Advertisement

6ರ ಪೋರ ಕೋಟ್ಯಧಿಪತಿ!

07:05 AM Dec 13, 2017 | Harsha Rao |

ವಾಷಿಂಗ್ಟನ್‌: ಯೂಟ್ಯೂಬ್‌ಗಳಲ್ಲಿ ಪ್ರಸಿದ್ಧಿ ಪಡೆದು ಯೂಟ್ಯೂಬ್‌ ಸ್ಟಾರ್‌ ಎನಿಸಿಕೊಳ್ಳುವ ಮಂದಿ ಈಗ ಸಾಕಷ್ಟಿದ್ದಾರೆ. ನಾವೀಗ ಪರಿಚಯಿಸಲು ಹೊರಟಿರುವುದು ಅಮೆರಿಕದ 6 ವರ್ಷದ ಯೂಟ್ಯೂಬ್‌ ಸ್ಟಾರ್‌ ಬಗ್ಗೆ. ಆತ ಯೂಟ್ಯೂಬ್‌ ಸ್ಟಾರಾಗುವುದಷ್ಟೇ ಅಲ್ಲ ಈ ವಯಸ್ಸಿಗೇ ಕೋಟ್ಯಾಧಿಪತಿಯಾಗಿದ್ದಾನೆ. ಈ ಚೈಲ್ಡ್‌ ಸ್ಟಾರ್‌ ಹೆಸರು “ರ್ಯಾನ್‌’.
“ರ್ಯಾನ್‌ ಟಾಯ್ಸ ರಿವ್ಯೂ’ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಆಟಿಕೆಗಳೊಡನೆ ಆಟವಾಡುವ ಈತ ಲಕ್ಷಾಂತರ ಮಕ್ಕಳ ಮೆಚ್ಚಿನ ಸ್ಟಾರ್‌. ತನ್ನ ಯೂಟ್ಯೂಬ್‌ ಚಾನಲ್‌ನಲ್ಲಿ ಆಟಿಕೆಗಳ ವಿಮರ್ಶೆಯನ್ನು ಮಾಡುತ್ತಾನೆ. ಅದನ್ನು ನೋಡಲು ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಮುಗಿಬೀಳುತ್ತಾರೆ.

Advertisement

ಫೋರ್ಬ್ ಮ್ಯಾಗಜೀನ್‌ ಪಟ್ಟಿ ಮಾಡಿರು ವಂತೆ, ಹೆಚ್ಚು ಹಣ ಗಳಿಸುವ ಯುಟ್ಯೂಬ್‌ ಉದ್ಯಮಿಗಳಲ್ಲಿ ರ್ಯಾನ್‌ 8ನೇ ಸ್ಥಾನದಲ್ಲಿದ್ದಾನೆ. 2016ರ ಜೂ.1 ರಿಂದ 2017ರ ಜೂ.1ರಲ್ಲಿ ಇವನ ಗಳಿಕೆ 70 ಕೋಟಿ ರೂ. (11 ಮಿಲಿಯನ್‌ ಡಾಲರ್‌). 
ಕಳೆದ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಯೂಟ್ಯೂಬ್‌ ಉದ್ಯಮಿಗಳಲ್ಲಿ ಈತ 10ನೆಯವನಾಗಿದ್ದ. ಆತ ಮೂರು ವರ್ಷ ದವರನಿದ್ದಾಗ ಮೊದಲ ಬಾರಿಗೆ ಆತ ಆಟಿಕೆ ಯೊಂದನ್ನು ಪರಿಚಯಿಸುವ ವಿಡಿಯೋ ವೊಂದನ್ನು ತಾಯಿ ಸೆರೆಹಿಡಿದು ಯುಟ್ಯೂಬ್‌ಗ ಹಾಕಿದ್ದರು. ರ್ಯಾನ್‌ನ ಹಲವಾರು ವಿಡಿಯೋಗಳು ಅತಿ ಹೆ‌ಚ್ಚು ಬಾರಿ ವಿಕ್ಷಿಸಿದ ವಿಡಿಯೋ ಎನಿಸಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next