ಟೋಕಿಯೊ: ಈಶಾನ್ಯ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಜಪಾನ್ ನ ಹವಾಮಾನ ಇಲಾಖೆ ಸುನಾಮಿ ಎಚ್ಚರಿಕೆಯನ್ನು ಶನಿವಾರ(ಮಾರ್ಚ್ 20) ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಂಬಳ ಕರೆಯಲ್ಲಿ ಹೊಸ ದಾಖಲೆ ಬರೆದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಶ್ರೀನಿವಾಸ ಗೌಡ
ಪ್ರಬಲ ಭೂಕಂಪದಲ್ಲಿ ಸಾವು, ನೋವಿನ ಕುರಿತು ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಮಿಯಾಗಿ ಪ್ರದೇಶದ ಪೆಸಿಫಿಕ್ ಸಾಗರದಾಳದಲ್ಲಿ ಈ ಪ್ರಬಲ ಭೂಕಂಪ ಸಂಭವಿಸಿದ್ದು, ಸುತ್ತಮುತ್ತ ಪ್ರದೇಶದಲ್ಲಿ ಸುನಾಮಿ ಎದ್ದೇಳುವ ಸಾಧ್ಯತೆ ಇದ್ದಿರುವುದಾಗಿ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಭೂಕಂಪದಿಂದ ನ್ಯೂಕ್ಲಿಯರ್ ಘಟಕದ ಮೇಲೆ ಆಗಿರುವ ಪರಿಣಾಮದ ಬಗ್ಗೆ ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ರೈಲ್ವೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹೇಳಿದೆ. ಭೂಕಂಪನ ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆಯಲ್ಲಿ ಇದ್ದಿರುವುದಾಗಿ ಅಮೆರಿಕದ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ.
2011ರ ಮಾರ್ಚ್ 11ರಂದು ಸಂಭವಿಸಿದ್ದ ಪ್ರಬಲ ಭೂಕಂಪದಿಂದ ಸಂಭವಿಸಿದ ಸುನಾಮಿ ಹೊಡೆತಕ್ಕೆ ಫುಕುಶಿಮಾ ನ್ಯೂಕ್ಲಿಯರ್ ಘಟಕ ನಾಶವಾಗಿ ಹೋಗಿತ್ತು.