Advertisement

Agri: ರೈತರಿಗೆ 7 ತಾಸು ವಿದ್ಯುತ್‌ ಪೂರೈಕೆ ಬೇಸಗೆಗೆ ತಡೆರಹಿತ ಸರಬರಾಜು: ಜಾರ್ಜ್‌

01:27 AM Nov 22, 2023 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಬೇಸಗೆಯಲ್ಲೂ ನೀರಾವರಿ ಪಂಪ್‌ ಸೆಟ್‌ಗಳಿಗೆ ಏಳು ತಾಸು ನಿರಂತರ ವಿದ್ಯುತ್‌ ಪೂರೈಕೆ ಮಾಡ ಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಂಗಳವಾರ ಬೆಂಗಳೂರಿನಲ್ಲಿ ಭರವಸೆ ನೀಡಿದ್ದಾರೆ.

Advertisement

ರಾಜ್ಯದಲ್ಲಿ ಇದುವರೆಗೆ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆ ಆಗಿಲ್ಲ. ಜನವರಿ ಅನಂತರ ವಿದ್ಯುತ್‌ ಬೇಡಿಕೆ ಏರುವ ಸಾಧ್ಯತೆ ಇದ್ದು, 300 ದಶಲಕ್ಷ ಯೂನಿಟ್‌ ದಾಟಬಹುದು. ಇದನ್ನು ಪೂರೈಸಲು ಇಲಾಖೆ ಈಗಿ ನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.

ಇದರ ಜತೆಗೆ ಕುಸುಮ್‌ ಯೋಜನೆ ಯನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸಲು ಯೋಜನೆ ರೂಪಿಸ ಲಾಗುತ್ತಿದೆ. ರೈತರಲ್ಲಿ ಜಾಗೃತಿ ಮೂಡಿ ಸಲು ಸೋಲಾರ್‌ ಮೇಳ ಆಯೋಜಿ ಸಲಾಗುವುದು ಎಂದು ವಿವರಿಸಿದರು.

ಹಲವು ರಾಜ್ಯಗಳಿಂದ ಖರೀದಿ
ಉತ್ತರ ಪ್ರದೇಶ, ಪಂಜಾಬ್‌ನಿಂದ 900 ಮೆ.ವ್ಯಾ. ವಿದ್ಯುತ್‌ ಖರೀದಿ ಮಾಡಲಾಗುತ್ತದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಗೌರವ್‌ ಗುಪ್ತ ಹೇಳಿ ದ್ದಾರೆ. ವಿದ್ಯುತ್‌ ಕಾಯ್ದೆ ಸೆಕ್ಷನ್‌ 11 ಜಾರಿ ಗೊಳಿಸಿರುವುದರಿಂದ ಖಾಸಗಿ ವಿದ್ಯುತ್‌ ಉತ್ಪಾದಕರಿಂದ 1,200 ಮೆ.ವ್ಯಾ., ವಿಜಯಪುರದ ಕೂಡಿಗಿಯ ರಾಷ್ಟ್ರೀಯ ಶಾಖೋತ್ಪನ್ನ ಘಟಕದಿಂದ 150 ಮೆ.ವ್ಯಾ. ಸೇರಿದಂತೆ 2,200 ಮೆ.ವ್ಯಾ. ವಿದ್ಯುತ್‌ ಸಿಗಲಿದೆ ಎಂದರು.

ಶಾಖೋತ್ಪನ್ನ ಘಟಕಗಳಲ್ಲಿ ದೇಶೀಯ ಕಲ್ಲಿದ್ದಲಿನ ಜತೆಗೆ ವಿದೇಶಿ ಕಲ್ಲಿದ್ದಲನ್ನು ಮಿಶ್ರ ಮಾಡುವುದ ರಿಂದ ಹೆಚ್ಚುವರಿಯಾಗಿ 600 ಮೆ.ವ್ಯಾ. ವಿದ್ಯುತ್‌ ದೊರೆಯಲಿದೆ. ಈ ಮಧ್ಯೆ 600 ಮೆ.ವ್ಯಾ. ಹೆಚ್ಚುವರಿ ನೀಡುವಂತೆ ಕೇಂದ್ರ ಸರಕಾರವನ್ನು ಕೋರಲಾಗಿದ್ದು, ಸಮ್ಮತಿ ಲಭಿಸಿದೆ. ಇವೆಲ್ಲದರಿಂದ ಬೇಸಗೆಯಲ್ಲಿ ಬೇಡಿಕೆ  ಇದ್ದಷ್ಟು ವಿದ್ಯುತ್‌ ಪೂರೈಕೆ ಸಾಧ್ಯ ವಾಗಲಿದೆ ಎಂದು ಮಾಹಿತಿ ನೀಡಿದರು.

Advertisement

ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇ ಶಕ ಪಂಕಜ್‌ ಕುಮಾರ್‌ ಪಾಂಡೆ ಮಾತ ನಾಡಿ, ವಿದೇಶಿ ಕಲ್ಲಿದ್ದಲು ಖರೀದಿಗೆ ಬಿಡ್‌ ಮಾಡಲಾಗಿದೆ. ಎರಡೂ ವರೆ ಲಕ್ಷ ಟನ್‌ ಖರೀದಿಗೆ ಉದ್ದೇಶಿಸ ಲಾಗಿದ್ದು, ಕೆಇಆರ್‌ಸಿ ಅನುಮೋದನೆ ಬಾಕಿ ಇದೆ ಎಂದರು.

ಗೃಹಜ್ಯೋತಿಗೆ 2,900 ಕೋ.ರೂ. ಸಬ್ಸಿಡಿ
ಗೃಹಜ್ಯೋತಿ ಯೋಜನೆಗೆ ಸಬ್ಸಿಡಿಯ ಅಂದಾಜು ಮೊತ್ತ 2,900 ಕೋಟಿ ರೂ. ಆಗಿದ್ದು, ಅದನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್‌ ತಿಳಿ ಸಿ ದರು. ಯೋಜನೆಯಡಿ 1.61 ಕೋಟಿ ಗ್ರಾಹಕರು ನೋಂದಾ ಯಿಸಿ ಕೊಂಡಿದ್ದಾರೆ. 1.50 ಕೋಟಿ ಮಂದಿ ಗ್ರಾಹಕರು ಪ್ರಯೋ ಜನ ಪಡೆಯು ತ್ತಿದ್ದಾರೆ. ಪ್ರತೀ ತಿಂಗಳಿನ ಸಬ್ಸಿಡಿ ಮೊತ್ತ ಅಂದಾಜು 780 ಕೋಟಿ ರೂ. ಎಂದರು.

Advertisement

Udayavani is now on Telegram. Click here to join our channel and stay updated with the latest news.

Next