Advertisement

ಒಂದು ಗ್ಯಾಪ್‌ನ ನಂತರ! ಹೊಸ ಕನಸು; ಹೊಸ ನಿರೀಕ್ಷೆ

05:10 PM Nov 09, 2017 | |

ಈ ವಾರ ಏಳು ಚಿತ್ರಗಳು ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಪೈಕಿ ಮೂರು ಚಿತ್ರಗಳು ಆ ಚಿತ್ರದ ಹೀರೋಗಳಿಗೆ ಬಹಳ ಮಹತ್ವದ್ದು ಎಂದರೆ ತಪ್ಪಿಲ್ಲ. ಕಾರಣ, ಮೂರೂ ಚಿತ್ರಗಳು ಆ ಹೀರೋಗಳಿಗೆ ಒಂದರ್ಥದಲ್ಲಿ ಕಂಬ್ಯಾಕ್‌ ಸಿನಿಮಾ ಎಂದರೆ ತಪ್ಪಿಲ್ಲ. ಮೂವರೂ ಈಗಾಗಲೇ ಚಿತ್ರಗಳಲ್ಲಿ ನಟಿಸಿದವರೇ. ಹೆಸರು, ಯಶಸ್ಸು ಕಂಡವರೇ. ಆದರೆ, ಇತ್ತೀಚೆಗೆ ಈ ಮೂವರ ಯಾವೊಂದು ಸಿನಿಮಾ ಸಹ ಬಿಡುಗಡೆಯಾಗಿರಲಿಲ್ಲ. ಒಂದು ದೊಡ್ಡ ಗ್ಯಾಪ್‌ನ ನಂತರ ಆ ಹೀರೋಗಳ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ, ಮೂವರೂ ಸಹ ಬಹಳ ಕುತೂಹಲ ಮತ್ತು ನಿರೀಕ್ಷೆಗಳಿಂದ ಆ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಅಂದಹಾಗೆ, ಆ ಹೀರೋಗಳ ಹೆಸರು ಚೇತನ್‌ ಚಂದ್ರ, ವಿಕ್ಕಿ ಮತ್ತು ನಿರಂಜನ್‌ ಶೆಟ್ಟಿ. ಈ ಮೂವರು ಕ್ರಮವಾಗಿ ಅಭಿನಯಿಸಿರುವ “ಸಂಯುಕ್ತಾ 2′, “ಕಾಲೇಜ್‌ ಕುಮಾರ್‌’ ಮತ್ತು “ರಾಜರು’ ಚಿತ್ರಗಳು ನಾಳೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಿತ್ರದ ಬಿಡುಗಡೆ ಮತ್ತು ಈ ಗ್ಯಾಪ್‌ನಲ್ಲಿ ಏನೆಲ್ಲಾ ಆಯಿತು ಎಂಬುದನ್ನು ಮೂವರೂ ಹಂಚಿಕೊಂಡಿದ್ದಾರೆ.

Advertisement

ಚೇತನ್‌ ಮೊಗದಲ್ಲಿ ಮಂದಹಾಸ: ಚೇತನ್‌ ಚಂದ್ರ ಅಭಿನಯದ “ಕುಂಭರಾಶಿ’ ಬಗ್ಗೆ ಎಲ್ಲೆಡೆ ಮೆಚ್ಚುಗೆ ಇತ್ತಾದರೂ, ಚಿತ್ರ ಹೇಳುವಂತಹ ಗೆಲುವು ಕೊಡಲಿಲ್ಲ. ಆದರೆ, ಚೇತನ್‌ಚಂದ್ರ ಅವರಿಗೆ ಮಾತ್ರ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು ಸುಳ್ಳಲ್ಲ. ಆ ಚಿತ್ರಕ್ಕಾಗಿ ಚೇತನ್‌ ಸಾಕಷ್ಟು ಕಸರತ್ತು ನಡೆಸಿದ್ದರು. ಏಯ್‌rಪ್ಯಾಕ್‌ ಮಾಡಿಕೊಳ್ಳುವ ಮೂಲಕ ಕ್ಯಾಮೆರಾ ಮುಂದೆ ಬಂದು ನಿಂತಿದ್ದರು. ಆ ಚಿತ್ರಕ್ಕಾಗಿ ಅತಿ ಹೆಚ್ಚು ಕಸರತ್ತು ನಡೆಸಿದ್ದರು ಎಂಬುದು ಎಷ್ಟು ನಿಜವೋ, ಅದಕ್ಕಿಂತಲೂ ಹೆಚ್ಚು ವಕೌìಟ್‌ “ಸಂಯುಕ್ತ 2′ ಚಿತ್ರಕ್ಕೆ ಮಾಡಿಕೊಂಡಿದ್ದಾರೆ. ಇದೊಂದು ಹಾರರ್‌ ಸಿನಿಮಾವಾಗಿದ್ದರೂ, ಮಾಮೂಲಿ ಹಾರರ್‌ ಚಿತ್ರವಲ್ಲ. ಮೊದಲ ಬಾರಿಗೆ ಇದೊಂದು ಸಂದೇಶ ಸಾರುವಂತಹ ಹಾರರ್‌ ಕಮ್‌ ಥ್ರಿಲ್ಲರ್‌ ಚಿತ್ರದಲ್ಲಿ ನಟಿಸಿರುವ ಚೇತನ್‌ ಚಂದ್ರಗೆ ಸಿನಿಮಾ ಮೂಡಿಬಂದಿರುವ ರೀತಿ ಸಖತ್‌ ಖುಷಿ ಕೊಟ್ಟಿದೆ. 

ಇನ್ನು, ನಿರ್ಮಾಪಕ ಡಾ.ಮಂಜುನಾಥ್‌ ಅವರು ಈ ಚಿತ್ರವನ್ನು ದೇಶದ ಯೋಧರಿಗೆ ಅರ್ಪಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸಿನಿಮಾದಿಂದ ಬಂದ ಒಂದಷ್ಟು ಹಣವನ್ನು ಸಹ ಯೋಧರಿಗೆ ಕೊಡುವ ನಿರ್ಧಾರ ಮಾಡಿದ್ದಾರೆ. ಇದು ಸಹಜವಾಗಿಯೇ ಚೇತನ್‌ಚಂದ್ರ ಅವರಿಗೂ ಖುಷಿಕೊಟ್ಟಿದೆ. ತಾಂತ್ರಿಕತೆಯಲ್ಲಿ ಹೊಸ ವಿಧಾನಗಳನ್ನು ಅನುಸರಿಸಿರುವ “ಸಂಯುಕ್ತ 2′ ಹೊಸತನವನ್ನು ಕಟ್ಟಿಕೊಡುವ ವಿಶ್ವಾಸ ಚಿತ್ರತಂಡಕ್ಕಿದೆ. ಸಿನಿಮಾದ ಗ್ರಾಫಿಕ್ಸ್‌ ಚಿತ್ರದ ಹೈಲೈಟ್‌. ಅದಕ್ಕಾಗಿಯೇ ಸಾಕಷ್ಟು ವೆಚ್ಚವಾಗಿರುವುದರಿಂದ ನೋಡುಗರಿಗೆ ಹೊಸ ಫೀಲ್‌ ತುಂಬಿಕೊಡುತ್ತೆ ಎಂಬುದು ಚೇತನ್‌ ಮಾತು. ಅವರಿಗೆ ಜೋಡಿಯಾಗಿ ನೇಹಾ ಪಾಟೀಲ್‌ ಹಾಗೂ ಐಶ್ವರ್ಯಾ ಸಿಂಧೋಗಿ ನಟಿಸಿದ್ದಾರೆ. ಅಭಿರಾಮ್‌ ನಿರ್ದೇಶನ ಚಿತ್ರಕ್ಕಿದೆ. ಅಂದಹಾಗೆ, ಚೇತನ್‌ ಚಂದ್ರ ಅವರ ವೃತ್ತಿ ಜೀವನದಲ್ಲೇ ಇದು ಬಿಗ್‌ ಬಜೆಟ್‌ ಸಿನಿಮಾ ಎಂಬುದು ವಿಶೇಷ.

ವಿಕ್ಕಿ ಎಂಬ ಕಾಲೇಜ್‌ ಲಕ್ಕಿ: ಸೂರಿ ನಿರ್ದೇಶನದ “ಕೆಂಡ ಸಂಪಿಗೆ’ ಒಳ್ಳೆಯ ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಈ ಸಿನಿಮಾ ಮೂಲಕ ಹೀರೋ ಆಗಿ ಗುರುತಿಸಿಕೊಂಡ ವಿಕ್ಕಿ ಅವರನ್ನು ಒಂದಷ್ಟು ಕಥೆ ಹುಡುಕಿ ಬಂದದ್ದು ನಿಜ. ಆದರೆ, ವಿಕ್ಕಿ ಮಾತ್ರ ಯಾವ ಕಥೆಗಳನ್ನೂ ಒಪ್ಪಲಿಲ್ಲ. ಕಾರಣ, ಹೊಸದೇನನ್ನೋ ಮಾಡಬೇಕು ಎಂಬ ತುಡಿತ. ಹಾಗಾಗಿ ಒಂದು ಉದ್ದನೆಯ ಗ್ಯಾಪ್‌ ಆಗಿದ್ದು ದಿಟ. ಕಾದಿದ್ದಕ್ಕೂ ಒಳ್ಳೆಯ ಕಥೆ, ತಂಡವೇ ಅವರನ್ನು ಹುಡುಕಿ ಹೋಯ್ತು. 

ವಿಕ್ಕಿ “ಕೆಂಡ ಸಂಪಿಗೆ’ ಬಳಿಕ ಸುಮಾರು 50 ಕ್ಕೂ ಹೆಚ್ಚು ಕಥೆ ಕೇಳಿದ್ದರಂತೆ. ಆದರೆ, ಕೇಳಿದ ಯಾವ ಕಥೆಗಳೂ ಅವರಿಗೆ ಸರಿಯಾಗಿ ಹೊಂದಿಕೆಯಾಗುತ್ತಿರಲಿಲ್ಲ. ಯಾಕೆಂದರೆ, ಅವರು ಮಾಸ್‌ ಹೀರೋನೂ ಅಲ್ಲ, ಕ್ಲಾಸ್‌ ಹೀರೋನೂ ಅಲ್ಲ, ಹಾಗಾಗಿ, ಯಾವ ಕಥೆ ಒಪ್ಪೋದು, ಬಿಡೋದು ಎಂಬ ಗೊಂದಲದಲ್ಲಿದ್ದಾಗಲೇ “ಕಾಲೇಜ್‌ ಕುಮಾರ್‌’ ಕಥೆ ಸಿಕ್ಕಿದೆ. ಆ ಕಥೆ ಕೇಳಿದಾಕ್ಷಣ, ಮಿಸ್‌ ಮಾಡಬಾರದು ಅಂತೆನಿಸಿ, ಚಿತ್ರ ಮಾಡಿದ್ದಾರೆ. ಈ ಶೀರ್ಷಿಕೆ ಕೇಳಿದಾಕ್ಷಣ, ಹಾಗೊಮ್ಮೆ “ಓಂ’ ಚಿತ್ರದ “ಶಿವರಾಜ್‌ಕುಮಾರು ಕಿಸ್ಸಿಗೆ ಢಮಾರು..’ ಎಂಬ ಹಾಡು ನೆನಪಾಗುತ್ತೆ. ಆದರೆ, ಆ ಹಾಡಿಗೂ ಈ ಚಿತ್ರಕ್ಕೂ ಯಾವ ಸಂಬಂಧವಿಲ್ಲ. ಈ ಚಿತ್ರದ ಹೀರೋ ವಿಕ್ಕಿ ಪ್ರಕಾರ ಇಲ್ಲಿ ಕಥೆಯೇ ಹೀರೋ. ಅಂದಹಾಗೆ, ಇದು ಈಗಿನ ಟ್ರೆಂಡ್‌ಗೆ ತಕ್ಕದಾದ ಕಥೆ. ಇಲ್ಲಿ ಭಾವನೆಗಳಿವೆ, ಭಾವುಕತೆಯೂ ಇದೆ. ಪ್ರೀತಿ, ನೋವು, ನಲಿವು, ತಳಮಳ ಎಲ್ಲವೂ ಅಡಗಿದೆ. ಇನ್ನು, ವಿಕ್ಕಿ ಅವರ ತಂದೆ ತಾಯಿಯಾಗಿ ರವಿಶಂಕರ್‌ ಮತ್ತು ಶ್ರುತಿ ಅಭಿನಯಿಸಿದ್ದಾರೆ. ಅವರೊಂದಿಗೆ ವಿಕ್ಕಿಗೆ ಮೊದಲ ಸಿನಿಮಾ ಇದು. ಹಾಗಾಗಿ, ವಿಕ್ಕಿಗೂ “ಕಾಲೇಜ್‌ ಕುಮಾರ್‌’ ಮೇಲೆ ಇನ್ನಿಲ್ಲದ ನಂಬಿಕೆ ಇದೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದಾರೆ ವಿಕ್ಕಿ.

Advertisement

ರಾಜರ ಸನ್ನಿಧಿಯಲ್ಲಿ: ನಿರಂಜನ್‌ ಶೆಟ್ಟಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳೇ ಆಗಿವೆ. ಈ ಎರಡು ವರ್ಷಗಳಲ್ಲಿ ಅವರು ಏನು ಮಾಡುತ್ತಿದ್ದರು ಎಂದರೆ, ಎರಡು ಚಿತ್ರಗಳಲ್ಲಿ ನಟಿಸಿದ್ದೆ ಎಂಬ ಉತ್ತರ ಅವರಿಂದ ಬರುತ್ತದೆ. ಈ ಪೈಕಿ “ರಾಜರು’ ಎಂಬ ಚಿತ್ರ ಇದೀಗ ಬಿಡುಗಡೆಯಾಗುತ್ತಿದೆ. ಇನ್ನು ನಿರಂಜನ್‌ ಅಭಿನಯಿಸಿರುವ ಇನ್ನೊಂದು ಚಿತ್ರವೆಂದರೆ ಅದು “ಜಗತ್‌ ಕಿಲಾಡಿ’. ಈ ಚಿತ್ರದ ಹಾಡುಗಳು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇಷ್ಟಕ್ಕೂ ನಿರಂಜನ್‌ಗೆ ಯಾಕೆ ಈ ಗ್ಯಾಪ್‌ ಆಯ್ತು ಎಂದರೆ, ಅದಕ್ಕೆ ಸಿಗುವ ಉತ್ತರ ಒಳ್ಳೆಯ ಕಥೆಗಾಗಿ ಹುಡುಕಾಟ ಎಂಬ ಉತ್ತರ ಬರುತ್ತದೆ. ಒಂದೊಳ್ಳೆಯ ಕಥೆಗಾಗಿ ಹುಡುಕಾಟ ನಡೆಸುತ್ತಿದ್ದ ನಿರಂಜನ್‌ಗೆ ಕೊನೆಗೆ ಸಿಕ್ಕಿದ್ದು “ರಾಜರು’. ಇದೊಂದು ಮಾಸ್‌ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಅವರೊಬ್ಬರೇ ಅಲ್ಲ, ಇನ್ನೂ ಮೂವರು ಸಹ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯಾಗಿ “ಪ್ಲಸ್‌’ನಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಶಾಲಿನಿ ಇದ್ದಾರೆ. “ಅರಮನೆ ಇಲ್ಲ … ರಾಣಿ ಹುಡುಕ್ತಾವ್ರೆ …’ ಎಂಬ ಅಡಿಬರಹ ಇರುವ ಈ ಚಿತ್ರಕ್ಕೆ ಗಿರೀಶ್‌ ಮೂಲಿಮನಿ ಅವರು ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ಹೆಸರೇ ಹೇಳುವಂತೆ, ಇದೊಂದು ಪ್ರೀತಿಯ ಹುಡುಕಾಟದ ಕಥೆಯಾಗಿದ್ದು, ನಾಲ್ವರ ಪೈಕಿ ಯಾರಿಗೆ ನಾಯಕಿ ಸಿಗಬಹುದು ಎಂಬ ಕುತೂಹಲವಿದ್ದರೆ, ಚಿತ್ರವನ್ನೇ ನೋಡಬೇಕು. ಇನ್ನು ಶ್ರೀಧರ್‌ ಸಂಭ್ರಮ್‌ ಅವರ ಸಂಗೀತ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next