Advertisement

Kemmannu: ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅ. 27: “ಶತಾಭಿವಂದನಂ’ ಕೊಡುಗೆ ಅನಾವರಣ

01:19 AM Oct 25, 2024 | Team Udayavani |

ಉಡುಪಿ: ಕೆಮ್ಮಣ್ಣಿನಲ್ಲಿ ದಿ| ಪಿ. ವೆಂಕಟಕೃಷ್ಣ ರಾವ್‌, ದಿ| ಜನಾಬ್‌ ಆಲಿ ಸಾಹೇಬರಿಂದ 1923ರಲ್ಲಿ ಸ್ಥಾಪಿಸಲ್ಪಟ್ಟು ಶತಮಾನೋತ್ಸವ ಸಂಭ್ರಮದಲ್ಲಿರುವ ಕೆಮ್ಮಣ್ಣು ಗಣಪತಿ ಸಹಕಾರಿ ವ್ಯಾವಸಾಯಿಕ ಸಂಘದ “ಶತಾಭಿವಂದನಂ’ ಸಮಾರೋಪ ಸಂಭ್ರಮಾಚರಣೆ ಅ. 27ರ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಕೆಮ್ಮಣ್ಣು ಸ.ಪ.ಪೂ. ಕಾಲೇಜಿನ ಮೈದಾನದಲ್ಲಿ ಜರಗಲಿದೆ ಎಂದು ಸಂಘದ ಅಧ್ಯಕ್ಷ ಟಿ. ಸತೀಶ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಉದ್ಘಾಟಿಸಲಿದ್ದು, ಮಾಜಿ ಲೋಕಾಯುಕ್ತ ನ್ಯಾ| ಎನ್‌. ಸಂತೋಷ್‌ ಹೆಗ್ಡೆ ದೀಪ ಬೆಳಗಿಸುವರು ಎಂದರು.

ಮಣಿಪಾಲ ಡಾ| ಟಿ.ಎಂ.ಎ. ಪೈ ಫೌಂಡೇಶನ್‌ ಅಧ್ಯಕ್ಷ ಅಶೋಕ್‌ ಪೈ ಅವರು ವಿವಿಧ ಕೊಡುಗೆಗಳನ್ನು ಅನಾವರಣ ಗೊಳಿಸುವರು. ಸಂಘದ ಅಧ್ಯಕ್ಷ ಟಿ. ಸತೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಕೆಮ್ಮಣ್ಣು ಸಂತ ತೆರೇಸಾ ಚರ್ಚ್‌ನ ಧರ್ಮಗುರು ರೆ| ಫಾ| ಫಿಲಿಪ್‌ ನೇರಿ ಅರಾನ್ಹ ಶುಭಾಶಂಸನೆಗೈಯಲಿದ್ದಾರೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಶಾಸಕ ಯಶ್‌ಪಾಲ್‌ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್‌, ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಜಿ.ಟಿ. ದೇವೇಗೌಡ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಮಾಜಿ ಸಚಿವರಾದ ಕೆ. ಜಯಪ್ರಕಾಶ್‌ ಹೆಗ್ಡೆ, ಪ್ರಮೋದ್‌ ಮಧ್ವರಾಜ್‌, ಕಾಂಚನ ಹ್ಯುಂಡೈನ ಎಂಡಿ ಪ್ರಸಾದ್‌ರಾಜ್‌ ಕಾಂಚನ್‌, ಹೂಡೆ ಬೀಚ್‌ ಹೀಲಿಂಗ್‌ ಸೆಂಟರ್‌ನ ಡಾ| ಮಹಮ್ಮದ್‌ ರಫೀಕ್‌, ಉಡುಪಿ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯಾ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕಿ ರೇಣುಕಾ ಜಿ.ಎಸ್‌., ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು, ಅಶೋಕ್‌ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್‌ ರಾವ್‌ ಪಾಂಗಾಳ, ಕೆಮ್ಮಣ್ಣು ಪ.ಪೂ. ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ರಾವ್‌, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ, ತೋನ್ಸೆ ಗ್ರಾ.ಪಂ. ಅಧ್ಯಕ್ಷೆ ಕುಸುಮಾ ರವೀಂದ್ರ, ಕಲ್ಯಾಣಪುರ ಗ್ರಾ.ಪಂ. ಅಧ್ಯಕ್ಷ ನಾಗರಾಜ ಕುಂದರ್‌, ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಡಿ. ನಾಯಕ್‌, ಬಡಾನಿಡಿಯೂರು ಗ್ರಾ.ಪಂ. ಅಧ್ಯಕ್ಷೆ ಯಶೋದಾ ಆಚಾರ್ಯ ಉಪಸ್ಥಿತರಿ ರಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮ್ಮಾನ, ನೆರವು
ಕುಂದಾಪುರ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್‌ ಕುಮಾರ್‌ ಎಸ್‌.ವಿ., ಹಿರಿಯ ಸಹಕಾರಿ ಸರಳಾ ಬಿ. ಕಾಂಚನ್‌, ಯೋಧ ಕಿಶನ್‌, ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ನಿವೃತ್ತ ಸಿಬಂದಿ ವರ್ಗದವರನ್ನು ಗೌರವಿಸಲಾಗುವುದು. ಶತಮಾನೋತ್ಸವದ ಸಂಭ್ರಮದಲ್ಲಿ ಶತಾಯುಷಿಗೆ ಸಮ್ಮಾನ, ಆರೋಗ್ಯ-ರಕ್ತದಾನ ಶಿಬಿರ, ಸಹಕಾರಿ ಹಾಗೂ ನವೋದಯ ಕ್ರೀಡಾಕೂಟ, ಶಾಲೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ನೆರವು, ಕೊಡುಗೆಗಳನ್ನು ನೀಡಲಾಗಿದೆ ಎಂದು ಸತೀಶ್‌ ಶೆಟ್ಟಿ ತಿಳಿಸಿದರು.

Advertisement

ಬೆಳಗ್ಗೆ 8ಕ್ಕೆ ಧ್ವಜಾರೋಹಣ, 9ಕ್ಕೆ ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಅವರಿಂದ ಸಹಕಾರಿ ಜಾಥಾಕ್ಕೆ ಚಾಲನೆ, ಯಕ್ಷನಾಟ್ಯ ವೈಭವ, ತೋನ್ಸೆ ಪುಷ್ಕಳ ಕುಮಾರ್‌ ಅವರಿಂದ ಸಂಗೀತ ರಸಮಂಜರಿ, ಕುದ್ರೋಳಿ ಗಣೇಶ್‌ ಅವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಬಿ. ಅಫ್ಜಲ್‌ ಸಾಹೇಬ್‌, ನಿರ್ದೇಶಕ ರಾಘವೇಂದ್ರ ಪ್ರಸಾದ್‌, ಸಿಇಒ ಮಹೇಶ್‌ ಸಾಲ್ಯಾನ್‌, ಶಾಖಾ ವ್ಯವಸ್ಥಾಪಕ ಕಿಶೋರ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next