ಮಂಡ್ಯ: ಗ್ರಾಮೀಣ ಶಾಲೆಗಳಲ್ಲಿ ಕಲಿಯುವ ಶೇ.70ರಷ್ಟು ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದಲ್ಲಿ ಅನುತೀರ್ಣರಾಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಭಯ ಹಾಗೂ ಕೀಳರಿಮೆ ಉಂಟಾಗುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಪ್ರೊ.ಬಿ.ಆರ್.ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.
ಇಂಗ್ಲಿಷ್‌ನಿಂದ ಆತಂಕ ಸೃಷ್ಟಿ: ಶಿಕ್ಷಣ ವ್ಯವಸ್ಥೆಯಲ್ಲಿ ಮೂರರಿಂದ ನಾಲ್ಕನೇ ತರಗತಿವರೆಗೆ ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಕಲಿಯಲಿ. ಆದರೆ, ಅದಕ್ಕೆ ಪರೀಕ್ಷೆ ಇರಬಾರದು. ಇಂದಿನ ಶಿಕ್ಷಕರು ಇಂಗ್ಲಿಷ್ ಹೇಳಿಕೊಡುತ್ತಿರುವುದನ್ನು ನೋಡಿದರೆ ಮಕ್ಕಳು ಸತ್ತುಹೋಗುತ್ತಾರೆ. ಅದೇನು ಕಲಿತು ಹೇಳಿಕೊಡುತ್ತಾರೋ ಗೊತ್ತಿಲ್ಲ ಎಂದ ಅವರು, ಪ್ರಸ್ತುತ ಅಧಿಕಾರದಲ್ಲಿರುವ ರಾಜ್ಯ ಸರ್ಕಾರದಿಂದಲೂ ಮಾತೃಭಾಷಾ ಶಿಕ್ಷಣಕ್ಕೆ ಒತ್ತುಕೊಡಲು ಸಾಧ್ಯವಿಲ್ಲ. ಕಾರಣ ಬಿಜೆಪಿ ಏನೇ ಮಾಡಬೇಕಾದರೂ ಆರ್‌ಎಸ್‌ಎಸ್ ಆಜ್ಞೆ ಪಾಲಿಸಲೇಬೇಕಾಗುತ್ತದೆ ಎಂದರು.
ಕನ್ನಡದಲ್ಲಿ ಅನ್ನ ಕೊಡುವ ಶಕ್ತಿ: ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಮಾತೃಭಾಷೆಯಲ್ಲೇ ದೊರಕಬೇಕು. ಆನಂತರ ಮಕ್ಕಳು ಯಾವುದೇ ಭಾಷೆಯನ್ನು ಕಲಿಯುವುದಕ್ಕೆ ಅವಕಾಶ ಮಾಡಿಕೊಡಬೇಕು. ಇಂಗ್ಲಿಷ್ ಎಂಬ ಪೆಡಂಭೂತವನ್ನು ಮೊದಲು ತಲೆಯಿಂದ ತೆಗೆದುಹಾಕಬೇಕು. ಇಂಗ್ಲಿಷ್ ಕಲಿಯದಿದ್ದರೆ ಬದುಕೇ ಇಲ್ಲ ಎಂಬಂಥ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಶಬ್ಧ ಸಂಪತ್ತನ್ನು ತುಂಬಿಕೊಂಡಿರುವ ಭಂಡಾರವಾಗಿದೆ. ಜೀವನವನ್ನು ರೂಪಿಸುವ, ಅನ್ನ ಕೊಡುವ ಶಕ್ತಿ ಕನ್ನಡಕ್ಕಿದೆ. ಇದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ. ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಬದುಕು ಕಟ್ಟಿಕೊಂಡಿರುವವರು ನಮ್ಮ ಕಣ್ಮುಂದೆ ಇದ್ದರೂ ಯಾರೂ ಸಹ ಅವರತ್ತ ತಿರುಗಿ ನೋಡುತ್ತಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ಮಂಜುನಾಥ್, ಮಹಿಳಾಧ್ಯಕ್ಷೆ ಸೌಭಾಗ್ಯಶಿವಲಿಂಗು, ನಗರಾಧ್ಯಕ್ಷ ಶಿವಾಲಿ, ಮಂಜುನಾಥ್, ರಾಜು, ಅಸ್ಲಂಪಾಷ, ವಿನಯ್, ಸತೀಶ್ ಪಾಲ್ಗೊಂಡಿದ್ದರು.
Advertisement
ನಗರದ ಪ್ರವಾಸಿಮಂದಿರದಲ್ಲಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕ ಆಯೋಜಿಸಿದ್ದ ಕನ್ನಡ ಮಾಧ್ಯಮ-ಇಂಗ್ಲಿಷ್ ಭಾಷೆ ಕುರಿತ ವಿಚಾರ ಸಂಕಿರಣ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Related Articles
ಯೋಗ, ಸಂಗೀತ ಒತ್ತಡ ಕಡಿತಕ್ಕೆ ಅನುಕೂಲ:
ನಾನು ಶಿಕ್ಷಣ ಸಚಿವನಾಗಿದ್ದಾಗ ಪುಸ್ತಕದ ಹೊರೆ ಇಳಿಸಿದ್ದೆ. ತ್ತೈಮಾಸಿಕ ಪರೀಕ್ಷೆ ವ್ಯವಸ್ಥೆ ಜಾರಿಗೆ ತಂದಿದ್ದೆ. ಆದರೆ, ವರ್ಷಕ್ಕೊಂದು ಪರೀಕ್ಷೆ ಮಾಡಬೇಕೆಂಬ ಸಾಂಕ್ರಾಮಿಕ ರೋಗ ಈ ದೇಶದಲ್ಲಿದೆ. ಫಸ್ಟ್r ರ್‍ಯಾಂಕ್, ಸೆಕೆಂಡ್ ರ್‍ಯಾಂಕ್ ಹಾಕದಿದ್ದರೆ ಉತ್ತೇಜನ ಸಿಗಲ್ವಂತೆ. ಈಗ ಎಂಟನೇ ತರಗತಿ ಫೇಲಾದ ಮಕ್ಕಳು ನೇಣಿಗೆ ಶರಣಾಗುತ್ತಿದ್ದಾರೆ. ಯೋಗ, ಸಂಗೀತ ವಿಷಯಗಳನ್ನು ಸೇರ್ಪಡೆಗೊಳಿಸಿದ್ದೆ. ಕಾರಣ ಗಣಿತ ಹಾಗೂ ವಿಜ್ಞಾನ ಪಾಠ ಕೇಳಿ ಒತ್ತಡ ಇರುತ್ತದೆ. ಅದರಿಂದ ಮಕ್ಕಳ ಒತ್ತಡ ಕಡಿಮೆ ಮಾಡಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಆ ಎಲ್ಲವನ್ನು ನಂತರ ಮುಂದುವರಿಸಲಿಲ್ಲ ಇದು ಬೇಸರದ ಸಂಗತಿ ಎಂದು ಮಾಜಿ ಶಿಕ್ಷಣ ಸಚಿವ ಪ್ರೊ.ಬಿ.ಆರ್.ಚಂದ್ರಶೇಖರ್ ತಿಳಿಸಿದರು.
Advertisement