Advertisement

ಅಭಿವೃದ್ಧಿ ಯೋಜನೆಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ 69 ಲಕ್ಷ ಮರಗಳು ನಾಶ

09:45 AM Nov 28, 2019 | Team Udayavani |

ಹೊಸದಿಲ್ಲಿ: ದೇಶಾದ್ಯಂತ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ 2016-17 ಮತ್ತು 2018-19ನೇ ಸಾಲಿನಲ್ಲಿ ಸುಮಾರು 6,944,608 (69 ಲಕ್ಷ) ಮರಗಳನ್ನು ಕಡಿಯಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಗಾಗಿರುವ ಸಚಿವಾಲಯ ಅನುಮತಿ ನೀಡಿತ್ತು ಎಂಬ ಮಾಹಿತಿಯನ್ನು ರಾಜ್ಯಸಭೆಗೆ ನೀಡಲಾಗಿದೆ. ಮತ್ತು ಇದಕ್ಕೆ ಬದಲಾಗಿ 62,769.58 ಹೆಕ್ಟೇರ್ ಪ್ರದೇಶದಲ್ಲಿ 6.2 ಕೋಟಿ ಗಿಡಗಳನ್ನು ಸಹ ನೆಡಲಾಗಿದೆ ಎಂಬ ಮಾಹಿತಿಯನ್ನು ಈ ಸಚಿವಾಲಯವು ಇದೇ ಸಂದರ್ಭದಲ್ಲಿ ನೀಡಿದೆ.

Advertisement

ಅರಣ್ಯ ಭೂಮಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲೇಬೇಕಾದ ಸಂದರ್ಭದಲ್ಲಿ ಅಲ್ಲಿ ನಾಶಮಾಡಲಾಗುವ ಅರಣ್ಯ ಭಾಗದ ಎರಡರಷ್ಟು ಅರಣ್ಯವನ್ನು ಪರ್ಯಾಯ ಸ್ಥಳದಲ್ಲಿ ಬೆಳೆಸಬೇಕು ಎಂಬ ನಿಯಮ 1980ರ ಅರಣ್ಯ (ಸಂರಕ್ಷಣಾ) ಕಾಯ್ದೆಯಲ್ಲಿದೆ.

ಇನ್ನು ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಕೈಗೆತ್ತಿಕೊಂಡಿರುವ ಬುಲೆಟ್ ಟ್ರೈನ್ ಯೋಜನೆಯಿಂದ ಮಹಾರಾಷ್ಟ್ರದಲ್ಲಿ 131.302 ಹೆಕ್ಟೇರ್ ಅರಣ್ಯ ಭೂಮಿ ಹಾಗೂ ಗುಜರಾತ್ ರಾಜ್ಯದಲ್ಲಿ 5.847 ಹೆಕ್ಟೇರ್ ನಷ್ಟು ಅರಣ್ಯ ಭೂಮಿ ನಾಶವಾಗಲಿದೆ ಎಂಬ ಮಾಹಿತಿಯನ್ನೂ ಪರಿಸರ ಮತ್ತು ಅರಣ್ಯ ಸಚಿವಾಲಯ ಇದೇ ಸಂದರ್ಭದಲ್ಲಿ ನೀಡಿದೆ. ಈ ಯೋಜನೆಗಾಗಿ ಒಟ್ಟು 53,4767 ಮ್ಯಾನ್ ಗ್ರೋವ್ ಮರಗಳನ್ನು ಕಡಿಯಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next