Advertisement

ಲಾರಿ-ಆಟೋ ರಿಕ್ಷಾ ನಡುವೆ ಭೀಕರ ಅಪಘಾತ: 6 ಮಂದಿ ಸಾವು

05:21 PM Mar 14, 2021 | Team Udayavani |

ಆಂದ್ರ ಪ್ರದೇಶ: ಲಾರಿ ಮತ್ತು ಆಟೋರಿಕ್ಷಾ ನಡುವೆ  ಭೀಕರ ಅಪಘಾತ ಸಂಭವಿಸಿದ ಪರಿಣಾಮ ಆರು ಜನರು ಅಸುನೀಗಿದ್ದು, ಉಳಿದ ಏಳು ಜನರಿಗೆ ಗಂಭೀರ ಗಾಯಗಳಾದ ಘಟನೆ ಆಂದ್ರಪ್ರದೇಶದ ಕೃಷ್ಣ ಜಿಲ್ಲೆಯ ಗೊಲ್ಲಪಾಳಿ ಬಳಿ ನಡೆಸಿದೆ.

Advertisement

ಇಂದು  (ಮಾ.14) ಬೆಳಿಗ್ಗೆ 6 ಘಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಮೃತರನ್ನು ಒ. ರಮೇಶ್, ನಾಗರಾಜು, ಭೂಕ್ಯ ಸೋಮ್ಲಾ, ಬರ್ಮಾವತ್ ಬೇಬಿ, ಸ್ವಾನಾ ಮತ್ತು ನಾಗು ಎಂದು ಗುರುತಿಸಲಾಗಿದೆ.

ಬುಡಕಟ್ಟು ಕುಗ್ರಾಮವಾಗಿರುವ ಲಾಯಾನ್ ತಾಂಡದ ವ್ಯಕ್ತಿಗಳು ಇವರಾಗಿದ್ದು, ಇವರು ತಮ್ಮ ಕೃಷಿ ಕಾರ್ಯದ ನಿಮಿತ್ತ ಪ್ರಯಾಣ ಮಾಡುತ್ತಿದ್ದರು ಎಂದು ನುಜ್ವಿದ್ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ. ಶ್ರೀನಿವಾಸಲು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪ್ರವಾಸಿ ತಾಣದಲ್ಲಿ ರಸ್ತೆ ಬದಿ ಮೂತ್ರ ವಿಸರ್ಜನೆ : ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಆಕ್ರೋಶ

ಆಟೋ ರಿಕ್ಷಾದಲ್ಲಿ ಕಾರ್ಮಿಕರು ತೆರಳುತ್ತಿದ್ದ ವೇಳೆ ಎದುರಿನಿಂದ ಬಂದಿರುವ ಲಾರಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಆ ಬಳಿಕ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದಾನೆ.

Advertisement

ಘಟನೆ ಸಂಭವಿಸಿದ ತಕ್ಷಣ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಬಳಿಕ ಸ್ಥಳಿಯರನ್ನು ಒಳಗೊಂಡಂತೆ ಪೊಲೀಸರು ಗಾಯಗೊಂಡವರನ್ನು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಸ್ಥಳದಲ್ಲಿಯೇ 5 ಜನರು ಮೃತಪಟ್ಟಿದ್ದು, ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next