Advertisement

Mumbai: ಮೊಬೈಲ್‌ ಕಳ್ಳರ ಗ್ಯಾಂಗ್‌ ಸೆರೆ- 70 ಮೊಬೈಲ್‌, 4.70 ಲಕ್ಷ ರೂಪಾಯಿ ನಗದು ವಶಕ್ಕೆ!

12:30 PM Oct 31, 2024 | Team Udayavani |

ಮುಂಬೈ: ನಗರದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್‌ ಕಳ್ಳತನ ಮಾಡುತ್ತಿದ್ದ ವ್ಯವಸ್ಥಿತ ಗ್ಯಾಂಗ್‌ ಅನ್ನು ವಿಪಿ ರಸ್ತೆ ಪೊಲೀಸರು ಪತ್ತೆ ಹಚ್ಚಿದ್ದು, ತಂಡದ ಐವರನ್ನು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

Advertisement

ಈ ಕಳ್ಳರ ಗ್ಯಾಂಗ್‌ ದಕ್ಷಿಣ ಮುಂಬೈ ಸುತ್ತಮುತ್ತ ಮುಖ್ಯವಾಗಿ ಗಿರ್ಗಾಂವ್‌, ಚೌಪಟ್ಟಿ ಮತ್ತು ಸುತ್ತಮುತ್ತ ಪ್ರದೇಶವನ್ನು ಗುರಿಯಾಗಿಸಿಕೊಂಡು, ಗಣಪತಿ ವಿಸರ್ಜನೆ ಸಂದರ್ಭದ ಸಮಯವನ್ನು ಬಳಸಿಕೊಂಡು ನೂಕುನುಗ್ಗಲಿನಲ್ಲಿ ಜನರ ಮೊಬೈಲ್‌ ಫೋನ್‌ ಗಳನ್ನು ಕಳವು ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಪಿ ರಸ್ತೆ ಪೊಲೀಸ್‌ ಅಧಿಕಾರಿಗಳ ಮಾಹಿತಿ ಪ್ರಕಾರ, ಆರೋಪಿಗಳನ್ನು ಮುಂಬೈ ಮತ್ತು ಗುಜರಾತ್‌ ನ ವಿವಿಧ ಸ್ಥಳಗಳಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್‌ ತನಿಖೆಯಲ್ಲಿ ಮೊಬೈಲ್‌ ವಶಕ್ಕೆ:

ಆರೋಪಿಗಳ ತನಿಖೆ ವೇಳೆ ವಿವಿಧ ಸ್ಥಳಗಳಲ್ಲಿ ಕಳವುಗೈದ ಮೊಬೈಲ್‌ ಫೋನ್‌ ಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ ಕಳ್ಳತನವಾದ ಬಗ್ಗೆ ಹಲವಾರು ದೂರುಗಳು ದಾಖಲಾದ ನಂತರ ಈ ಕಳ್ಳರ ಗ್ಯಾಂಗ್‌ ಅನ್ನು ಪತ್ತೆ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರ ವಿಶೇಷ ತಂಡ ವಿವಿಧ ಸ್ಥಳಗಳ ಸಿಸಿಟಿವಿ ಫೂಟೇಜ್‌ ಪರಿಶೀಲಿಸಿ ತನಿಖೆ ಕೈಗೆತ್ತಿಕೊಂಡಿದ್ದು, ಪ್ರಮುಖ ಸುಳಿವು ಆಧರಿಸಿ, ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ವರದಿ ವಿವರಿಸಿದೆ.

ಬಂಧಿತ ಆರೋಪಿಗಳಿಂದ ಪೊಲೀಸರು 70 ಮೊಬೈಲ್‌ ಫೋನ್‌ ಗಳು ಹಾಗೂ 4.70 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ದ ಬಿಎನ್‌ ಎಸ್‌ ಕಾಯ್ದೆ 303(2)ರ ಅಡಿ ಎಫ್‌ ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next