Advertisement

7.89 ಕೋಟಿ ನಗದು ಜಪ್ತಿ

02:14 AM Apr 04, 2019 | Team Udayavani |

ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ 7.89 ಕೋಟಿ ರೂ. ನಗದು, 36.48 ಲಕ್ಷ ಮೌಲ್ಯದ ಮದ್ಯ, 6.16 ಲಕ್ಷ ಮೌಲ್ಯದ ಮಾದಕ ದ್ರವ್ಯ, 1.65 ಕೋಟಿ ರೂ. ಮೊತ್ತದ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿವೆ.

Advertisement

ಈವರೆಗೆ ವಶಪಡಿಸಿಕೊಂಡ ಒಟ್ಟು ನಗದು 48.25 ಕೋಟಿ. ದಾಖಲೆ ಇಲ್ಲದ 2 ಲಕ್ಷ ರೂ. ವಶ : ಹೂವಿನಹಡಗಲಿ ಸಮೀಪದ ಹೊಳಲು ಗ್ರಾಮದ ಮಹಾರುದ್ರ ಹೊಸಮನಿ ಎಂಬುವರು ದಾಖಲೆ ಇಲ್ಲದೆ ಬೈಕ್‌ನಲ್ಲಿ ಕೊಂಡೊಯ್ಯುತ್ತಿದ್ದ 2 ಲಕ್ಷ ರೂ. ಗಳನ್ನು ತಾಲೂಕಿನ ಮೈಲಾರ ಚೆಕ್‌ ಪೋಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.

1.9 ಕೋಟಿ ನಗದು ವಶ: ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ಚೆಕ್‌ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ಡಿಸಿಸಿ ಬ್ಯಾಂಕಿನ 1.9 ಕೋಟಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಡಿಸಿಸಿ ಬ್ಯಾಂಕಿನ ಬೆಳಗಾವಿ ಮುಖ್ಯ ಕಚೇರಿಯಿಂದ ನೇಸರಗಿ ಮಾರ್ಗವಾಗಿ ಡಿಸಿಸಿ ಬ್ಯಾಂಕ್‌ನ ವಿವಿಧ ಶಾಖೆಗಳಿಗೆ ನಗದು ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ ಹಣ ದೊರಕಿದೆ.

Advertisement

Udayavani is now on Telegram. Click here to join our channel and stay updated with the latest news.

Next