Advertisement

ಧಾರವಾಡ: ಕೋವಿಡ್ 6925  ಪ್ರಕರಣಗಳು ; 4337 ಜನ ಗುಣಮುಖ ಬಿಡುಗಡೆ

12:18 AM Aug 14, 2020 | Hari Prasad |

ಧಾರವಾಡ: ಜಿಲ್ಲೆಯಲ್ಲಿ ಗುರುವಾರ ಮತ್ತೆ 257 ಜನರಿಗೆ ಸೋಂಕು ಧೃಡಪಟ್ಟಿದೆ.

Advertisement

ಇದರ ಜೊತೆಗೆ ಮತ್ತೆ 6 ಜನ ಸೋಂಕಿತರು ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿ ಸಂಬಂಧಿ ಸಾವಿನ ಸರಣಿ ಮುಂದುವರೆದಿದ್ದು, ಗುರುವಾರ 54 ವರ್ಷದ ಪುರುಷ, 45 ವರ್ಷದ ಪುರುಷ, 65  ಪುರುಷ, 82 ವರ್ಷದ ವೃದ್ದ ಪುರುಷ, 45 ವರ್ಷದ ಪುರುಷ, 70 ವರ್ಷದ ಪುರುಷ ಸೇರಿ ಆರು ಜನ ಸೋಂಕಿತರು ಮೃತಪಟ್ಟಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ನೆಗಡಿ, ಕಫ ಸೇರಿದಂತೆ ಇನ್ನಿತರ ಲಕ್ಷಣ ಹೊಂದಿದ್ದ ಈ ಸೋಂಕಿತರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 214 ಕ್ಕೆ ಏರಿದ್ದು, 34 ಜನ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಇನ್ನೂ 139 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಗುಣಮುಖರಾದವರ ಸಂಖ್ಯೆ 4337 ಕ್ಕೆ ಏರಿದೆ. ಇನ್ನೂ ಒಟ್ಟು ಪಾಸಿಟಿವ್ ಪ್ರಕರಣ 6925ಕ್ಕೆ ಏರಿದ್ದು, ಸದ್ಯ 2374 ಸಕ್ರಿಯ ಪ್ರಕರಣಗಳಿವೆ.

Advertisement

257 ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು:
ವ್ಯಾಪ್ತಿಯ ಶಿವಗಿರಿ ಮಂಜುನಾಥ ಕಾಲೋನಿ, ತೇಗೂರ ಗ್ರಾಮದ ಹೊಸ ಓಣಿ, ಹೊಸಯಲ್ಲಾಪುರ ಚಾವಣಿ ಓಣಿ,ಗರಗ ಗ್ರಾಮದ ಪ್ಯಾಟಿ ಓಣಿ,ಚನ್ನಬಸವೇಶ್ವರ ನಗರ, ಯಾದವಾಡ, ಹೆಬ್ಬಳ್ಳಿ ಗ್ರಾಮ, ರಾಜೀವ್ ಗಾಂಧಿ ನಗರ, ದೇಸಾಯಿ ಗಲ್ಲಿ, ಕಬ್ಬೇನೂರ, ನೆಹರು ನಗರ,ಮಣಿಕಂಠ ನಗರ,ಕಮಲಾಪುರ, ರಜತಗಿರಿ, ಮುಗದ ಗ್ರಾಮದ ಹತ್ತಿರ, ಸಂಗಮ ಹೊಟೆಲ್, ಇಂದಿರಾ ನಗರ, ಶ್ರೀರಾಮ ನಗರ,ಮಲಪ್ರಭ ನಗರ,ಸತ್ತೂರ,ಕಲಾಭವನದ ಹತ್ತಿರ,ಮದಿಹಾಳ, ಮನಕಿಲ್ಲಾ ಫಕೀರ್ ಗಲ್ಲಿ, ಜಯನಗರ, ಸಪ್ತಾಪೂರ, ಸಂಪಿಗೆ ನಗರ,ಮಾಳಮಡ್ಡಿ, ಭಾರತಿ ನಗರ,ಕೇಶವನಗರ, ಸಾಧೂನವರ ಎಸ್ಟೇಟ್ ಎದುರು, ಸಾಧನಕೇರಿ, ಬೇಲೂರಿನ ಎಲ್ ಪಿಜಿ ಪ್ಲ್ಯಾಂಟ್,ಕೆಲಗೇರಿ,ಸತ್ತೂರಿನ ರಾಜಾಜಿ ನಗರ,ಕಣವಿ ಹೊನ್ನಾಪುರ,ಯಾಲಕ್ಕಿ ಶೆಟ್ಟರ್ ಕಾಲೋನಿ,ಲೈನ್ ಬಜಾರ್,ಕಂಠಿಗಲ್ಲಿ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ, ರಾಯಾಪುರದಲ್ಲಿ ಸೋಂಕು ಧೃಡಪಟ್ಟಿದೆ.

ಹುಬ್ಬಳ್ಳಿ ತಾಲೂಕು: ವ್ಯಾಪ್ತಿಯ ಅರವಿಂದ ನಗರ,ಕರ್ಕಿಬಸವೇಶ್ವರ ನಗರ,ಮಂಜುನಾಥ ರಸ್ತೆ,ಹಳೇ ಹುಬ್ಬಳ್ಳಿಯ ಕೌಲಪೇಟ,ಕಟ್ನೂರ, ಕೇಶ್ವಾಪೂರ, ಗಂಗಾಧರ ನಗರ,ಕೋಟಿಲಿಂಗ ನಗರ,ನೂಲ್ವಿ,ಕಾರವಾರ ರಸ್ತೆಯ ಮಿಚಿಗನ್ ಕಂಪೌಡ್ ಜ್ಯೋತಿ ಬಿಲ್ಡಿಂಗ್, ರಾಮಲಿಂಗೇಶ್ವರ ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್, ವಿಮಾನ ನಿಲ್ದಾಣ,ಗದಗ ರಸ್ತೆಯ ಫೆಸಿಫಿಕ್ ಪಾರ್ಕ್,ವಿನಯ ಕಾಲೋನಿ ಪಾರಸವಾಡಿ,ಶಕ್ತಿ ಹೊಟೆಲ್,ಬೆಂಗೇರಿ,ಅಮೃತ ನಗರ ಹೊಟೆಲ್, ಕೆರಿ ಓಣಿ,ಆನಂದ ನಗರ,ಉಣಕಲ್, ಕಿಮ್ಸ್ ಆಸ್ಪತ್ರೆ, ವೀರಾಪುರ ಓಣಿ,ವಿದ್ಯಾನಗರ, ಆರ್ ಎನ್ ಶೆಟ್ಟಿ ರಸ್ತೆಯ ವಿಮಲೇಶ್ವರ ನಗರ,ಹಳೇ ಹುಬ್ಬಳ್ಳಿ, ಸೆಟ್ಲಮೆಂಟ್ ದೊಡಮನಿ ಕಾಲೋನಿ,ಶ್ರೀನಗರ, ವಿದ್ಯಾನಗರದ ಬೃಂದಾವನ ಲೇಔಟ್, ಗಿರಣಿಚಾಳ, ತಾಜನಗರ, ಭೈರಿದೇವರಕೊಪ್ಪ, ವಿನಾಯಕ ನಗರ,ಲಿಂಗರಾಜ ನಗರ,ಸಿದ್ಧಾರೂಢ ಮಠ,ನ್ಯೂ ಇಂಗ್ಲಿಷ್ ಶಾಲೆ ಹತ್ತಿರ,ಕೆಎಚ್ ಬಿ ಕಾಲೋನಿಯ ಚನ್ನಪೇಟೆ ರಸ್ತೆ,ಅಕ್ಷಯ್ ಪಾರ್ಕ್, ಶಿವಲಿಲಾ ನರ್ಸಿಂಗ್ ಹೋಮ್ ಹತ್ತಿರ,ಕುಂಬಾರ ಓಣಿ,ಅಕ್ಕಿಹೊಂಡ ಹೂಗಾರ ಓಣಿ,ಶ್ರೀನಿವಾಸ ನಗರ,ಆರ್ ಎನ್ ಶೆಟ್ಟಿ ರಸ್ತೆಯ ಭರತ ನಗರ,ವಿಶ್ವೇಶ್ವರ ನಗರ,ಅರವಿಂದ ನಗರ,ರಾಜೀವ್ ನಗರ, ಆನಂದ ನಗರದ ಘೋಡಕೆ ಪ್ಲಾಟ್,ಮಂಟೂರ ರಸ್ತೆ, ನವನಗರದ ಕ್ಯಾನ್ಸರ್ ಆಸ್ಪತ್ರೆ, ನಂದಿ ಬಡಾವಣೆ,ಶಾಂತಿ ಕಾಲೋನಿ, ಎನ್ ಎಸ್ ಎಸ್ ಓ ಭವನ, ಪಂಚಾಕ್ಷರಿ ನಗರ,ವಿದ್ಯಾನಗರದ ಶಿರೂರ ಪಾರ್ಕ್, ಗೋಕುಲ ರಸ್ತೆಯ ಜೆ.ಪಿ ನಗರ,ವಾಲ್ಮೀಕಿ ಕಾಲೋನಿ, ದೇವಾಂಗಪೇಟೆ, ಕೇಶ್ವಾಪೂರ,ಪ್ರಿಯದರ್ಶಿನಿ ಕಾಲೋನಿ, ಮಂಟೂರ ರಸ್ತೆ, ಗುಜರಾತ್ ಭವನ,ಕಿಮ್ಸ್ ಆಸ್ಪತ್ರೆ, ಕಮರಿಪೇಟೆ, ಆದರ್ಶ ನಗರ,ವಿಜಯ ನಗರದಲ್ಲಿ ಸೋಂಕು ಪತ್ತೆಯಾಗಿದೆ.

ಕಲಘಟಗಿ: ಮುಕ್ಕಲ್, ಶೀಗಿಗಟ್ಟಿ ತಾಂಡಾ, ದೇವಲಿಂಗಿಕೊಪ್ಪ, ಗಂಜಿಗಟ್ಟಿ ಹೊಸೂರ ಓಣಿ, ಕುಂದಗೋಳ ತಾಲೂಕಿನ ಯಲಿವಾಳ,ಶಿರೂರ,ಸ್ಟೇಷನ್ ರಸ್ತೆ ಕಳಸ, ಹಿರೇನರ್ತಿ, ಗುಡೇನಕಟ್ಟಿ, ನಾಡಿಗೇರ ಓಣಿ, ಕುಲಕರ್ಣಿ ಗಲ್ಲಿ, ಕೊಡ್ಲಿವಾಡ, ಬರದ್ವಾಡ, ಬೆನಕನಹಳ್ಳಿ, ಸಂಶಿ ಗ್ರಾಮ.

ನವಲಗುಂದ ತಾಲೂಕಿನಲ್ಲಿ ಶಲವಡಿ, ತಲೆಮೊರಬ, ಬೆಳವಟಗಿ, ಗುಮ್ಮಗೋಳದ ಪಂಚಾಯತ ಓಣಿ,ಶಿರಕೋಳ, ಅಣ್ಣಿಗೇರಿಯ ವಿದ್ಯಾನಗರ,ದೇಶಪಾಂಡೆ ನಗರ,ಜಾಡಗೇರ ಓಣಿ,ದೇಸಾಯಿ ಓಣಿ,ಹೊರಕೇರಿ ಓಣಿ,ಎಸ್ ಬಿ ಐ ಬ್ಯಾಂಕ್ ಹತ್ತಿರ, ಮಜ್ಜಿಗುಡ್ಡ,ಹೊಸಪೇಟೆ ಓಣಿ,ನಲವಡಿ,ಮಣಕವಾಡ, ಅಳ್ನಾವರದ ಅಶೋಕ ರಸ್ತೆ,ಡೋರಿ ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡಿದೆ‌.

ಇದಲ್ಲದೇ ಉತ್ತರ ಕನ್ನಡ ಜಿಲ್ಲೆ: ದಾಂಡೇಲಿಯ ಡಬ್ಲ್ಯೂ ಸಿಪಿಎಂ ಒಲ್ಡ್ ಸ್ಟಾಪ್, ಮಾದನಹಳ್ಳಿ,ಶಿರಸಿ, ಮುಂಡಗೋಡ ಸರ್ಕಾರಿ ಆಸ್ಪತ್ರೆ,ನಂದಿಕಟ್ಟಿ,ಹಳಿಯಾಳದ ಕಸಬಾಗಲ್ಲಿ,

ಗದಗ ಜಿಲ್ಲೆಯ ಬಾಗೇವಾಡಿ,ಇಟಗಿ,ಬೆಟಗೇರಿಯ ರಂಗದೂತ ನಗರ, ನರಗುಂದ, ಶಿರಹಟ್ಟಿಯ ಗೋಜನೂರ,ಲಕ್ಷ್ಮೇಶ್ವರದ  ಕುಂಬಾರ ಓಣಿ, ಹಾವೇರಿ ಜಿಲ್ಲೆಯ ದೇಸಾಯಿ ಗಲ್ಲಿ ಸಮೀಪ ಗರಡಿಮನೆ, ಹತಿಮುತ್ತೂರ, ಲಿಂಗಹಳ್ಳಿ, ಮಂಜುನಾಥ ನಗರ, ಶಿಗ್ಗಾಂವ ಸರ್ಕಾರಿ ಆಸ್ಪತ್ರೆ, ಶ್ರೀನಿವಾಸ ಟಾಕೀಜ್, ಕಮಲ್ ಬಂಗಾಲಿ ಓಣಿ, ರಾಣೆಬೆನ್ನೂರ ಸ್ಟೇಷನ್ ರಸ್ತೆಯ ಗಾಂಧಿ ಗಲ್ಲಿ, ಬ್ಯಾಡಗಿ,ಹಾನಗಲ್, ಹಲಸೂರ ಗ್ರಾಮ, ಹಾವನೂರ, ಮನಕೂರ, ಮಾದಾಪೂರ, ಗುಡೇನಹಳ್ಳಿ, ಹಿರೇಕೆರೂರ ಯಲಿವಾಳ, ಹಾನಗಲ್, ಬ್ಯಾಡಗಿಯ ಹಳೆಯ ಮೆಣಸಿನಕಾಯಿ ಪ್ಯಾಟಿ,ಬಸವೇಶ್ವರ ನಗರ, ವಿದ್ಯಾನಗರ, ಹೊಸರಿತ್ತಿ,

ಬಾಗಲಕೋಟೆಯ ಮುಧೋಳದ ಮಳಲಿ, ಬೆಳಗಾವಿ ಜಿಲ್ಲೆಯ ಬಾಂದೂರ ಗಲ್ಲಿ,ರಾಮದುರ್ಗ, ಚಾಲುಕ್ಯ ಗೌಡರ ಓಣಿ,ಸವದತ್ತಿ ತಾಲೂಕಿನ ಇನಾಮಹೊಂಗಲ, ಮುನವಳ್ಳಿ, ಬಜಾರ್ ಓಣಿ, ಗೋಕಾಕ್ ನಿಂದ ಜಿಲ್ಲೆಗೆ ಬಂದವರಲ್ಲಿ ಸೋಂಕು ಧೃಡಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next