Advertisement

Donating Kidney: ಕಿಡ್ನಿ ದಾನ ಮಾಡಿ ಸೊಸೆಯ ಜೀವ ಉಳಿಸಿದ 70 ವರ್ಷದ ಅತ್ತೆ

10:43 AM Aug 09, 2023 | Team Udayavani |

ಮುಂಬೈ: ಇತ್ತೀಚಿನ ದಿನಗಳಲ್ಲಿ ಸೊಸೆಯನ್ನು ಕಂಡರೆ ಅತ್ತೆಗೆ ಆಗುವುದಿಲ್ಲ, ಅತ್ತೆಯನ್ನು ಕಂಡರೆ ಸೊಸೆಗೆ ಆಗುವುದಿಲ್ಲ ಎಂಬ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಎಪ್ಪತ್ತು ವರ್ಷದ ಅತ್ತೆಯೇ ತನ್ನ ಕಿಡ್ನಿಯನ್ನು ದಾನ ಮಾಡಿ ಸೊಸೆಯ ಜೀವ ಉಳಿಸಿರುವ ಘಟನೆಯೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ.

Advertisement

ಕಳೆದ ಒಂದು ವರ್ಷದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಅಮೀಷಾ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇತ್ತೀಚಿಗೆ ಅವರ ಅರೋಗ್ಯ ಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು ಮೂತ್ರಪಿಂಡ ಕಸಿ ಮಾಡದಿದ್ದರೆ ಅವರ ಜೀವಕ್ಕೆ ಅಪಾಯ ಎದುರಾಗುವ ಸಂಭವ ಇದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಈ ವೇಳೆ ಅತ್ತೆ ಪ್ರಭಾ ತನ್ನ ಕಿಡ್ನಿಯನ್ನು ದಾನ ಮಾಡಲು ಮುಂದಾಗಿದ್ದಾರೆ ಈ ವಿಚಾರವನ್ನು ವೈದ್ಯರ ಬಳಿ ಹೇಳಿದಾಗ ವೈದ್ಯರು ಮಹಿಳೆಯ ಅರೋಗ್ಯ ತಪಾಸಣೆ ನಡೆಸಿದ ಬಳಿಕ ಕಿಡ್ನಿ ದಾನ ಮಾಡಲು ಸಾಧ್ಯವಿದೆ ಎಂದು ಹೇಳಿದ್ದಾರೆ. ಕೂಡಲೇ ಅತ್ತೆಯೂ ಇದಕ್ಕೆ ಒಪ್ಪಿಗೆ ನೀಡಿದ್ದು ಚಿಕಿತ್ಸೆ ನಡೆಸಿ ಅತ್ತೆಯ ಕಿಡ್ನಿಯನ್ನು ಸೊಸೆಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು. ಚಿಕಿತ್ಸೆ ಬಳಿಕ ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಇದನ್ನೂ ಓದಿ : Flexes and banners: ಫ್ಲೆಕ್ಸ್‌, ಬ್ಯಾನರ್‌ಗಳ ಹಾಕಿದ್ರೆ ಬೀಳುತ್ತೆ 50 ಸಾವಿರ ದಂಡ

Advertisement

Udayavani is now on Telegram. Click here to join our channel and stay updated with the latest news.

Next