Advertisement

ಅಬ್ಬಾ ಭೂಮಿ ಗಾತ್ರದ 7 ಗ್ರಹಗಳು ಪತ್ತೆ!ವಾಸಿಸಲು ಯೋಗ್ಯ?NASA ಸಂಶೋಧನೆ

01:45 PM Feb 23, 2017 | Sharanya Alva |

ಕೇಪ್ ಕ್ಯಾನವರಲ್: ಇದೇ ಪ್ರಥಮ ಬಾರಿಗೆ ಎಂಬಂತೆ ಎಲ್ಲರ ಹುಬ್ಬೇರಿಸುವಂತೆ ಖಗೋಳಶಾಸ್ತ್ರಜ್ಞರು ಭೂಮಿ ಗಾತ್ರದ 7 ಗ್ರಹಗಳನ್ನು ಪತ್ತೆ ಹಚ್ಚಿದ್ದಾರೆ. ಅವೆಲ್ಲಕ್ಕಿಂತ ಹೆಚ್ಚು ಕುತೂಹಲಕ್ಕೆ ಕಾರಣವಾಗಿರುವ ಅಂಶ ಯಾವುದೆಂದರೆ ಈ ಹೊಸ “ಲೋಕ’ ವಾಸಿಸಲು ಯೋಗ್ಯವಾಗಿರಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ!

Advertisement

ನಾಸಾ ಮತ್ತು ಬಿಲ್ಜಿಯನ್ ನೇತೃತ್ವದ ಜಂಟಿ ಸಂಶೋಧನಾ ತಂಡ ನೂತನವಾಗಿ ಅನ್ವೇಷಿಸಿರುವ ಗ್ರಹಗಳ ಬಗ್ಗೆ ಬುಧವಾರ ಘೋಷಿಸಿದ್ದು, ಅವರ ಪ್ರಕಾರ ಈ ಗ್ರಹಗಳು ಅಕ್ವೇರಿಯಸ್ ನಕ್ಷತ್ರ ಸಮೂಹದಿಂದ ಬರೋಬ್ಬರಿ 40 ಜ್ಯೋತಿರ್ವಷಗಳಷ್ಟು ದೂರದಲ್ಲಿದೆ ಎಂದು ತಿಳಿಸಿದೆ.

ನಾವು ಈಗ 7 ಭೂಮಿ ಗಾತ್ರದ ಗ್ರಹಗಳನ್ನು ಪತ್ತೆ ಹಚ್ಚಿದ್ದೇವೆ, ಆ ಬಗ್ಗೆ ಸಾಕಷ್ಟು ಅಧ್ಯಯನ ನಡೆಸುತ್ತಿದ್ದೇವೆ. ಹೌದು ನಮ್ಮ ಅಂದಾಜಿನ ಪ್ರಕಾರ ಅಲ್ಲಿ ನೀರಿನ ಅಂಶಗಳಿದ್ದು, ಅದು ವಾಸಿಸಲು ಸಾಧ್ಯವಿದೆ. ಆದರೆ ಆ ಬಗ್ಗೆ ಇನ್ನೂ ಹೆಚ್ಚಿನ ಅನ್ವೇಷಣೆಯ ಅಗತ್ಯವಿದೆ ಎಂದು ಎಕ್ಸೋ ಪ್ಲ್ಯಾನೆಟ್ ಸಂಶೋಧಕ, ಲೇಖಕ ಮೈಕೆಲ್ ಗಿಲ್ಲೊನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next