ಹೊಸದಿಲ್ಲಿ: ಗುಜರಾತ್ನಲ್ಲಿ ಮತ್ತೊಂದು ಭಾರೀ ಮಾದಕದ್ರವ್ಯ ಜಾಲವನ್ನು ಭೇದಿಸಲಾಗಿದ್ದು, ಈ ಬಾರಿ ಕರಾವಳಿ ಯಲ್ಲಿ ಬರೋಬ್ಬರಿ 700 ಕೆ.ಜಿ. ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ತನ್ಮೂಲಕ ಕಳೆದ 1 ತಿಂಗಳಲ್ಲಿ 3ನೇ ಬಾರಿ ಮಾದಕ ವಸ್ತು ವಶದಲ್ಲಿ ಯಶಸ್ವಿಯಾಗಿ ದ್ದಾರೆ. ಇದರ ಮೌಲ್ಯ 1,400 ಕೋಟಿಯಿಂದ 3,500 ಕೋಟಿ ರೂ. ಆಗಬಹುದು.
ಮಾದಕ ದ್ರವ್ಯ ನಿಗ್ರಹ ಪಡೆಯ ನೇತೃತ್ವದಲ್ಲಿ ನೌಕಾಪಡೆ ಮತ್ತು ಪೊಲೀ ಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, 8 ಮಂದಿ ಇರಾನಿ ಪ್ರಜೆಗಳನ್ನು ಬಂಧಿಸಿ ದ್ದಾರೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಯನ್ನು ಆಧರಿಸಿ ಈ ದಾಳಿ ಕೈಗೊಳ್ಳಲಾಗಿದ್ದು, ಡ್ರಗ್ ಇದ್ದ ಹಡಗನ್ನು ನೌಕಾಪಡೆ ಗುರುತಿಸಿ ದಾಳಿ ನಡೆಸಿದೆ.
ಈ ಕಾರ್ಯವನ್ನು ಶ್ಲಾ ಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮ್ಮ ಅಧಿ ಕಾರಿಗಳು ವಿದೇಶಿ ಮಾದಕ ವಸ್ತು ಸಾಗ ಣೆಯನ್ನು ಪತ್ತೆ ಮಾಡಿ, ಅದನ್ನು ತಡೆದಿ ದ್ದಾರೆ. ಪ್ರಧಾನಿ ಮೋದಿ ಅವರ ಡ್ರಗ್ ಮುಕ್ತ ಭಾರತದ ಯೋಜನೆಗೆ ಇದು ಪೂರಕವಾಗಿದೆ ಎಂದು ಹೇಳಿದ್ದಾರೆ.
ಅ.13ರಂದು 5,000 ಕೋಟಿ ರೂ. ಮೌಲ್ಯದ ಕೊಕೇನ್ ಹಾಗೂ ಅ.29 ರಂದು 2.11 ಕೋಟಿ ರೂ. ಮೌಲ್ಯದ ಗಾಂಜಾವನ್ನು ಅಹ್ಮದಾಬಾದ್ನಲ್ಲಿ ವಶಪಡಿಸಿಕೊಳ್ಳಲಾಗಿತ್ತು.