ಹರ್ಯಾಣದಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ಪಣತೊಟ್ಟಿದ್ದು, ಪಕ್ಷೇತರರನ್ನು ಸೆಳೆಯಲು ತಂತ್ರ ಹೂಡಿದೆ. ಅದರ ಫಲವೆಂಬಂತೆ, ಗುರುವಾರ ಸಂಜೆಯೇ ಪಕ್ಷೇತರ ಶಾಸಕ ರಂಜಿತ್ ಸಿಂಗ್, ಹರ್ಯಾಣ ಲೋಕಹಿತ್ ಪಾರ್ಟಿಯ ಶಾಸಕ ಗೋಪಾಲ್ ಕಂಡಾ ಅವರು ಖಾಸಗಿ ವಿಮಾನದಲ್ಲಿ ದೆಹಲಿಗೆ ದೌಡಾಯಿಸಿದ್ದಾರೆ. ಇನ್ನೊಂದೆಡೆ, ಬಿಜೆಪಿಯಿಂದ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಐವರು ಪಕ್ಷೇತರ ಶಾಸಕರು ಈಗ ಬಿಜೆಪಿಗೆ ಬೆಂಬಲ ಸೂಚಿಸುವುದಾಗಿ ಘೋಷಿಸಿದ್ದಾರೆ ಎಂದು ಹೇಳಲಾಗಿದೆ.
8 ಸಚಿವರ ಸೋಲು
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಬಿಜೆಪಿಯ 10 ಸಚಿವರ ಪೈಕಿ 8 ಮಂದಿ ಸೋಲುಂಡಿದ್ದು, ಕೇವಲ ಇಬ್ಬರು ಮಾತ್ರ ಗೆಲುವು ಸಾಧಿಸುವಲ್ಲಿ ಸಫಲವಾಗಿದ್ದಾರೆ. 5 ಬಾರಿ ಶಾಸಕರಾಗಿದ್ದ ಅನಿಲ್ ವಿಜ್ ತಮ್ಮ ಭದ್ರಕೋಟೆ ಅಂಬಾಲಾವನ್ನು ಉಳಿಸಿಕೊಂಡಿದ್ದಾರೆ. ಗೆದ್ದಿರುವ ಮತ್ತೂಬ್ಬ ಸಚಿವರೆಂದರೆ ಬವಾನ್‌ನಲ್ಲಿ ಕಣಕ್ಕಿಳಿದಿದ್ದ ಬನ್ವರಿಲಾಲ್.