Advertisement

6th class ಮಕ್ಕಳಿಗೆ ಇನ್ನೂ ಪಠ್ಯ ಪುಸ್ತಕಗಳನ್ನೇ ನೀಡಿಲ್ಲ!

12:35 AM Jul 05, 2024 | Team Udayavani |

ಹೊಸದಿಲ್ಲಿ: ಪ್ರಸಕ್ತ ತಿಂಗಳಿಂದಲೇ 2024 -25ನೇ ಶೈಕ್ಷಣಿಕ ವರ್ಷ ಆರಂಭ ವಾದರೂ 6ನೇ ತರಗತಿಯ ವಿದ್ಯಾರ್ಥಿ ಗಳು ಮಾತ್ರ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳಿಲ್ಲದೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ! ಹೊಸ ಶಿಕ್ಷಣ ನೀತಿ 2020 ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಡಿ (ಎನ್‌ಸಿಎಫ್) ಹೊಸ ಎನ್‌ಸಿಇಆರ್‌ಟಿ ಪಠ್ಯಗಳು ಮಕ್ಕಳ ಕೈಗೆ ಸಿಗುವಾಗ ಇನ್ನೂ 2 ತಿಂಗಳು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.

Advertisement

ಈ ಮಧ್ಯೆ, ಶೀಘ್ರವೇ ಪಠ್ಯ ಪುಸ್ತಕ ಗಳನ್ನು ಪೂರೈಸಲಾಗುವುದು ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.
3ನೇ ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ಪಠ್ಯ ಒದಗಿ ಸಲಾಗುತ್ತಿದೆ. ಆದರೆ 3ನೇ ತರಗತಿಯ ಪಠ್ಯಗಳು ಈಗಾಗಲೇ ಮಾರುಕಟ್ಟೆಗೆ ಬಂದಿದ್ದು, 6ನೇ ತರಗತಿಯ ಪಠ್ಯಗಳು ಇನ್ನೂ ಬಂದಿಲ್ಲ. ಎನ್‌ಎಸ್‌ಟಿಸಿ ಹೊಸ ಪಠ್ಯ ಸಿದ್ಧಪಡಿಸುವ ಹೊಣೆ ಹೊತ್ತಿದೆ. ಆದರೆ 6ನೇ ತರಗತಿಯ ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ವಿಷಯಗಳ ಪಠ್ಯ ಪುಸ್ತಕಗಳ ಕರಡು ಪ್ರತಿಯನ್ನು ಇನ್ನೂ ಎನ್‌ಸಿಇಆರ್‌ಟಿಗೆ ಕಳುಹಿಸಿಲ್ಲ. ಅದನ್ನು ಕಳುಹಿಸಿದ ಕೂಡಲೇ ಎನ್‌ಸಿಇಆರ್‌ಟಿ ಆ ಪಠ್ಯಗಳ ಮುದ್ರಣಕ್ಕೆ ಆದೇಶ ನೀಡಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next