Advertisement

ಕೌನ್‌ ಬನೇಗಾ ಕರೋಡ್‌ ಪತಿ: 7 ಕೋಟಿ ರೂ. ಮೊತ್ತದ ಪ್ರಶ್ನೆಯ ಉತ್ತರವೇನು ಗೊತ್ತಾ?

09:48 AM Sep 15, 2019 | keerthan |

ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್‌ ಬನೇಗ ಕರೋಡ್‌ ಪತಿ ಕಾರ್ಯಕ್ರಮದ ಹನ್ನೊಂದನೇ ಆವೃತ್ತಿ ಆರಂಭವಾಗಿದ್ದು ನಿಮಗೆ ಗೊತ್ತಿರಬಹುದು.  ಈಗಿನ ಸುದ್ದಿಯೆಂದರೆ ಒಬ್ಬ ಸ್ಪರ್ಧಿ 15 ಪ್ರಶ್ನೆಗೆ ಉತ್ತರಿಸಿ 1 ಕೋಟಿ ಗೆದ್ದುಕೊಂಡಿದ್ದಾರೆ. ಆದರೆ 7 ಕೋಟಿ ಗೆಲ್ಲುವ ಅವಕಾಶ ತಪ್ಪಿಸಿಕೊಂಡಿದ್ದಾರೆ. ಹಾಗಾದರೆ ಆ 7 ಕೋಟಿಯ ಪ್ರಶ್ನೆಯೇನು? ಅದರ ಉತ್ತರವೇನು? ಮುಂದೆ ಓದಿ.

Advertisement

ಸನೋಜ್‌ ಸಿಂಗ್‌ ಒಂದು ಕೋಟಿ ಗೆದ್ದ ಸ್ಪರ್ಧಿ. 15 ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಿದ್ದ ಸನೋಜ್‌ ಗೆ 16ನೇ ಬೋನಸ್‌ ಪ್ರಶ್ನೆ ಕೇಳಲಾಯಿತು. ಆ ಪ್ರಶ್ನೆಗೆ ಉತ್ತರಿಸಿದರೆ 7 ಕೋಟಿ ಗೆಲ್ಲುವ ಅವಕಾಶ. “ಕ್ರಿಕೆಟ್‌ ದಂತಕಥೆ ಡಾನ್‌ ಬ್ರಾಡ್‌ ಮನ್‌ ಯಾವ ಭಾರತೀಯ ಬೌಲರ್‌ ನ ಎಸೆತದಲ್ಲಿ ಒಂಟಿ ರನ್‌ ತೆಗೆದು ತಮ್ಮ ನೂರನೇ ಶತಕ ಬಾರಿಸಿದ್ದರು” ಎಂದು 16ನೇ ಪ್ರಶ್ನೆಯಾಗಿತ್ತು. ನಾಲ್ಕು ಅಯ್ಕೆಯ ಉತ್ತರಗಳನ್ನು ಕೊಡಲಾಗಿತ್ತು. ಅದು ಯಾವುದೆಂದರೆ 1. ಬಾಖಾ ಜಿಲಾನಿ 2. ಕಮಾಂಡರ್‌ ರಂಗಾಚಾರಿ, 3. ಗೋಗಮಲ್‌ ಕಿಶನ್‌ ಚಂದ್‌ 4. ಕನ್ವರ್‌ ರೈ ಸಿಂಗ್

ಆದರೆ ಈ 7 ಕೋಟಿ ರೂ. ಮೊತ್ತದ ಪ್ರಶ್ನೆಗೆ ಉತ್ತರಿಸಲಾಗದೆ  ಸಿಂಗ್‌  ಪಂದ್ಯ ಕ್ವಿಟ್‌ ಮಾಡಿದರು. ಆದರೆ ಇದರ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ.

ಯಾರು ಆ ಭಾರತೀಯ
ಕ್ರಿಕೆಟ್‌ ದಂತಕಥೆ ಡಾನ್‌ ಬ್ರಾಡ್ಮನ್‌ ಆಗ 99 ಪ್ರಥಮ ದರ್ಜೆ ಶತಕ ಬಾರಿಸಿದ್ದರು. ಭಾರತ ವಿರುದ್ಧದ ಸರಣಿಯಲ್ಲಿ ಬ್ರಾಡ್ಮನ್‌ ಶತಕಗಳ ಶತಕ ಬಾರಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು. ಲಾಲ ಅಮರನಾಥ್‌ (ಭಾರತದ ಪರ ಪ್ರಥಮ ಟೆಸ್ಟ್‌ ಶತಕ ಬಾರಿಸಿದವರು) ನೇತೃತ್ವದ ಭಾರತದ ಪಡೆ ಆಸೀಸ್‌ ವಿರುದ್ಧ ಕಣಕ್ಕಿಳಿದಿತ್ತು. ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತ 326 ರನ್‌ ಗಳಿಸಿತ್ತು. ಕಿಶನ್‌ ಚಂದ್‌ ಅಜೇಯ 75 ರನ್ ಗಳಿಸಿದ್ದರು.

ಅಭಿಮಾನಿಗಳ ನಿರೀಕ್ಷೆಯ ಕ್ಷಣ ಬಂದೇ ಬಿಟ್ಟಿತ್ತು. ಬ್ರಾಡ್ಮನ್‌ ಮತ್ತೆ ಅಬ್ಬರಿಸತೊಡಗಿದರು. 99 ರನ್‌ ಗಳಿಸಿದ್ದ ವೇಳೆ ಭಾರತೀಯ ನಾಯಕ ಲಾಲ ಅಮರನಾಥ್‌ ಅಚ್ಚರಿ ನಿರ್ಧಾರ ಮಾಡಿದರು. ಕೇವಲ ದೇಶೀ ಕ್ರಿಕೆಟ್‌ ನಲ್ಲಿ ಬಾಲ್‌ ಮಾಡಿ ಗೊತ್ತಿದ್ದ ಕಿಶನ್‌ ಚಂದ್‌ ಗೆ ಚೆಂಡನ್ನು ನೀಡಿದರು. ಯಾಕೆಂದರೆ ಬ್ರಾಡ್ಮನ್‌ ಆವರೆಗೆ ಕಿಶನ್‌ ಚಂದ್‌ ಯಾವ ರೀತಿಯ ಬೌಲರ್‌ ಎಂದು ಗೊತ್ತಿರಲಿಲ್ಲ. ಲೆಗ್‌ ಬ್ರೇಕ್‌ ಬೌಲರ್‌ ಆಗಿದ್ದ ಕಿಶನ್‌ ಚಂದ್‌ ರ ಮೊದಲ ಕೆಲವು ಎಸೆತಗಳನ್ನು ಜಾಗರೂಕತೆಯಿಂದ ಎದುರಿಸಿದ್ದ ಬ್ರಾಡ್ಮನ್‌ ನಂತರ ಒಂಟಿ ರನ್‌ ಕಸಿದು ಐತಿಹಾಸಿಕ ಶತಕ ಬಾರಿಸಿದ್ದರು.

Advertisement

ಹಾಗಾಗಿ ಕೌನ್‌ ಬನೇಗ ಕರೋಡ್‌ ಪತಿಯ ಏಳು ಕೋಟಿ ರೂ. ಮೊತ್ತದ ಪ್ರಶ್ನೆಗೆ ಉತ್ತರ ಗೋಗಮಲ್‌ ಕಿಶನ್‌ ಚಂದ್.‌

Advertisement

Udayavani is now on Telegram. Click here to join our channel and stay updated with the latest news.

Next