Advertisement

ದೆಹಲಿಗೆ 700 ಟನ್ ಆಕ್ಸಿಜನ್ ಪೂರೈಸಿ : ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ

07:05 PM May 06, 2021 | Team Udayavani |

ನವ ದೆಹಲಿ : ದೆಹಲಿಯಲ್ಲಿನ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಪೂರೈಸಲು ದೆಹಲಿ ಸರ್ಕಾರವು ಕೋರಿದಂತೆ ರಾಷ್ಟ್ರ ರಾಜಧಾನಿಗೆ ಪ್ರತಿದಿನ ಕನಿಷ್ಠ 700 ಟನ್ ಆಮ್ಲಜನಕವನ್ನು ಪೂರೈಸಬೇಕೆಂದು ಸುಪ್ರೀಂ ಕೋರ್ಟ್ ಇಂದು(ಮೇ. 06) ಕೇಂದ್ರಕ್ಕೆ ತಿಳಿಸಿದೆ.

Advertisement

ನೀವು ದೆಹಲಿಗೆ 700 ಟನ್ ನೀಡಬೇಕಾಗುತ್ತದೆ (700 ಟನ್ ದೇನಾ ಹೈ ಪಡೇಗಾ)” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಏನನ್ನೂ ಮರೆಮಾಡಲು ಸಾಧ್ಯವಾಗದಿದ್ದರೆ, ಕೇಂದ್ರದಿಂದ ಹಂಚಿಕೆ ಮತ್ತು ವಿತರಣೆಯನ್ನು ಹೇಗೆ ಪಾರದರ್ಶಕವಾಗಿ ಮಾಡಲಾಗುತ್ತದೆ ಎಂಬುದನ್ನು ರಾಷ್ಟ್ರದ ಮುಂದೆ ಬರಲಿ”, “ದೆಹಲಿಗೆ 700 ಟನ್ ಆಮ್ಲಜನಕವನ್ನು ಸರಬರಾಜಿನ ಬಗ್ಗೆ ಕೇಂದ್ರವು ತಿರಸ್ಕಾರದಲ್ಲಿದೆ”  ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ಶ್ರೀನಿವಾಸ ಪೂಜಾರಿ ಸೂಚನೆ

ಇನ್ನು, ಬಗ್ಗೆ ಪ್ರತಿಕ್ರಿಯಿಸಿದ  ಕೇಂದ್ರ,  ಕೇಜ್ರಿವಾಲ್ ಸರ್ಕಾರವು ಸುಪ್ರೀಂಕೋರ್ಟ್ ಕೇಂದ್ರದ ವಿರುದ್ಧ ಮಾತನಾಡಲು ಬಳಸುತ್ತಿದೆ ಎಂದು ಹೇಳಿದೆ.

Advertisement

ವೈದ್ಯಕೀಯ ಸೌಲಭ್ಯಗಳ ಪೂರೈಕೆಯಲ್ಲಿ ವೈಫಲ್ಯ ಇರುವುದರಿಂದ ಲೆಕ್ಕಪರಿಶೋಧನೆ ನಡೆಯಬೇಕಿದೆ, ಆದರೆ ಅದು ರಾಜಕೀಯ ನಾಯಕತ್ವ ಅಥವಾ ಅಧಿಕಾರಿಗಳಿಗೆ ವಿರುದ್ಧವಾಗಿಲ್ಲ. ನಾವು ದೆಹಲಿ ಕೇಂದ್ರಿತರಾಗಲು ಸಾಧ್ಯವಿಲ್ಲ ಎಂದು ಹೇಳಿದರು ಕೇಂದ್ರಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ, ದೆಹಲಿಯಲ್ಲಿ ಸಮಸ್ಯೆಯುಂಟಾಗಿರುವುದು ಕೇಂದ್ರದಿಂದ ಪುರೈಕೆಯಾಗುತ್ತಿರುವುದರಿಂದಲ್ಲ. ಅಲ್ಲಿನ ಸರ್ಕಾರದ ವೈಫಲ್ಯದಿಂದ ಎಂದು ಆರೋಪಿಸಿದೆ.

ಇನ್ನು, ಇಂದು(ಗುರುವಾರ, ಮೇ.06) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರ್ಕಾರದಿಂದ ಪ್ರತಿದಿನ ದೆಹಲಿಗೆ 700 ಟನ್ ಆಕ್ಸಿಜನ್ ಪೂರೈಕೆಯಾದರೆ  ಆಮ್ಲಜನಕದ ಕೊರತೆಯಿಂದ ಸಾವಿನ ಪ್ರಶ್ನೆಯೇ ಬರುವುದಿಲ್ಲವೆಂದು ಹೇಳಿದ್ದರು.

ಓದಿ : ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಉಚಿತ ವಾಹನ ಸೇವೆ

Advertisement

Udayavani is now on Telegram. Click here to join our channel and stay updated with the latest news.

Next