Advertisement
ಅನಂತ್‌ನಾಗ್ ಜಿಲ್ಲೆಯ ಪೆಹೆಲ್ಗಾಂವ್‌ನಿಂದ 50 ಕಿಮೀ ದೂರದ ಸ್ಥಳದಲ್ಲಿ ಸೋಮವಾರ ರಾತ್ರಿ 8.20ಕ್ಕೆ ಈ ದುರಂತ ನಡೆದಿದೆ. ದುರಂತದಲ್ಲಿ ಸಾವಿಗೀಡಾದವರೆಲ್ಲ ಗುಜರಾತ್‌ನ ವಲ್ಸಾಡ್‌ಗೆ ಸೇರಿದವರು. ಈ ಸಾಲಿನ ಅಮರನಾಥ ಯಾತ್ರೆ ಮೇಲೆ ಇದು ಮೊದಲ ಉಗ್ರ ದಾಳಿಯಾಗಿದೆ. 2000ನೇ ಇಸ್ವಿಯಲ್ಲಿ ಯಾತ್ರೆಯ ಮೇಲೆ ನಡೆದ ಭೀಕರ ದಾಳಿಯಲ್ಲಿ 30 ಮಂದಿ ಅಸುನೀಗಿದ್ದರು. ಅದಾದ ಬಳಿಕ ನಡೆದ ಅತ್ಯಂತ ಹೇಯ ಕೃತ್ಯ ಇದಾಗಿದೆ.
Related Articles
Advertisement
ಕಾರ್ಯಚರಣೆ ವೇಳೆಯೂ ದಾಳಿ: ನಿಂದನಾತ್ಮಕ ಅಂಶವೆಂದರೆ ಪೊಲೀಸರು, ಯೋಧರು ಗಾಯಗೊಂಡ ಯಾತ್ರಿಗಳನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಕೂಡ ದಯೆ ತೋರದ ಉಗ್ರರು ಆ ಸಂದರ್ಭದಲ್ಲಿಯೂ ಗುಂಡು ಹಾರಿಸಿದ್ದಾರೆ.
ಬಿಗಿಭದ್ರತೆ: ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಲೇ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಎರಡು ತುಕಡಿಗಳನ್ನು ಸ್ಥಳಕ್ಕೆ ಕಳುಹಿ ಸಿದೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕಣಿವೆ ರಾಜ್ಯಾದ್ಯಂತ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.
ಪ್ರಧಾನಿ ಖಂಡನೆ: ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ಅಜಿತ್ ದೋವಲ್ ಪ್ರಧಾನಿ ನರೇಂದ್ರ ಮೋದಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಟ್ವೀಟ್ ಮಾಡಿ ಘಟನೆಯನ್ನು ಖಂಡಿಸಿರುವ ಮೋದಿ ರಾಜ್ಯಪಾಲ ಎನ್. ಎನ್.ವೋರಾ, ಮುಖ್ಯಮಂತ್ರಿ ಮೆಹಬೂಬಾ ಮುಪ್ತಿ ಜತೆಗೆ ಮಾತುಕತೆ ನಡೆಸಿದ್ದಾಗಿ ಬರೆದುಕೊಂಡಿದ್ದಾರೆ. “ಅಮರನಾಥ ಯಾತ್ರೆಯಿಂದ ಹಿಂದಿರುಗುತ್ತಿದ್ದವರ ಮೇಲೆ ದಾಳಿಯಾದ ಸುದ್ದಿ ಕೇಳಿದೆ. ಅದನ್ನು ಖಂಡಿಸಲು ಶಬ್ದಗಳೇ ಸಿಗುತ್ತಿಲ್ಲ. ಎಲ್ಲರಿಂದಲೂ ಅದಕ್ಕೆ ಅತ್ಯುಗ್ರ ಶಬ್ದಗಳಿಂದ ಖಂಡಿಸಬೇಕು’ ಎಂದು ಹೇಳಿದ್ದಾರೆ.
ದುರಂತದಲ್ಲಿ ಅಸುನೀಗಿದವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರಿಗೆ ಅಗಲುವಿಕೆಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ ಪ್ರಧಾನಿ ಮೋದಿ. ಇಂಥ ಕೃತ್ಯಗಳಿಂದ ಭಾರತ ಎದೆಗುಂದುವುದಿಲ್ಲ. ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕೆ ಇದೆ ಎಂದು ಮತ್ತೂಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಗಮನಾರ್ಹ ಅಂಶವೆಂದರೆ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಕಣಿವೆ ರಾಜ್ಯದಲ್ಲಿ ಉಂಟಾಗಿರುವ ದುರಂತದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೂಡ ಮುಖ್ಯಮಂತ್ರಿ, ರಾಜ್ಯಪಾಲರ ಜತೆ ಫೋನ್‌ನಲ್ಲಿ ಮಾತಾಡಿದ್ದಾರೆ. ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರೂ ಘಟನೆ ಬಗ್ಗೆ ಖಂಡಿಸಿದ್ದಾರೆ. ಬಂದ್‌ಗೆ ಕರೆ: ಘಟನೆ ಖಂಡಿಸಿ ಜಮ್ಮು ಮತ್ತು ಕಾಶ್ಮೀರ ಪ್ಯಾಂಥರ್ಸ್ ಪಕ್ಷ ಮಂಗಳವಾರ ಕಣಿವೆ ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಿದೆ. ಹೈಅಲರ್ಟ್: ಗುಜರಾತ್‌ನ ಕೆಲ ಭಾಗ ಪಾಕಿಸ್ತಾನದ ಜತೆ ಅಂತಾರಾಷ್ಟ್ರೀಯ ಗಡಿ ಪ್ರದೇಶ ಹೊಂದಿರುವುದರಿಂದ ಅಲ್ಲಿ ಗರಿಷ್ಠ ಪ್ರಮಾಣದ ಭದ್ರತೆ ಕೈಗೊಳ್ಳಲಾಗಿದೆ. ಪ್ರಧಾನಿಯೇ ಹೊಣೆ ಹೊರಬೇಕು ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೊಂದು ಗಂಭೀರ ಭದ್ರತಾ ಲೋಪ. ಪ್ರಧಾನಿಯವರೇ ಈ ಬಗ್ಗೆ ಹೊಣೆ ಹೊತ್ತುಕೊಂಡು ಇಂಥ ಘಟನೆಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ. ಭದ್ರತಾ ಲೋಪ?
ಮತ್ತೂಂದು ಬೆಳವಣಿಗೆಯಲ್ಲಿ ಅಮರನಾಥ ಯಾತ್ರಿಗಳ ಮೇಲೆ ಉಗ್ರರು ದಾಳಿ ನಡೆಸಲಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ನೀಡಿತ್ತು. ಕೇಂದ್ರ ಗೃಹ ಇಲಾಖೆಯ ಬಳಿ ಇರುವ ವರದಿಯನ್ನು ಆಧರಿಸಿ ಆಂಗ್ಲ ಸುದ್ದಿವಾಹಿನಿಯೊಂದು ವರದಿ ಪ್ರಕಟಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೊಂದು ಅಮಾನವೀಯ ಘಟನೆ ಮತ್ತು ಮಾನವೀಯತೆಯ ವಿರುದ್ಧದ ಘೋರ ಅಪರಾಧ. ಭದ್ರತಾ ಲೋಪವಿದ್ದಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿ
ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ ಇದೊಂದು ಖಂಡನೀಯ ಘಟನೆ. ಉಗ್ರರ ಕೃತ್ಯದಿಂದ ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಸಿಗಲಿ.
ಅರುಣ್ ಜೇಟ್ಲಿ, ರಕ್ಷಣಾ ಸಟ್ಲಿ