Advertisement
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಶೈಕ್ಷಣಿಕ ಚಟುವಟಿಕೆ ತಡವಾಗಿ ಪ್ರಾರಂಭಗೊಂಡಿತ್ತು. ಇದರಿಂದ ಪ್ರೌಢ ಶಿಕ್ಷಣ ಮಂಡಳಿ ಅವಧಿ ಕಡಿತಗೊಳಿಸಿ ಎಸೆಸೆಲ್ಸಿ ಪರೀಕ್ಷೆಗೆ ಅಂದಾಜು ಸಮಯ ಪ್ರಕಟಿಸಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯುವ ನಿರೀಕ್ಷೆಯಿದೆ.
Related Articles
Advertisement
2020-21ನೇ ಸಾಲಿನಲ್ಲಿ ಪುತ್ತೂರು ತಾಲೂಕಿನ 4,772, ಸುಳ್ಯ ತಾಲೂಕಿನಲ್ಲಿ 1,864 ವಿದ್ಯಾರ್ಥಿಗಳು ಸೇರಿದಂತೆ 6,636 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪುತ್ತೂರಿನಲ್ಲಿ ಶೇ. 86.44, ಸುಳ್ಯದಲ್ಲಿ ಶೇ. 84.98 ಫಲಿತಾಂಶ ದಾಖಲಾಗಿತ್ತು.
ಉಭಯ ತಾಲೂಕಿನಲ್ಲಿ ಈ ಬಾರಿ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಬಾರಿಗಿಂತ ಪುತ್ತೂರಿನಲ್ಲಿ 324, ಸುಳ್ಯದಲ್ಲಿ 141 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.
ಪಠ್ಯ ವಿವರ ಕೈ ಸೇರಬೇಕಷ್ಟೆ :
ಜೂನ್ ಮೊದಲ ವಾರದಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ಸಿದ್ಧತೆಗೆ 6 ತಿಂಗಳ ಕಾಲಾವಕಾಶ ಇದೆ. ಪ್ರತೀ ಬಾರಿ ವಾರ್ಷಿಕ ಅವಧಿ ಯಲ್ಲಿ ಪರೀಕ್ಷೆ ನಡೆಯುವ ಕಾರಣ ಒಂದು ವರ್ಷಕ್ಕೆ ಅನುಗುಣವಾಗಿ ಪಠ್ಯ ನಿಗದಿ ಮಾಡಲಾಗುತಿತ್ತು. ಈ ಬಾರಿ ಅರ್ಧ ವಾರ್ಷಿಕ ಅವಧಿ ಇದ್ದು, ಹಾಗಾಗಿ ಪಠ್ಯ ಕಡಿತ ಗೊಳಿಸಲು ಚಿಂತನೆ ನಡೆದಿದ್ದು, ಈ ಬಗ್ಗೆ ಶೀಘ್ರ ಮಾಹಿತಿ ನೀಡ ಬೇಕು ಎನ್ನುವುದು ಪಾಲಕರ, ವಿದ್ಯಾ ರ್ಥಿಗಳ ಆಗ್ರಹ. ಈ ಬಗ್ಗೆ ವಿವರಗಳು ತಾಲೂಕು ಶಿಕ್ಷಣ ಇಲಾಖೆ ಕಚೇರಿಗಳಿಗೆ ಇನ್ನಷ್ಟೇ ಲಭಿಸಬೇಕಿದೆ.
ಸುಳ್ಯ ತಾಲೂಕಿನಲ್ಲಿ 2,005 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಹೊಂದಿದ್ದು, ಪಠ್ಯ ವಿವರಗಳು ಲಭ್ಯವಾದ ತತ್‌ಕ್ಷಣ ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಲು ಸಿದ್ಧಗೊಳಿಸಲಾಗುವುದು. –ಮಹಾದೇವ, ಕ್ಷೇತ್ರ ಶಿಕ್ಷಣಾಧಿಕಾರಿ ಸುಳ್ಯ