Advertisement

ಮಂಗಳೂರು: ಲಿಫ್ಟ್‌ನಲ್ಲಿ  ಸಿಲುಕಿ 7 ವರ್ಷದ ಬಾಲಕ ದಾರುಣ ಸಾವು

08:56 AM Aug 24, 2018 | Team Udayavani |

ಮಂಗಳೂರು: ನಗರದ ಯೂನಿಟಿ ಆಸ್ಪತ್ರೆ ಪಕ್ಕದ ಬಹುಮಹಡಿ ಅಪಾರ್ಟ್‌ಮೆಂಟ್‌ನ ಲಿಫ್ಟ್‌ ಬಾಗಿಲಿನಲ್ಲಿ ಸಿಲುಕಿ 7 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

Advertisement

ನಗರದ ಬರಾಕಾ ಶಾಲೆಯ 1ನೇ ತರಗತಿ  ವಿದ್ಯಾರ್ಥಿ ಸಿಮಾಕ್‌ ಮೃತ ಬಾಲಕ. ಬಾಲಕ ಲಿಫ್ಟ್ನ ಒಳಗೆ ಹೋಗುವ ಷ್ಟರಲ್ಲೇ ಬಾಗಿಲು ಮುಚ್ಚಿ ಕೊಂಡು ಕೆಳಗಡೆಗೆ ಚಲಿಸಲಾರಂಭಿ ಸಿತು. ತಲೆಭಾಗ ಲಿಫ್ಟ್‌ ಬಾಗಿಲಲ್ಲಿ ಸಿಲುಕೊಂಡಿತು. ಸ್ವಲ್ಪ ಕೆಳಕ್ಕೆ ಚಲಿಸಿದ ಲಿಫ್ಟ್‌ ಜಾಮ್‌ ಆಗಿ ನಿಂತಿದೆ. 

ಬಾಲಕ ಆಕ್ರಂದನವನ್ನು ಆಲಿಸಿದ ತಾಯಿ ಕೂಡ ಬೊಬ್ಬೆ ಹಾಕಿದ್ದು, ಕೂಡಲೇ ಫ್ಲ್ಯಾಟ್‌ನಲ್ಲಿದ್ದ ಉಳಿ ದವರೆಲ್ಲ ಸ್ಥಳಕ್ಕೆ ಓಡಿ ಬಂದರು. ಎಷ್ಟೇ ಪ್ರಯತ್ನ ಪಟ್ಟರೂ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕೂಡಲೇ ಕದ್ರಿ ಠಾಣೆ ಪೊಲೀಸರು, ಅಗ್ನಿಶಾಮಕ ದಳದವರಿಗೂ ಮಾಹಿತಿ ನೀಡಲಾಯಿತು.

ಪೊಲೀಸರು, ಅಗ್ನಿಶಾಮಕ ಸಿಬಂದಿ ಧಾವಿಸಿ ಬರುವ ಮುನ್ನವೇ ಸ್ಥಳೀಯರೇ ಬಾಗಿಲು ಮುರಿದು ಲಿಫ್ಟ್‌ ತೆರೆದರು. ಮಗುವನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗು ಉಸಿರುಗಟ್ಟಿ ಮೃತಪಟ್ಟಿತ್ತು.

ಗಲ್ಫ್ ನಲ್ಲಿದ್ದರು
ಅಡ್ಡೂರು ಮೂಲದ ಈ ಕುಟುಂಬ ಗಲ್ಫ್ ನಲ್ಲಿ ವಾಸ ವಾಗಿತ್ತು. ಮಗನ ವಿದ್ಯಾಭ್ಯಾಸಕ್ಕೆಂದು ಮೂರು ತಿಂಗಳ ಹಿಂದೆಯಷ್ಟೇ ತಾಯಿ, ಮಕ್ಕಳು ಮಂಗಳೂರಿಗೆ ಆಗಮಿಸಿ ಈ ಫ್ಲಾ  ಟ್‌ನಲ್ಲಿ ವಾಸ ವಾಗಿದ್ದರು. ತಂದೆ ಮಾತ್ರ ಈಗಲೂ  ಗಲ್ಫ್ ನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮೂವರು ಮಕ್ಕಳ ಪೈಕಿ ಮೃತಪಟ್ಟಿರುವ ಸಿಮಾಕ್‌ 2ನೇ ಮಗು.

Advertisement

ಸೆನ್ಸರ್‌ ಇಲ್ಲದ ಲಿಫ್ಟ್
ಗುರುವಾರ ರಾತ್ರಿ ಸುಮಾರು 7 ಗಂಟೆ ವೇಳೆಗೆ ತಾಯಿಯು ತನ್ನ ಮೂವರು ಮಕ್ಕಳನ್ನು ಕರೆದು ಕೊಂಡು ಹೊರಗಡೆ ಟ್ಯೂಷನ್‌ಗೆ ಹೋಗುವುದಕ್ಕೆ ಹೊರ ಟಿದ್ದರು. ಮಕ್ಕಳು ಹೊರಗಡೆ ಬಂದ ಬಳಿಕ ತಾಯಿಯು, ಫ್ಲ್ಯಾಟ್‌ಗೆ ಬೀಗ ಹಾಕುತ್ತಿದ್ದರು. ಈ ಸಂದರ್ಭ  ಮಗು ಸಿಮಾಕ್‌ ಮೊದಲ ಮಹಡಿ ಯಲ್ಲಿ ರುವ ತಮ್ಮ ಫ್ಲ್ಯಾಟ್‌ನಿಂದ ಹೊರಗೆ ಹೋಗಲು ಲಿಫ್ಟ್‌ನ ಬಳಿ ಬಂದು ಒಬ್ಬನೇ ಒಳಗೆ ಹೋಗಿದ್ದಾನೆ. ಆದರೆ ಅದು ಹಳೇ ಮಾದರಿಯ ಲಿಫ್ಟ್‌ ಆಗಿದ್ದು, ಅದಕ್ಕೆ ಸೆನ್ಸರ್‌ ವ್ಯವಸ್ಥೆ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next