಲಾಡು ಉಚಿತವಾಗಿ ನೀಡಲು ಅನುಮತಿ ನೀಡಲಾಗಿದೆ. ಅಲ್ಲದೆ, ಡೀಸಿ ಅಧೀನಕ್ಕೆ 20 ಸಾವಿರ ಲಾಡು ನೀಡಿ, ಆ ಲಾಡುಗಳನ್ನು ಜಿಲ್ಲೆಯ ವಿವಿಧ ದೇವಾಲಯಗಳಿಗೆ ಆಗಮಿಸುವ ಭಕ್ತಾದಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಬಾಕಿ ಉಳಿದ ಲಾಡನ್ನು ತಾಳಬೆಟ್ಟ ಮತ್ತು ಪಾಲಾರ್‌ ಗಡಿಗಳಲ್ಲಿ ಭಕ್ತಾದಿಗಳಿಗೆ ಉಚಿತವಾಗಿ ವಿತರಿಸಿ, ದೇವಾಲಯಕ್ಕೆ ಪ್ರವೇಶ ನಿರ್ಬಂಧ ವಿಧಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next