Advertisement
ಹಾನಿ ವಿವರ : ಮಲ್ಲಾರು ಗ್ರಾಮದ ಸುಂದರಿ ರಾಣ್ಯ ಇವರ ಮನೆಯ ಹಂಚು ಗಾಳಿಗೆ ಹಾನಿ (10,000), ಶರೀಫ ಬಿನ್ ಯೂಸುಫ್ ಇವರ ಮನೆಯ ಹಂಚು ಗಾಳಿಗೆ ಹಾನಿ (15,000), ಅಬ್ದುಲ್ ರಶೀದ್ ಬಿನ್ ಕುಂಙ ಮಹಮ್ಮದ್ ಮನೆಯ ಹೆಂಚು ಗಾಳಿಗೆ ಹಾನಿ (16,000), ವಿಶ್ವನಾಥ ರಾಣ್ಯ ಇವರ ಮನೆಯ ಹಂಚು ಗಾಳಿಗೆ ಹಾನಿ (6,000), ಶೇಖರ ರಾಣ್ಯ ಬಿನ್ ಸೂರ ರಾಣ್ಯ ಇವರ ಮನೆಯ ಹಂಚು ಗಾಳಿಗೆ ಹಾನಿ (7,000), ತುಕ್ರಿ ಕೋಂ ನಾಥು ರಾಣ್ಯ ಇವರ ಮನೆಯ ಹಂಚು ಗಾಳಿಗೆ ಹಾನಿ (15,000), ಲಲಿತ ದೇವದತ್ತ ಕರ್ಕಡ ಕೋಂ ಗೋವಿಂದ ಇವರ ಮನೆಯ ಹಂಚು ಗಾಳಿಗೆ ಹಾನಿ (10,000), ಪ್ರಕಾಶ್ ಅಂಚನ್ ಬಿನ್ ತೆದೋರ್ ಅಂಚನ್ ಇವರ ಮನೆಯ ಹಂಚು ಗಾಳಿಗೆ ಹಾನಿ (15,000), ಅಗೋಸ್ತಿನ್ ಮಣಿರಾಜ್ ಬಿನ್ ಅಲ್ಫೆಡ್ ಮಾಬೆನ್ ಇವರ ಮನೆಯ ಹಂಚು ಗಾಳಿಗೆ ಹಾನಿ (15,000), ಶರ್ಮಿಳ ಕೋಂ ಫೆಡ್ರಿಕ್ ಮಾಬೆನ್ ಇವರ ಮನೆಯ ಹಂಚು ಗಾಳಿಗೆ ಹಾನಿ (12,000), ಸಾರಮ್ಮ ಕೋಂ ಮೊಯಿದ್ದಿನ್ ಇವರ ಮನೆಯ ಹಂಚು ಗಾಳಿಗೆ ಹಾನಿ (20,000), ಜೊಹರಾ ಕೋಂ ಹಸನಬ್ಬ ಇವರ ಮನೆಯ ಹಂಚು ಗಾಳಿಗೆ ಹಾನಿ (15,000), ಮಂಜುನಾಥ ಬಿನ್ ಮುಕ್ತ ಇವರ ಮನೆಯ ಹಂಚು ಗಾಳಿಗೆ ಹಾನಿ (15,000), ಸೆಲಿಕಾ ಕೋಂ ಸಯ್ಯದ್ ಇವರ ಮನೆಯ ಹಂಚು ಗಾಳಿಗೆ ಹಾನಿ (10,000), ಮುಮ್ತಾಜ್ ಕೋಂ ಅಹಮ್ಮದ್ ಇವರ ಮನೆಯ ಹಂಚು ಗಾಳಿಗೆ ಹಾನಿ (13,000), ಸರಸ್ವತಿ ಕೋಂ ಧನರಾಜ್ ಇವರ ಮನೆಯ ಹೆಂಚು ಗಾಳಿಗೆ ಹಾನಿ (40,000), ಹನೀಫ್ ಬಿನ್ ಫಕೀರ ಬ್ಯಾರಿ ಇವರ ಮನೆಯ ಹಂಚು ಗಾಳಿಗೆ ಹಾನಿ (15,000), ಅಬ್ದುಲ್ ಹಮೀದ್ ಬಿನ್ ಮೊಹಮ್ಮದ್ ಇವರ ಮನೆಯ ಹಂಚು ಗಾಳಿಗೆ ಹಾನಿ (16,000), ನಸೀಮಾ ಬಾನು ಕೋಂ ಸಾದಿಕ್ ಇವರ ಮನೆಯ ಹಂಚು ಗಾಳಿಗೆ ಹಾನಿ (1,00,000) ರಜಾಕ್ ಅಹಮ್ಮದ್ ಬಿನ್ ಅಹಮ್ಮದ್ ಬ್ಯಾರಿ ಇವರ ಮನೆಯ ಹಂಚು ಗಾಳಿಗೆ ಹಾನಿ (25,000), ನೆಬಿಸಾ ಕೋಂ ಹಸನಬ್ಬ ಅವರ ಮನೆಯ ಹಂಚು ಗಾಳಿಗೆ ಹಾನಿ (65,000), ಅಮ್ಮಳು ಕೋಂ ದಿ| ಕೃಷ್ಣ ಇವರ ಮನೆಯ ಹಂಚು ಗಾಳಿಗೆ ಹಾನಿ (15,000), ಕೈರುನ್ನೀಸಾ ಕೋಂ ಪಾಚ ಮೊಯಿದಿನ್ ಇವರ ಮನೆಯ ಹಂಚು ಗಾಳಿಗೆ ಹಾನಿ (10,000), ಮಜೂರು ಗ್ರಾಮದ ಕುಮದಾ ಕೋಂ ಕಾಡ್ಯ ಕೊರಗ ಇವರ ಮನೆಯ ಹಂಚು ಗಾಳಿಗೆ ಹಾನಿ (10,000), ಕುತ್ಯಾರು ಗ್ರಾಮದ ವಾರಿಜ ಸಮಗಾರ್ತಿ ಬಿನ್ ಗಂಗಾಧರ ಇವರ ಮನೆಗೆ ಮರ ಬಿದ್ದು ಭಾಗಶಃ ಹಾನಿ (8,000), ಬೆಳಪು ಗ್ರಾಮದ ಸುಂದರ ದೇವಾಡಿಗ ಬಿನ್ ಮುದರ ದೇವಾಡಿಗ ಇವರ ಮನೆ ಮೇಲೆ ಮರ ಬಿದ್ದು ಹಾನಿ (30,000), ಮಟ್ಟು ಗ್ರಾಮದ ಶ್ರೀರಾಮ್ ಭಟ್ ಬಿನ್ ಪ್ರಭಾಕರ ಭಟ್ ಇವರ ಮನೆಯ ಸಿಮೆಂಟ್ ಶೀಟ್ ಗಾಳಿ ಮಳೆಗೆ ಹಾರಿ ಹಾನಿ (7,800), ಮಟ್ಟು ಗ್ರಾಮದ ಸರೋಜಿನಿ ಶ್ರೀಯಾನ್ ಬಿನ್ ಇಂದಿರಾ ಇವರ ಮನೆಯ ಸಿಮೆಂಟ್ ಶೀಟ್ ಗಾಳಿಗೆ ಹಾನಿ (2,940), ಮಟ್ಟು ಗ್ರಾಮದ ಕುಸುಮ ಕೋಟ್ಯಾನ್ ಇವರ ಮನೆಯ ಸಿಮೆಂಟ್ ಶೀಟ್ ಹಾನಿ (2,100), ಮಟ್ಟು ಗ್ರಾಮದ ಲಲಿತ ಇವರ ಮನೆಯ ಹಂಚು ಗಾಳಿಗೆ ಹಾನಿ (650), ಮಟ್ಟು ಗ್ರಾಮದ ಕಮಲಾಕ್ಷಿಯಮ್ಮ ಇವರ ಮನೆಯ ತಗಡು ಶೀಟು ಹಾನಿ (50,000), ಹೆಜಮಾಡಿ ಗ್ರಾಮದ ಗುಲಾಬಿ ಸುವರ್ಣ ಇವರ ಮನೆಗೆ ಮರಬಿದ್ದು ಭಾಗಶಃ ಹಾನಿ (50,000), ಉಳಿಯಾರಗೋಳಿ ಗ್ರಾಮದ ಇಂದಿರಾ ಶೆಟ್ಟಿ ಅವರ ಮನೆಗೆ ಮರದ ಗೆಲ್ಲು ಬಿದ್ದು ಭಾಗಶಃ ಹಾನಿ (25,000), ಹೆಜಮಾಡಿ ಗ್ರಾಮದ ರುಕ್ಕಯ್ಯ ಇವರ ಮನೆಗೆ ಮರಬಿದ್ದು ಭಾಗಶಃ ಹಾನಿ (60,000) ಉಂಟಾಗಿದೆ.
ಮಳೆ ಮತ್ತು ಗಾಳಿಯಿಂದಾಗಿ ಹಾನಿ ಪೀಡಿತವಾದ ಪ್ರದೇಶಗಳಿಗೆ ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ಕೆ. ರವಿಶಂಕರ್, ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಕರಣಿಕರು, ವಿವಿಧ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ. ಸಂಸದರಿಂದ ಅಧಿಕಾರಿಗಳ ಸಭೆ
ಉಡುಪಿ : ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಚರ್ಚಿಸಲು ಸಂಸದೆ ಶೋಭಾ ಕರಂದ್ಲಾಜೆ ಅವರು ಆ.9ರಂದು ಬೆಳಗ್ಗೆ 10.30ಕ್ಕೆ ಮಣಿಪಾಲ ರಜತಾದ್ರಿಯ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ.
Related Articles
ಕೋಟ: ಕೋಟ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಮಳೆಯ ಅರ್ಭಟ ಕಡಿಮೆಯಾಗಿತ್ತು. ಆದರೆ ಮಂಗಳವಾರ ಸುರಿದ ಭಾರೀ ಮಳೆಯಿಂದ ಉಂಟಾದ ನೆರೆಯ ಪ್ರಮಾಣ ಕ್ಷೀಣಿಸಲು ಸಾಕಷ್ಟು ಸಮಯ ಬೇಕಾಯಿತು.
Advertisement
ಮತ್ತೆ ಮನೆ ಕುಸಿತ ಬುಧವಾರ ಮಳೆಯಿಂದಾಗಿ ಪಾಂಡೇಶ್ವರ ಗ್ರಾ.ಪಂ. ವ್ಯಾಪ್ತಿಯ ಮೂಡಹಡು ವಾಸುದೇವ ಆಚಾರ್ಯ ಅವರ ಮನೆಯ ಒಂದು ಭಾಗದ ಗೋಡೆ ಕುಸಿದಿದ್ದು, ಸಾವಿರಾರು ರೂ ನಷ್ಟ ಸಂಭವಿಸಿದೆ.ಪಾರಂಪಳ್ಳಿ ಗಿರಿಜಾ ಶ್ರೀನಿವಾಸ ಪೂಜಾರಿ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕೃಷಿಗೆ ಹಾನಿ
ನೆರೆ ಸಂದರ್ಭ ಸಾವಿರಾರು ಎಕ್ರೆ ಕೃಷಿಭೂಮಿಗೆ ನೀರು ಆವರಿಸಿದ್ದು ಇದರಿಂದಾಗಿ ಕೆಲವು ಕಡೆಗಳಲ್ಲಿ ನಾಟಿ ಮಾಡಿದ ಭತ್ತದ ಪೈರಿಗೆ ಹಾನಿಯಾಗಿದೆ.ಸಂತ್ರಸ್ತರ ಕೇಂದ್ರದಿಂದ ಮನೆ ಕಡೆಗೆ ವಾರಾಹಿ ಕಾಲುವೆಯ ಸಮೀಪದ ಶಿರಿಯಾರ ಗ್ರಾಮದ ಸಕಟ್ಟು ಪ್ರದೇಶ ಮಂಗಳವಾರ ಸಂಜೆ ಸಂಪೂರ್ಣ ಜಲಾವೃತಗೊಂಡಿತು. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ಕಾರ್ಯಾಚರಣೆ ನಡೆಸಿ ಬೋಟ್ ಮೂಲಕ 11ಜನ ಹಾಗೂ 10ಜಾನುವಾರುಗಳ ರಕ್ಷಿಸಿ ಹತ್ತಿರದ ಸಂತ್ರಸ್ತರ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ಇದೀಗ ಮಳೆ ಇಳಿಮುಖವಾದ್ದರಿಂದ ಅವರು ಮರಳಿ ಮನೆ ಸೇರಿದ್ದಾರೆ.