Advertisement

ಮಗಳ ಆಶ್ಲೀಲ ವಿಡಿಯೋ ಅಪ್ಲೋಡ್:‌ ಪ್ರಶ್ನಿಸಲು ಹೋದ ಯೋಧನನ್ನೇ ಥಳಿಸಿ ಹತ್ಯೆ; 7 ಮಂದಿ ಬಂಧನ

08:51 AM Dec 27, 2022 | Team Udayavani |

ಗಾಂಧಿನಗರ: ಗುಜರಾತ್‌ನ ನದಿಯಾದ್‌ ಜಿಲ್ಲೆಯಲ್ಲಿ ತನ್ನ ಮಗಳ ಅಶ್ಲೀಲ ವೀಡಿಯೋ ಪ್ರಸಾರ ಮಾಡಿದ ಬಗ್ಗೆ ಪ್ರಶ್ನಿಸಲು ಹೋದ ಬಿಎಸ್‌ಎಫ್ ಯೋಧರೊಬ್ಬರರನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬಿಎಸ್‌ಎಫ್ ಯೋಧರ ಮೆಲಾಜಿ ವಘೇಲಾ (45) ಅವರ ಮಗಳು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಕೆ ತನ್ನ ಸಹಪಾಠಿ ಶೈಲೇಶ್‌ ನನ್ನು ಪ್ರೀತಿಸುತ್ತಿದ್ದರು. ಸಲುಗೆಯನ್ನು ದುರುಪಯೋಗಪಡಿಸಿಕೊಂಡ ಶೈಲೇಶ್‌, ಆಕೆಯ ಅಶ್ಲೀಲ ವೀಡಿಯೋ ಅನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ.

ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಮೆಲಾಜಿ ವಘೇಲಾ ಅವರ ಇಬ್ಬರು ಗಂಡು ಮಕ್ಕಳು ಹಾಗೂ ಕುಟುಂಬದ ಸದಸ್ಯರು ಶೈಲೇಶ್‌ ಅವರ ಮನೆಗೆ ಹೋಗಿದ್ದಾರೆ. ಈ ವೇಳೆ ಶೈಲೇಶ್‌ ಮನೆಯಲ್ಲಿರಲಿಲ್ಲ. ಮನೆಯಲ್ಲಿದ್ದ ಉಳಿದವರು ಮಾತಾನಾಡುವಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಎರಡು ಕುಟುಂಬದ ಜಗಳದಲ್ಲಿ ಬಾಲಕನ ಮನೆಯವರು ಮೆಲಾಜಿ ವಘೇಲಾ ಅವರ ಮೇಲೆ ಹಲ್ಲೆ ಮಾಡಿ, ಚೂಪಾದ ಆಯುಧದಿಂದ ಹೊಡೆದಿದ್ದಾರೆ. ಪರಿಣಾಮ ಸ್ಥಳದಲ್ಲೇ ಮೆಲಾಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಯೋಧನ ಮಗ ನವ್‌ ದೀಪ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.ಮೆಲಾಜಿ ಅವರ ಪತ್ನಿ ಕೊಟ್ಟ ದೂರಿನ ಆಧಾರದಲ್ಲಿ ಪೊಲೀಸರು ಶೈಲೇಶ್‌ ಮನೆಯ 7 ಮಂದಿ ಸದಸ್ಯರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next