Advertisement

71 ಕೇಜಿ ಶ್ರೀಗಂಧ ಮರ ವಶ, ಓರ್ವ ಸೆರೆ

03:14 PM Oct 31, 2021 | Team Udayavani |

ಗುಂಡ್ಲುಪೇಟೆ: ಶ್ರೀಗಂಧದ ಮರ ಕಳವು ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಉಳಿದ 7 ಮಂದಿ ಪರಾರಿಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವಲಯದ ಮುಳ್ಳೂರು ಗುಡ್ಡ ಅರಣ್ಯ ಪ್ರದೇಶದಲ್ಲಿ ಜರುಗಿದೆ.

Advertisement

ಶಂಕರ್‌ ಬಿನ್‌ ಅಂಕರಾಜು ಬಂಧಿತ ವ್ಯಕ್ತಿ. ಈತನಿಂದ 71 ಕೆ.ಜಿ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ನಡೆಸುತ್ತಿದ್ದ 8 ಮಂದಿ ಆರೋಪಿಗಳು ಕೆ.ಆರ್‌.ಪೇಟೆ ತಾಲೂಕು ಅಕ್ಕಿಹೆಬ್ಟಾಳು ಹಾಗೂ ಮಂದ ಗೆರೆ ಗ್ರಾಮಗಳ ವಾಸಿಗಳಾಗಿದ್ದಾರೆ. ಇವರು ಮಂಡ್ಯ ವಿಭಾಗದ ಅರಣ್ಯ ಹಲವು ಪ್ರಕರ ಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:- ಮೋಟಾರು ವಾಹನಗಳ ಕಾಯ್ದೆ ತಿಳಿವಳಿಕೆ ಅಗತ್ಯ

ತಲೆ ಮರೆಸಿಕೊಂಡಿರುವ 7 ಮಂದಿ ವಿರುದ್ಧ ಅರಣ್ಯ ಕಾಯ್ದೆಯಡಿ ದೂರು ದಾಖಲಾಗಿದ್ದು, ಅರಣ್ಯ ಮತ್ತು ಪೊಲೀಸ್‌ ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಆರೋ ಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಆರ್‌. ನಟೇಶ್‌ ಹಾಗೂ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್‌ ಮಾರ್ಗ ದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next