Advertisement

Tragedy: ಧಾರ್ಮಿಕ ಕಾರ್ಯಕ್ರಮ ವೇಳೆ ಮಳೆ; ಶೆಡ್‌ ಮೇಲೆ ಮರ ಬಿದ್ದು 7 ಮಂದಿ ಭಕ್ತರು ಮೃತ್ಯು

09:18 AM Apr 10, 2023 | Team Udayavani |

ಮಹಾರಾಷ್ಟ್ರ: ಬೃಹತ್‌ ಮರಬಿದ್ದು ಕನಿಷ್ಠ 7 ಮಂದಿ ಮೃತಪಟ್ಟು, 5 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ಭಾನುವಾರ ( ಏ.9 ರಂದು) ಸಂಜೆ ನಡೆದಿರುವುದು ವರದಿಯಾಗಿದೆ.

Advertisement

ಅಕೋಲಾದ ಪಾರಸ್ ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ನೂರಾರು ಭಕ್ತರು ಆಗಮಿಸಿದ್ದರು. ಮಳೆ ಜೋರಾಗಿ ಬರುತ್ತಿದ್ದ ಕಾರಣ ತಗಡಿನ ಶೆಡ್‌ ನ ಕೆಳಗೆ 35 -40 ಜನರು ನಿಂತಿದ್ದರು. ಈ ವೇಳೆ ಮಳೆಯೊಟ್ಟಿಗೆ ಜೋರಾದ ಗಾಳಿಯೂ ಬೀಸಿದ ಪರಿಣಾಮ ಶೆಡ್‌ ನ ಪಕ್ಕದಲ್ಲಿದ್ದ ಬೃಹತ್‌ ಬೇವಿನ ಮರ ಶೆಡ್‌ ನ ಮೇಲೆ ಬಿದ್ದಿದೆ. ಇದರಿಂದ ಭಕ್ತರು ಅತ್ತಿತ್ತ ಓಡಿದ್ದಾರೆ. ಆದರೆ ಇದರಲ್ಲಿ 7 ಮಂದಿ ಸಾವಿಗೀಡಿದ್ದಾರೆ. 5 ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ತ್ರಿಶೂಲ ಹಿಡಿದು ಬೀದಿಗೆ ಇಳಿಯದೇ ಇದ್ದರೆ.. ಮುಸ್ಲಿಂಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ: FIR

ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ತುಂಡಾಗಿ ಬಿದ್ದ ಮರವನ್ನು ಮತ್ತು ಕುಸಿದ ಶೆಡ್ ಅನ್ನು ಮೇಲೆತ್ತಲು ಜೆಸಿಬಿ ಯಂತ್ರಗಳನ್ನು ತರಲಾಗಿದೆ. ಆ ಬಳಿಕ ಒಂದೊಂದೇ ಮೃತದೇಹ ಹಾಗೂ ಗಾಯಾಳುಗಳನ್ನು ಹೊರ ತೆಗೆಯಲಾಗಿದೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಾವಿಗೆ ಸಂತಾಪ ಸೂಚಿಸಿದ್ದು, ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದೆ ಎಂದು ಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next