Advertisement

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

09:48 AM Jun 25, 2024 | Team Udayavani |

ಭಟ್ಕಳ: ಮಾತನಾಡಲೆಂದು ದಾಂಡೇಲಿಯಿಂದ ಭಟ್ಕಳಕ್ಕೆ ಕರೆಯಿಸಿ ಏಳು ತಿಂಗಳ ಮಗುವನ್ನು ಅಪಹರಣ ಮಾಡಿರುವ ಘಟನೆಯೊಂದು ಭಟ್ಕಳದಲ್ಲಿ ನಡೆದಿದ್ದು ಈ ಕುರಿತು ಮಗುವಿನ ತಂದೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಾಗಿದೆ.

Advertisement

ಸೋಮವಾರ ಸಂಜೆ ನಗರ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ಓರ್ವ ಗಂಡಸು ಹಾಗೂ ಇಬ್ಬರು ಹೆಂಗಸರು ದಾಂಡೇಲಿಯ ನಮ್ಮ ಮನೆಗೆ ಬಂದು ತಮ್ಮ ಪರಿಚಯವನ್ನು ಮಾಡಿಕೊಂಡು ಹೋಗಿದ್ದರು. ಇದಾದ ನಂತರ ಅವರು ನನಗೆ ಕರೆ ಮಾಡಿ ಭಟ್ಕಳಕ್ಕೆ ಒಮ್ಮೆ ಬಂದು ಹೋಗುವಂತೆ ವತ್ತಾಯ ಮಾಡಿದ್ದಾರೆ ಅದರಂತೆ ನಾವು ಜೂನ್.೧೮ರಂದು ರಾತ್ರಿ ಭಟ್ಕಳದ ಆಲ್ ಖಲೀಜ್ ಹೋಟೆಲ್ ಬಳಿ ಬಂದು ದೂರವಾಣಿ ಕರೆ ಮಾಡಿದಾಗ ಮೂವರು ಬಂದು ನಮ್ಮನ್ನು ಮಾತನಾಡಿಸಿ ತನ್ನ ಹೆಂಡತಿ ಬಳಿ ಇದ್ದ 7 ತಿಂಗಳ ಮಗುವನ್ನು ಎತ್ತಿಕೊಂಡು ಈಗ ಬರುತ್ತೇವೆ ಎಂದು ಹೋದವರು ನಂತರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ನಂತರ ನಮ್ಮ ಮೊಬೈಲ್‌ಗೆ ವಿಡಿಯೋ ಕರೆ ಮಾಡಿ ಮಗುವನ್ನು ತೊರಿಸಿ ಮಗು ಆರಾಮವಾಗಿ ಇರುವುದಾಗಿ ಹೇಳಿದ್ದು ಮಗುವನ್ನು ತಮಗೆ ಮರಳಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಮಗುವಿನ ಅಪಹರಣ ಮಾಡಿರುವ ಕುರಿತು ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಹೆದರಿ ಆತ್ಮಹತ್ಯೆಗೆ ಶರಣಾದ ಬಾಲಕ

Advertisement

Udayavani is now on Telegram. Click here to join our channel and stay updated with the latest news.

Next